ಆ್ಯಪ್ನಗರ

‘ಹಸುಗಳಿಗೆ ಕಡ್ಡಾಯವಾಗಿ ವಿಮೆ ಮಾಡಿಸಬೇಕು’

ಕೆಂಚನಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘಕ್ಕೆ ಜೆಡಿಎಸ್‌ ಬೆಂಬಲಿತ ಅಭ್ಯರ್ಥಿ ಬಾಲಕೃಷ್ಣ ಅವಿರೋಧ ಆಯ್ಕೆಯಾಗಿದ್ದಾರೆ...

Vijaya Karnataka 6 Jan 2019, 5:00 am
ಮಾಗಡಿ: ಕೆಂಚನಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘಕ್ಕೆ ಜೆಡಿಎಸ್‌ ಬೆಂಬಲಿತ ಅಭ್ಯರ್ಥಿ ಬಾಲಕೃಷ್ಣ ಅವಿರೋಧ ಆಯ್ಕೆಯಾಗಿದ್ದಾರೆ.
Vijaya Karnataka Web cows must be mandatory for cows
‘ಹಸುಗಳಿಗೆ ಕಡ್ಡಾಯವಾಗಿ ವಿಮೆ ಮಾಡಿಸಬೇಕು’


ತಾಲೂಕಿನ ಕೆಂಚನಹಳ್ಳಿ ಎಂಪಿಸಿಎಸ್‌ ಅಧ್ಯಕ್ಷ ಸ್ಥಾನದ ಅವಧಿ ಪೂರ್ಣಗೊಂಡಿದ್ದ ಹಿನ್ನೆಲೆಯಲ್ಲಿ ಶನಿವಾರ ಚುನಾವಣೆ ನಿಗದಿಪಡಿಸಿದ್ದು, ಅಧ್ಯಕ್ಷ ಸ್ಥಾನಕ್ಕೆ ಬಾಲಕೃಷ್ಣ ಹೊರತು ಪಡಿಸಿ ಬೇರೆ ಯಾರೂ ನಾಮಪತ್ರ ಸಲ್ಲಿಸದ ಕಾರಣ ಅವಿರೋಧವಾಗಿ ಅಧ್ಯಕ್ಷ ರ ಆಯ್ಕೆಯಾಗಿದೆ ಎಂದು ಚುನಾವಣಾಧಿಕಾರಿ ವೆಂಕಟೇಶ್‌ ತಿಳಿಸಿದ್ದಾರೆ.

ನೂತನ ಅಧ್ಯಕ್ಷ ಬಾಲಕೃಷ್ಣ ಸುದ್ದಿಗಾರರೊಂದಿಗೆ ಮಾತನಾಡಿ, ''ಹಾಲು ಉತ್ಪಾದನೆ ರೈತರ ಜೀವನಾಡಿಯಾಗಿದ್ದು, ಗ್ರಾಮದ ಬಹಳಷ್ಟು ಕುಟುಂಬಗಳಲ್ಲಿ ಕೃಷಿಯ ಜತೆಗೆ ಹೈನುಗಾರಿಕೆಯನ್ನು ಉಪ ಕಸುಬನ್ನಾಗಿಸಿಕೊಂಡಿದ್ದು, ಹಾಲು ಉತ್ಪಾದಕರು ಪ್ರತಿ ಹದಿನೈದು ದಿನಕ್ಕೊಮ್ಮೆ ಹಣವನ್ನು ಪಡೆಯುತ್ತಿದ್ದಾರೆ. ಹಾಲು ಉತ್ಪಾದಕರಿಗೆ ಸರಕಾರ ಹಾಗೂ ಬಮುಲ್‌ ವತಿಯಿಂದ ಅನೇಕ ಸೌಲಭ್ಯಗಳು ಲಭಿಸುತ್ತಿವೆ. ಈ ಎಲ್ಲಾ ಸೌಲಭ್ಯಗಳನ್ನು ಸದ್ಬಳಕೆ ಮಾಡಿಕೊಳ್ಳಬೇಕು,'' ಎಂದು ತಿಳಿಸಿದರು.

''ಹಾಲು ಉತ್ಪಾದಕರು ಹಸುಗಳ ಆರೋಗ್ಯಕ್ಕೆ ಹೆಚ್ಚಿನ ಗಮನಹರಿಸುವುದರ ಜತೆಗೆ ಕೊಟ್ಟಿಗೆಯನ್ನು ಸ್ವಚ್ಛವಾಗಿಟ್ಟುಕೊಂಡು, ಕೊಟ್ಟಿಗೆಯಲ್ಲಿ ಮ್ಯಾಟ್‌ ಉಪಯೋಗಿಸಬೇಕು. ಒಂದೊಂದು ಹಸುವೂ 50 ಸಾವಿರಕ್ಕೂ ಹೆಚ್ಚಿನ ಬೆಲೆ ಬಾಳುತ್ತದೆ. ಹಸು ಅನಾರೋಗ್ಯಕ್ಕಿಡಾಗಿ ಮರಣ ಹೊಂದಿದರೆ ರೈತರಿಗೆ ಸಾವಿರಾರೂ ರೂ. ನಷ್ಟವಾಗುವುದರಿಂದ ಹಾಲು ಉತ್ಪಾದಕರು ಕಡ್ಡಾಯವಾಗಿ ಹಸುಗಳಿಗೆ ವಿಮೆ ಮಾಡಿಸಬೇಕು,'' ಎಂದು ತಿಳಿಸಿದರು.

ಗ್ರಾಪಂ ಸದಸ್ಯ ಸುಧೀಂದ್ರ ಮಾತನಾಡಿ, ''ಕೆಂಚನಹಳ್ಳಿ ಎಂಪಿಸಿಎಸ್‌ನಲ್ಲಿ ಒಟ್ಟು 9 ನಿರ್ದೇಶಕರಿದ್ದು, ಅದರಲ್ಲಿ 6 ಮಂದಿ ಜೆಡಿಎಸ್‌ ಬೆಂಬಲಿತ ಸದಸ್ಯರಿದ್ದಾರೆ. ಇಂದು ನಡೆದ ಚುನಾವಣೆಯಲ್ಲಿ ಜೆಡಿಎಸ್‌ ಬೆಂಬಲಿತ ಬಾಲಕೃಷ್ಣ ಅಧ್ಯಕ್ಷ ರಾಗಿ ಅವಿರೋಧ ಆಯ್ಕೆಯಾಗಿದ್ದಾರೆ,'' ಎಂದು ಹೇಳಿದರು.

ನಿರ್ದೇಶಕರಾದ ಪುಟ್ಟರಾಜು, ಕೆಂಚಪ್ಪ, ರಮೇಶ್‌, ಕೃಷ್ಣಪ್ಪ, ರಂಗಸ್ವಾಮಿ, ರಾಮಕೃಷ್ಣಯ್ಯ, ಗಿರೀಶ್‌ಮ ನಟರಾಜ್‌, ಮನು, ಮೋಹನ್‌, ತಿಮ್ಮರಾಯಪ್ಪ, ಹನುಮಂತರಾವ್‌, ಕೆ.ಆರ್‌.ಧನಂಜಯ್ಯ, ಶಿವಣ್ಣ, ಕಲ್ಯಾಣ್‌, ಕಾರ‍್ಯದರ್ಶಿ ಶೇಖರ್‌, ಮತ್ತಿತರರು ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ