ಆ್ಯಪ್ನಗರ

ಆನೆಗಳ ದಾಳಿಯಿಂದ ಬೆಳೆ ಹಾನಿ: ಪರಿಹಾರಕ್ಕೆ ಒತ್ತಾಯ

ತಾಲೂಕಿನ ಕಸಬಾ ಹೋಬಳಿಯ ಮೋಳೆದೊಡ್ಡಿ ಗ್ರಾಮದಲ್ಲಿ ಆನೆಗಳು ದಾಳಿ ಮಾಡಿ ಬೆಳೆ ನಷ್ಟ ಉಂಟು ಮಾಡಿವೆ...

Vijaya Karnataka 10 Oct 2018, 3:33 pm
ಚನ್ನಪಟ್ಟಣ: ತಾಲೂಕಿನ ಕಸಬಾ ಹೋಬಳಿಯ ಮೋಳೆದೊಡ್ಡಿ ಗ್ರಾಮದಲ್ಲಿ ಆನೆಗಳು ದಾಳಿ ಮಾಡಿ ಬೆಳೆ ನಷ್ಟ ಉಂಟು ಮಾಡಿವೆ.
Vijaya Karnataka Web crop damage from elephant attack tension to solve
ಆನೆಗಳ ದಾಳಿಯಿಂದ ಬೆಳೆ ಹಾನಿ: ಪರಿಹಾರಕ್ಕೆ ಒತ್ತಾಯ


ಮೋಳೆದೊಡ್ಡಿ ಗ್ರಾಮದ ಗೋಪಿ ಎಂಬುವವರಿಗೆ ಸೇರಿದ ಅರ್ಧ ಎಕರೆಯಲ್ಲಿ ಹಾಕಿದ್ದ 20ಕ್ಕೂ ಹೆಚ್ಚು ತೆಂಗಿನ ಸಸಿಗಳು ಮತ್ತು ಟೊಮೇಟೊ ಬೆಳೆ ಹಾಗೂ ಹೂಕೋಸಿನ ಬೆಳೆಯನ್ನೆಲ್ಲಾ ನಾಶ ಪಡಿಸಿದ್ದು, ಇದರಿಂದ ಅವರಿಗೆ 50 ಸಾವಿರ ರೂ. ಬೆಳೆ ನಷ್ಟ ಉಂಟಾಗಿದ್ದು, ಈ ಬಗ್ಗೆ ಅರಣ್ಯ ಇಲಾಖೆ ಬೆಳೆ ಕಳೆದುಕೊಂಡ ರೈತನಿಗೆ ಪರಿಹಾರ ಕೊಡಿಸಿಕೊಡಲು ಕ್ರಮ ಕೈಗೊಳ್ಳಬೇಕಿದೆ ಎಂದು ಗ್ರಾಮಸ್ಥ ತಿಮ್ಮೇಗೌಡ ಆಗ್ರಹಿಸಿದ್ದಾರೆ.

ಕಾಡಾನೆಗಳು ಬಿ.ವಿ. ಹಳ್ಳಿಯ ಶ್ರೀಮುತ್ತರಾಯಸ್ವಾಮಿ ಬೆಟ್ಟದ ಕಡೆಯಿಂದ ಆಗಮಿಸಿ, ಮಲ್ಲಂಗೆರೆ, ದೊಡ್ಡನಹಳ್ಳಿ ಅರಣ್ಯ ಪ್ರದೇಶದ ಮೂಲಕ ಮೋಳೆದೊಡ್ಡಿ ಗ್ರಾಮದ ರೈತರ ಗೋಪಿ ಅವರ ಟೊಮೇಟೊ ಹಾಕಿದ್ದ ಜಮೀನಿಗೆ ನುಗ್ಗಿದ್ದ ಆನೆಗಳ ಹಿಂಡು ಅದರಲ್ಲಿದ್ದ ತೆಂಗಿನ ಗಿಡ ಮತ್ತು ಟೊಮೇಟೊ ಬೆಳೆಯನ್ನು ತುಳಿದು ತಿಂದು ಹಾಕಿವೆ.

ತಾಲೂಕಿನ ಅನೇಕ ಕಡೆಗಳಲ್ಲಿ ಕಾಡಾನೆಗಳ ಹಿಂಡು ದಾಳಿ ಮಾಡಿದ್ದು, ರೈತರು ವರ್ಷ ಪೂರ್ತಿ ಕಷ್ಟ ಪಟ್ಟು ಬೆಳೆಯುವ ಬೆಳೆಯನ್ನೆಲ್ಲ ನಾಶಪಡಿಸಿವೆ. ಇದರ ಬಗ್ಗೆ ಕ್ರಮ ಕೈಗೊಳ್ಳಬೇಕಾದ ಅರಣ್ಯ ಇಲಾಖೆ ಅಧಿಕಾರಿಗಳು ಮಾತ್ರ ನಮಗೂ, ಇದಕ್ಕೂ ಸಂಬಂಧವೇ ಇಲ್ಲ ಎನ್ನುವಂತೆ ಮೌನಕ್ಕೆ ಶರಣಾಗಿದ್ದಾರೆ. ನಷ್ಟಕ್ಕೊಳಗಾದವರಿಗೆ ಬೆಳೆ ಪರಿಹಾರವಾಗಿ ಮಾರುಕಟ್ಟೆ ದರದಂತೆ ನೀಡದೆ, ಹಳೆಯ ಕೃಷಿ ಪದ್ಧತಿಯಲ್ಲಿ ಬೆಲೆ ನಿಗದಿಗೊಳಿಸಿದ್ದು, ಇದು ಅವೈಜಾನಿಕವಾಗಿದೆ. ಇದು ರೈತರು ಮಾಡಿದ ಮೂಲ ಖರ್ಚಿಗೂ ಸಾಲದಾಗಿದೆ ಎಂದು ರೈತರು ಆರೋಪಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ