ಆ್ಯಪ್ನಗರ

ರೈತರ ವಿರುದ್ಧ ಪೊಲೀಸರನ್ನು ಎತ್ತಿಕಟ್ಟುವ ಉದ್ದೇಶ ಸರಕಾರಕ್ಕಿಲ್ಲ: ಡಿಸಿಎಂ ಅಶ್ವತ್ಥನಾರಾಯಣ

ಕೇಂದ್ರ ಜಾರಿಗೆ ತಂದಿರುವ ಕೃಷಿ ಕಾಯಿದೆಗಳನ್ನು ಹಿಂಪಡೆಯುವಂತೆ ಆಗ್ರಹಿಸಿ ನಡೆಯುತ್ತಿರುವ ರೈತರ ಪ್ರತಿಭಟನೆಗೆ ಪ್ರತಿಕ್ರಿಯಿಸಿರುವ ಉಪಮುಖ್ಯಮಂತ್ರಿ ಡಾ ಸಿಎನ್‌ ಅಶ್ವತ್ಥನಾರಾಯಣ, ರೈತರು ತಮ್ಮ ಪ್ರತಿಭಟನೆಯನ್ನು ಶಾಂತಿಯುತವಾಗಿ ನಡೆಸಲು ಅವಕಾಶ ಇದೆ. ಪೊಲೀಸರನ್ನು ರೈತರ ವಿರುದ್ಧ ಎತ್ತಿಕಟ್ಟುವ ಯಾವುದೇ ಉದ್ದೇಶ ಸರಕಾರಕ್ಕಿಲ್ಲ ಎಂದರು.

Vijaya Karnataka Web 26 Jan 2021, 11:33 am

ಹೈಲೈಟ್ಸ್‌:


* ಶಾಂತಿಯುತವಾಗಿ ರೈತರು ಪ್ರತಿಭಟಿಸಲು ಅವಕಾಶವಿದೆ ಎಂದ ಅಶ್ವತ್ಥನಾರಾಯಣ
* ರಾಮನಗರದಲ್ಲಿ ನೂತನ ಕೃಷಿ ಕಾಯ್ದೆ ರೈತರ ಪರವಾಗಿಯೇ ಇದೆ ಎಂದ ಡಿಸಿಎಂ
* ರೈತರ ವಿರುದ್ಧ ಪೊಲೀಸರನ್ನು ಎತ್ತಿಕಟ್ಟುವ ಉದ್ದೇಶ ಸರಕಾರಕ್ಕಿಲ್ಲ ಎಂದ ಉಪಮುಖ್ಯಮಂತ್ರಿ
ಹೈಲೈಟ್ಸ್‌ ಮಾತ್ರವೇ ಓದಲು ಆ್ಯಪ್‌ ಡೌನ್‌ಲೋಡ್‌ ಮಾಡಿ
Vijaya Karnataka Web CN Ashwath Narayana
ಡಾ.ಸಿಎನ್‌ ಅಶ್ವತ್ಥನಾರಾಯಣ, ಉಪ ಮುಖ್ಯಮಂತ್ರಿ (ಸಂಗ್ರಹ ಚಿತ್ರ)
ರಾಮನಗರ: ರೈತರು ತಮ್ಮ ಪ್ರತಿಭಟನೆಯನ್ನು ಶಾಂತಿಯುತವಾಗಿ ನಡೆಸಲು ಅವಕಾಶ ಇದೆ. ಟ್ರಾಕ್ಟರ್ ರ‍್ಯಾಲಿಗೆ ಅವಕಾಶ ಇಲ್ಲ ಎಂಬುದನ್ನು ಗೃಹ ಇಲಾಖೆ ಹೇಳಿದೆ ಎಂದು ಉಪಮುಖ್ಯಮಂತ್ರಿ ಡಾ.ಸಿಎನ್‌ ಅಶ್ವತ್ಥನಾರಾಯಣ ಹೇಳಿದ್ದಾರೆ.
ನಗರದಲ್ಲಿ ಮಂಗಳವಾರ ಮಾತನಾಡಿದ ಅವರು, ನೂತನ ಕೃಷಿ ಕಾಯ್ದೆ ರೈತರ ಪರವಾಗಿಯೇ ಇದೆ. ಕಾಯ್ದೆಯನ್ನು ಎಲ್ಲರು ಸ್ವಾಗತಿಸಿದ್ದಾರೆ. ಹೀಗಾಗಿ ಪೊಲೀಸರನ್ನು ಎತ್ತಿಕಟ್ಟುವ ಉದ್ದೇಶ ನಮ್ಮ ಸರಕಾರಕ್ಕಿಲ್ಲ‌. ಎಚ್‌ಡಿ ಕುಮಾರಸ್ವಾಮಿ ಅನುಭವಸ್ಥರು. ಹಾಗಾಗೀ ಅವರು ಕೃಷಿ ಕಾಯ್ದೆಯನ್ನು ಒಪ್ಪಿದ್ದಾರೆ ಎಂದರು.

ಮಾರುಕಟ್ಟೆಯೇ ರೈತರ ಮೂಲ ಸಮಸ್ಯೆಯಾಗಿದೆ. ಈ ಮುಂಚೆಯು ಕಾಂಗ್ರೆಸ್ ಸರಕಾರ ಕಾಯ್ದೆ ತಿದ್ದುಪಡಿ ಮಾಡಿತ್ತು. ಅದು ಲೈಸನ್ಸ್ ಯೋಜನೆಯಾಗಿತ್ತು. ಕೆಲವರಿಗಷ್ಟೇ ಲೈಸನ್ಸ್ ಮೂಲಕ ಮಾರುಕಟ್ಟೆ ನಡೆಸಲಾಗಿತ್ತು. ನಮ್ಮ ಸರಕಾರ ಎಲ್ಲರಿಗು ಮುಕ್ತ ಅವಕಾಶ ನೀಡಿದೆ. ಕೆಲ ಸ್ಟಾರ್ಟ್ಅಪ್‌ಗಳಿಗೂ ಅವಕಾಶ ನೀಡಿದೆ ಎಂದು ಹೇಳಿದರು.
ರಾಮನಗರ: ಪೊಲೀಸರಿಂದ ಟ್ರಾಕ್ಟರ್‌ಗಳಿಗೆ ತಡೆ..! ಬಸ್‌ನಲ್ಲಿ ಬೆಂಗಳೂರು ಕಡೆ ಹೊರಟ ರೈತರುಕಾಂಟ್ಯಾಕ್ಟ್‌ ಫಾರ್ಮಿಂಗ್‌ ಹಳೆಯ ಯೋಜನೆ. ಮುಂದಿನ ದಿನಗಳಲ್ಲಿ ರೈತರಿಗೆ ಆಗುವ ಲಾಭಗಳನ್ನು ನೀವೇ ನೀಡಬೇಕು. ಸುಮ್ಮನೆ ಕಾಯ್ದೆಗಳ ಪರ ಅಪಪ್ರಚಾರ ನಡೆಸುತ್ತಿರುವುದು ಸತ್ಯವಲ್ಲ. ಜನಪರ ಹಾಗು ರೈತಪರ ಯೋಜನೆ ಇದಾಗಿದೆ ಎಂದರು.
ದೇವನಹಳ್ಳಿ: ರಾತ್ರಿಯೇ ಟ್ರ್ಯಾಕ್ಟರ್‌ಗಳು‌ ವಶಕ್ಕೆ..! ಕೆಲಸ ಮುಗಿಸಿ ತೆರಳುತ್ತಿದ್ದ ಟ್ರ್ಯಾಕ್ಟರ್‌ಗಳನ್ನು ಬಿಡದ ಪೊಲೀಸರುರಾಜ್ಯದಲ್ಲಿ ಖಾತೆ ಬದಲಾವಣೆ ನಡೆಯುತ್ತಿದೆ. ಕೆಲ ಒತ್ತಡಗಳಿಗೂ ಮಣಿದಿರುವುದು ಸತ್ಯ. ಸಿಎಂ ಎಲ್ಲರಿಗು ಸ್ಪಂದಿಸುವ ಮೂಲಕ ಎಲ್ಲರನ್ನು ಜತೆಗೆ ಕರೆದುಕೊಂಡು ಹೋಗುತ್ತಿದ್ದಾರೆ. ಆದರೆ, ಹೊರನೋಟಕ್ಕೆ ಬದಲಾವಣೆ ಸರಿ ಇಲ್ಲ ಎಂಬುದು ಕಾಣುತ್ತಿದೆ. ಆದರೆ, ಖಾತೆ ಬದಲಾವಣೆ ಅನಿವಾರ್ಯವೂ ಆಗಿದೆ ಎಂದು ಹೇಳಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ