ಆ್ಯಪ್ನಗರ

‘ಒಂದೇ ಒಂದು ಇಂಜೆಕ್ಷನ್‌ ಕೊಡ್ತೀನಿ ಸರ್.. ಸ್ವಲ್ಪ ಶರ್ಟ್‌ ಹಿಂದಕ್ಕೆ ಎಳ್ಕೊಳ್ಳಿ’; ಡಿಸಿಎಂಗೆ ಲಸಿಕೆ ನೀಡಿದ ನರ್ಸ್..!

ರಾಮನಗರ ಜಿಲ್ಲಾಸ್ಪತ್ರೆಗೆ ಬಂದ ಉಸ್ತುವಾರಿ ಸಚಿವ, ಡಿಸಿಎಂ ಅಶ್ವತ್ಥ್‌ ನಾರಾಯಣ್‌ರನ್ನು ಸ್ವಾಗತಿಸಿದ ಇಲಾಖೆ ಸಿಬ್ಬಂದಿಗಳು, ಸ್ಯಾನಿಟೈಸರ್ ಹಾಕಿ, ಕೆಲ ನಿಮಿಷಗಳ ಕಾಲ ವೈಟಿಂಗ್ ಚೇರ್‌ನಲ್ಲಿ‌ ಕೂರಿಸಿದರು. ಬಳಿಕ ಕೋವಿಡ್ ಲಸಿಕೆ ನೀಡುವ ಮುನ್ನ ಅಗತ್ಯ ಮುನ್ನೆಚರಿಕಾ ಕ್ರಮಗಳೊಂದಿಗೆ ವ್ಯಾಕ್ಸಿನ್‌ನ ಬಗ್ಗೆ ವಿವರಿಸಿದರು.

Vijaya Karnataka Web 9 Jan 2021, 7:43 am
ರಾಮನಗರ: ಬೆಳಗ್ಗೆ ರಾಮನಗರ ಜಿಲ್ಲಾಸ್ಪತ್ರೆಗೆ ಬಂದ ಉಸ್ತುವಾರಿ ಸಚಿವ, ಡಿಸಿಎಂ ಅಶ್ವತ್ಥ್‌ ನಾರಾಯಣ್‌ರನ್ನು ಸ್ವಾಗತಿಸಿದ ಇಲಾಖೆ ಸಿಬ್ಬಂದಿಗಳು, ಸ್ಯಾನಿಟೈಸರ್ ಹಾಕಿ, ಕೆಲ ನಿಮಿಷಗಳ ಕಾಲ ವೈಟಿಂಗ್ ಚೇರ್‌ನಲ್ಲಿ‌ ಕೂರಿಸಿದರು. ಬಳಿಕ ಕೋವಿಡ್ ಲಸಿಕೆ ನೀಡುವ ಮುನ್ನ ಅಗತ್ಯ ಮುನ್ನೆಚರಿಕಾ ಕ್ರಮಗಳೊಂದಿಗೆ ವ್ಯಾಕ್ಸಿನ್‌ನ ಬಗ್ಗೆ ವಿವರಿಸಿದರು.
Vijaya Karnataka Web Dr CN Ashwath Narayan


ಇನ್ನೊಂದು ವಾರದಲ್ಲಿ‌ ಕೋವಿಡ್ ಲಸಿಕೆ ಲಭ್ಯ: ಡಿಸಿಎಂ ಅಶ್ವಥ್‌ ನಾರಾಯಣ್

‘ಒಂದೇ ಒಂದು ಇಂಜೆಕ್ಷನ್ ನೀಡುತ್ತೇನೆ ಸರ್. ಭಯ ಪಡಬೇಡಿ. ಗಾಬರಿಯಾಗಬೇಡಿ. ಸ್ವಲ್ಪ ಶರ್ಟ್ ಅನ್ನು ಹಿಂದಕ್ಕೆ ಎಳೆದುಕೊಳ್ಳಿ. ಇಂಜೆಕ್ಷನ್ ನೀಡಿದ್ದೇನೆ ಸರ್, ಮೂವತ್ತು ನಿಮಿಷ ನಿಮ್ಮನ್ನು ಅಬ್ಸರ್ವೇಶನ್‌ನಲ್ಲಿ ಇಡಬೇಕು’ ಎಂದು ನರ್ಸ್ ಡಿಸಿಎಂಗೆ ಹೇಳಿದರು. ಅಂದಹಾಗೆ ಇದು, ನಿಜವಾದ ವ್ಯಾಕ್ಸಿನ್ ಅಲ್ಲ. ಕೋವಿಡ್ ಲಸಿಕೆ ಸಂಬಂಧ ಶುಕ್ರವಾರ ನಡೆದ ಡ್ರೈ ರನ್‌ನಲ್ಲಿ ಕಂಡು ಬಂದ ದೃಶ್ಯಗಳಿವು.

ಪಕ್ಷದಲ್ಲಿ ನಾನೇ ಸೂಪರ್‌ಮ್ಯಾನ್, ಸೂಪರ್‌ಪವರ್ ಅಂದ್ರೆ ಕೆಲಸ ಆಗಲ್ಲ’; ಡಿಸಿಎಂ ಹೀಗೆ ಹೇಳಿದ್ಯಾಕೆ?

ಹೀಗೆ, ಕೋವಿಡ್ ಲಸಿಕೆ ಕುರಿತು ನಡೆದ ಅಣಕು ಪ್ರದರ್ಶನದಲ್ಲಿ‌ ಅಶ್ವತ್ಥ್ ನಾರಾಯಣ್ ಭಾಗವಹಿಸಿದ್ದರು.‌ ಆಸ್ಪತ್ರೆಗೆ ಕಾಲಿಡುತ್ತಿದ್ದತೆ ಡಿಸಿಎಂ ಅವರನ್ನು ನೇರವಾಗಿ ಕೋವಿಡ್ ಲಸಿಕೆ ಹಾಕುವ ಕೊಠಡಿಗೆ ಕರೆದ್ಯೊಯ್ದ ಸಿಬ್ಬಂದಿಗಳು, ತಮ್ಮ ಸಿದ್ದಂತೆಗಳ ಬಗ್ಗೆ ವಿವರಿಸಿದರು. ಬಳಿಕ ನಿಮಗೆಲ್ಲ ವೇತನ ಆಗಿದೆಯೇ ಎಂದು ನರ್ಸಗಳ ಬಗ್ಗೆ ಕುಶಲೋಪರಿಸಿ ನಡೆಸಿದ ಸಚಿವರು, ಏನೇ ಸಮಸ್ಯೆ ಇದ್ದರೂ ನನ್ನ ಗಮನಕ್ಕೆ ತನ್ನಿ. ನಿಮಗೆ ಉತ್ತಮ ಆರೋಗ್ಯ ಸೇವೆ ದೊರೆಯುತ್ತಿದೆಯೇ, ಅಧಿಕಾರಿಗಳು, ಆಸ್ಪತ್ರೆ ಸಿಬ್ಬಂದಿಗಳು ನಿಮ್ಮ ಬಳಿ ಸೌಜನ್ಯವಾಗಿ ನಡೆದುಕೊಳ್ಳುತ್ತಿದ್ದಾರೆಯೇ ಎಂದು ರೋಗಿಗಳ ಕುಶಲೋಪರಿ ವಿಚಾರಿಸಿದರು.

ನಾಯಿಹೊಟ್ಟೆಯಲ್ಲಿ 10 ಕ್ಯಾನ್ಸರ್‌ಗಡ್ಡೆ ಪತ್ತೆ..! ವೈದ್ಯರಿಂದ ಯಶಸ್ವೀ ಶಸ್ತ್ರಚಿಕಿತ್ಸೆ..!

ಈ ವೇಳೆ ಜಿಲ್ಲಾಧಿಕಾರಿ ಎಂ.ಎಸ್.ಅಚರ್ನಾ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಸ್.ಗಿರೀಶ್, ಜಿಲ್ಲಾ ಆರೋಗ್ಯಧಿಕಾರಿ‌ ಡಾ.ನಿರಂಜನ್,‌ಡಿಎಚ್ ಒ ಡಾ.ಪದ್ಮ, ಜಿಲ್ಲಾ ಶಸ್ತ್ರ ಚಿಕಿತ್ಸಕ ಡಾ.ಶಶಿಧರ್ ಇದ್ದರು. ಬಳಿಕ ಜಿಲ್ಲೆಯಲ್ಲಿ ಕೋವಿಡ್ ಲಸಿಕೆ ನೀಡುವ ಸಂಬಂಧ ಮಾಹಿತಿ ಹಂಚಿಕೊಂಡು ಪ್ರವಾಸಿ ಮಂದಿರದಲ್ಲಿ ಆರೋಗ್ಯ ಇಲಾಖೆ ಸಿಬ್ಬಂದಿ ಜೊತೆ ಸಭೆ ನಡೆಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ