ಆ್ಯಪ್ನಗರ

ಜಲಾಮೃತ ಯೋಜನೆ ಅನುಷ್ಠಾನಕ್ಕೆ ಡಿಸಿ ಸೂಚನೆ

ಸಮುದಾಯಗಳ ಸಹಕಾರದೊಂದಿಗೆ ಸರಕಾರದ ಜಲಾಮೃತ ಯೋಜನೆ ಅನುಷ್ಠಾನವಾಗೊಳಿಸಬೇಕು ಎಂದು ಡಾ. ಕೆ. ರಾಜೇಂದ್ರ ಅಧಿಕಾರಿಗಳಿಗೆ ಸೂಚನೆ ನೀಡಿದರು.

Vijaya Karnataka 4 Jun 2019, 5:56 pm
ರಾಮನಗರ : ಸಮುದಾಯಗಳ ಸಹಕಾರದೊಂದಿಗೆ ಸರಕಾರದ ಜಲಾಮೃತ ಯೋಜನೆ ಅನುಷ್ಠಾನವಾಗೊಳಿಸಬೇಕು ಎಂದು ಡಾ. ಕೆ. ರಾಜೇಂದ್ರ ಅಧಿಕಾರಿಗಳಿಗೆ ಸೂಚನೆ ನೀಡಿದರು.
Vijaya Karnataka Web deputy commissioner notification for implementing water resources project
ಜಲಾಮೃತ ಯೋಜನೆ ಅನುಷ್ಠಾನಕ್ಕೆ ಡಿಸಿ ಸೂಚನೆ


ನಗರದ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಜಿಲ್ಲಾಡಳಿತ ಹಾಗೂ ಜಿಲ್ಲಾ ಪಂಚಾಯತ್‌ ವತಿಯಿಂದ ಆಯೋಜಿಸಲಾಗಿದ್ದ ಜಲಾಮೃತ ಯೋಜನೆ ಅನುಷ್ಠಾನ ಕುರಿತ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ''ಜಾಗತಿಕ ಹವಾಮಾನ ಬದಲಾವಣೆಯ ಪ್ರತಿಕೂಲ ಪರಿಣಾಮಗಳನ್ನು ಸತತ ಬರಗಾಲಗಳ ಮುಖಾಂತರ ಎದುರಿಸುತ್ತಿದ್ದೇವೆ. ಜಿಲ್ಲೆಯ ನಾಲ್ಕು ತಾಲೂಕುಗಳಲ್ಲಿನ ಕೆರೆಗಳನ್ನು ಪಟ್ಟಿ ಮಾಡಿ ಅದರ ಹೂಳು ತೆಗೆಯುವ ಹಾಗೂ ಪರಿಸರ ಅಭಿವೃದ್ಧಿ ಕೆಲಸಗಳನ್ನು ಮಾಡಬೇಕಿದೆ,'' ಎಂದರು.

ಹಸಿರುಕರಣ ಮಂತ್ರ: ''ಸರಕಾರ 2019ನ್ನು ಜಲವರ್ಷವೆಂದು ಘೋಷಿಸಿದ್ದು ಜಲಸಂರಕ್ಷಣೆ, ಜಲಸಾಕ್ಷರತೆ, ಜಲಮೂಲಗಳ ಪುನಶ್ಚೇತನ ಹಾಗೂ ಹಸಿರುಕರಣವನ್ನು ಕೇಂದ್ರವಾಗಿಟ್ಟುಕೊಂಡು ಜಲಾಮೃತ ಯೋಜನೆಯನ್ನು ಕೈಗೆತ್ತಿಕೊಂಡಿದೆ,'' ಎಂದು ಹೇಳಿದರು.

''ಜಲಾಮೃತ ಯೋಜನೆಯು ಸಮುದಾಯ ಆಧಾರಿತ ಚಳವಳಿಯಾಗಿದ್ದು ಎಲ್ಲಾ ವಿವಿಧ ಇಲಾಖೆ, ಶಾಲಾ ಕಾಲೇಜುಗಳು, ಖಾಸಗಿ ಸಂಸ್ಥೆಗಳು, ಸ್ಥಳೀಯ ಸಮುದಾಯಗಳು ಹಾಗೂ ಜಲ ಸಂರಕ್ಷಣೆ ಸಂಬಂಧಿತ ಸಂಘ ಸಂಸ್ಥೆಗಳೊಂದಿಗೆ ಅನುಷ್ಠಾನಗೊಳಿಸಲು ಉದ್ದೇಶಿಸಿದೆ. ಆದ್ದರಿಂದ ಆಯ್ಕೆ ಮಾಡಲಾದ ಖಾಸಗಿ ಸಂಸ್ಥೆಗಳು ಇನ್ನಿತರ ಚಿಕ್ಕ ಸಂಸ್ಥೆಗಳ ಸಹಕಾರದೊಂದಿಗೆ ನಾಲ್ಕು ತಾಲೂಕುಗಳಲ್ಲಿನ ಕೆರೆಗಳನ್ನು ಹೂಳು ತೆಗೆಯುವ ಹಾಗೂ ಕೆರೆಗಳ ಅಭಿವೃದ್ಧಿ ಪಡಿಸುವ ಕೆಲಸಗಳನ್ನು ಮಾಡಬೇಕಿದೆ,'' ಎಂದರು.

ಸಹಭಾಗಿತ್ವ ಕೆಲಸ: ''ಖಾಸಗಿ ಸಂಸ್ಥೆಗಳು ರಾಮನಗರ,ಚನ್ನಪಟ್ಟಣ, ಮಾಗಡಿ, ಕನಕಪುರ ಸೇರಿದಂತೆ ಎರಡು ತಾಲೂಕುಗಳಂತೆ ವಸಿಕೊಂಡು ಜಲಾಶಯನ ಪ್ರದೇಶಗಳನ್ನು ಗುರುತಿಸಿ ದೊಡ್ಡ ಕೆರೆಗಳ ಹೂಳು ತೆಗೆಯುವ ಕೆಲಸವನ್ನು ಜವಾಬ್ದಾರಿಯುತವಾಗಿ ಕಾರ್ಯ ನಿರ್ವಹಿಸಬೇಕು,'' ಎಂದು ತಿಳಿಸಿದರು.

''ವಿಶ್ವ ಪರಿಸರ ದಿನಾಚರಣೆಯ ಅಂಗವಾಗಿ ಎರಡು ಖಾಸಗಿ ಸಂಸ್ಥೆಗಳು ಸಣ್ಣ ಸಣ್ಣ ಖಾಸಗಿ ಸಂಸ್ಥೆಗಳೊಂದಿಗೆ ಸೇರಿ ಕೈಗಾರಿಕಾ ಪ್ರದೇಶಗಳಲ್ಲಿ, ರಸ್ತೆ ಬದಿಗಳಲ್ಲಿ ಸಸಿ ನೆಡುವ ಕೆಲಸಗಳನ್ನು ಮಾಡಬೇಕು ಇದು ಪರಿಸರವನ್ನು ಸುಂದರವಾಗಿ ಕಾಣುವಂತೆ ಮಾಡುತ್ತದೆ,'' ಎಂದರು.

ಜಿಲ್ಲಾ ಪಂಚಾಯತ್‌ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಪಿ.ಎಂ. ಮುಲ್ಲೈ ಮುಹಿಲನ್‌, ಹೆಚ್ಚುವರಿ ಜಿಲ್ಲಾಧಿಕಾರಿ ಬಿ.ಪಿ ವಿಜಯ್‌, ಜಿಲ್ಲಾ ಪಂಚಾಯತ್‌ ಉಪ ಕಾರ್ಯದರ್ಶಿ ಉಮೇಶ್‌ ಹಾಗೂ ನಾನಾ ಇಲಾಖೆಯ ಅಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ