ಆ್ಯಪ್ನಗರ

ಹಿಪ್ಪುನೇರಳೆ ತೋಟಕ್ಕೆ ಕೀಟ ಬಾಧೆ: ನಿಯಂತ್ರಣ ಹೇಗೆ? ಇಲ್ಲಿದೆ ಮಾಹಿತಿ

ಹಿಪ್ಪುನೇರಳೆ ತೋಟಕ್ಕೆ ಕೀಟ ಬಾಧೆ ಕಾಣಿಸಿಕೊಂಡಿದ್ದು ರೇಷ್ಮೆ ಸೊಪ್ಪು ಸಿಗದೇ ರೈತರು ಹೈರಾಣಾಗಿದ್ದಾರೆ. ಸರಿಯಾಗಿ ಸೊಪ್ಪು ಸಿಗದ ಕಾರಣ ರೈತರು ರೇಷ್ಮೆ ಬೆಳೆ ಪ್ರಮಾಣವನ್ನೇ ಕಡಿಮೆ ಮಾಡಿದ್ದಾರೆ. 200 ಮೊಟ್ಟೆ ಸಾಕುತ್ತಿದ್ದ ಜಾಗದಲ್ಲಿ ಕೇವಲ 50 ಮೊಟ್ಟೆ ಸಾಕಲಾಗುತ್ತಿದೆ

Vijaya Karnataka Web 22 Oct 2020, 10:10 am
ಸಾತನೂರು: ಹೋಬಳಿಯಾದ್ಯಂತ ಹಿಪ್ಪುನೇರಳೆ ತೋಟಕ್ಕೆ ಎಲೆಸುರುಳಿ ಕೀಟ ಬಾಧೆ ಕಾಣಿಸಿಕೊಂಡಿದ್ದು, ರೇಷ್ಮೆ ಸೊಪ್ಪು ಸಿಗದೇ ರೈತರು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ.
Vijaya Karnataka Web ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ


ಸಾತನೂರು, ಕೆಮ್ಮಾಳೆ, ಹಲಸೂರು, ಕಬ್ಬಾಳು ಸೇರಿದಂತೆ ಹಲವು ಗ್ರಾಮಗಳ ರೈತರು ರೇಷ್ಮೆ ಬೆಳೆಯನ್ನೇ ಅವಲಂಬಿಸಿದ್ದಾರೆ. ಇತ್ತೀಚೆಗೆ ಎಲೆಸುರುಳಿ ಕೀಟದ ಕಾಟ ವಿಪರೀತವಾಗಿದೆ. ಹಿಪ್ಪುನೇರಳೆ ಸೊಪ್ಪು ಪೂರ್ತಿ ಕೀಟಗಳ ಪಾಲಾಗುತ್ತಿದೆ. ಇದರಿಂದ ಬೆಳೆದ ಬೆಳೆ ಕೈಗೆ ಬಾರದೇ ಅನ್ನದಾತ ಬೀದಿಗೆ ಬೀಳುವಂತಾಗಿದೆ.
ಹಿಪ್ಪುನೇರಳೆ ಸೊಪ್ಪು: ಇದು ನಿಮ್ಮ ಆರೋಗ್ಯ ಮತ್ತು ಚರ್ಮಕ್ಕೆ ಹೇಗೆ ನೆರವಾಗುತ್ತದೆ

ಕೃಷಿ ಕಡಿಮೆ ಮಾಡಿದ ರೈತರು

ಸರಿಯಾಗಿ ಸೊಪ್ಪು ಸಿಗದ ಕಾರಣ ರೈತರು ರೇಷ್ಮೆ ಬೆಳೆ ಪ್ರಮಾಣವನ್ನೇ ಕಡಿಮೆ ಮಾಡಿದ್ದಾರೆ. 200 ಮೊಟ್ಟೆ ಸಾಕುತ್ತಿದ್ದ ಜಾಗದಲ್ಲಿ ಕೇವಲ 50 ಮೊಟ್ಟೆ ಸಾಕಲಾಗುತ್ತಿದೆ ಎಂದು ರೈತ ಸಿದ್ದರಾಜು ತಿಳಿಸಿದ್ದಾರೆ.

ಔಷಧಕ್ಕೆ ಬಗ್ಗದ ಕೀಟಗಳು
ಕೀಟಗಳಿಗೆ ಕೀಟನಾಶಕಗಳನ್ನು ಸಿಂಪಡಿಸುವಂತೆ ಇಲಾಖೆ ಅಧಿಕಾರಿಗಳು ಹೇಳುತ್ತಾರೆ. ಆದರೆ, ಅಧಿಕಾರಿಗಳು ಹೇಳಿದ ಯಾವುದೇ ಔಷಧ ಸಿಂಪಡಿಸಿದರೂ ಕೀಟಗಳು ನಿಯಂತ್ರಣಕ್ಕೆ ಬರುತ್ತಿಲ್ಲ. ಆದ್ದರಿಂದ ಇಲಾಖೆ ಅಧಿಕಾರಿಗಳು ತಕ್ಷಣವೇ ಸ್ಥಳ ಪರಿಶೀಲನೆ ನಡೆಸಿ, ಪರಿಹಾರ ಒದಗಿಸಬೇಕು ಎಂದು ರೈತರು ಒತ್ತಾಯಿಸಿದ್ದಾರೆ.
ಹಿಪ್ಪುನೇರಳೆ ಸೊಪ್ಪಿಗೆ ಮುದುಡುವ ರೋಗ

ನಿಯಂತ್ರಣ ಹೇಗೆ

ಬಾಧೆಗೊಳಗಾದ ಸಸ್ಯದ ಕುಡಿ ಭಾಗವನ್ನು ಶೇ.0.5ರ ಸಾಬೂನು ದ್ರಾವಣದಲ್ಲಿ ಅದ್ದಿ ಕೀಟಗಳನ್ನು ನಾಶಪಡಿಸಬಹುದು. ಶೇ.0.15ರ ಡಿಡಿವಿಪಿ ಕೀಟನಾಶಕವನ್ನು ಸಸ್ಯದ ತುದಿ ಭಾಗವು ಪೂರ್ಣ ಒದ್ದೆಯಾಗುವಂತೆ ಸಿಂಪಡಿಸಬೇಕು. ಪರತಂತ್ರ ಕೀಟವಾದ ಟ್ರೆತ್ರೖಕೋಗ್ರಾಮ ಖೈಲೋನಿಸ್‌ ಎಕರೆಗೆ 5 ಟ್ರೆತ್ರೖಕೋ ಹಾಳೆಗಳಂತೆ 7 ದಿನಗಳ ಅಂತರದಲ್ಲಿ 5 ಸಮಕಂತುಗಳಲ್ಲಿ ನೀಡಬೇಕು. ಔಷಧ ನೀಡಿದ 15 ದಿನಗಳ ನಂತರ ಸೊಪ್ಪನ್ನು ರೇಷ್ಮೆ ಹುಳುಗಳಿಗೆ ಉಪಯೋಗಿಸಬಹುದು ಎಂದು ತಜ್ಞರು ತಿಳಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ