ಆ್ಯಪ್ನಗರ

ಮೇಕೆದಾಟು ಪಾದಯಾತ್ರೆ ಬಗ್ಗೆ ಗುಸುಗುಸು ಮಾತುಕತೆ: ಮುಗುಳುನಗೆಯಲ್ಲಿ ಡಿಕೆಶಿ ಉತ್ತರ

ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ತಮ್ಮ ಸಂಗಡಿಗರೊಂದಿಗೆ ಮರಳೆಗವಿ ಮಠದಲ್ಲಿ ಮಧ್ಯಾಹ್ನದ ಊಟ ಮಾಡಿದ್ದಾರೆ. ಈ ವೇಳೆ ಡಿಕೆಶಿ, ಎಂಎಲ್‌ಸಿ ಎಸ್.ರವಿ, ಮಾಜಿ ಸಚಿವ ನರೇಂದ್ರಸ್ವಾಮಿ, ಮಠದ ಮುಮ್ಮಡಿ ಶಿವರುದ್ರ ಮಹಾ ಸ್ವಾಮೀಜಿಗಳು ಮಾತುಕತೆ ನಡೆಸಿದ್ದಾರೆ.

Vijaya Karnataka Web 26 Jan 2022, 5:21 pm
ರಾಮನಗರ: ರಾಜಕೀಯ ಸಂಘರ್ಷಕ್ಕೆ ಕಾರಣವಾಗಿದ್ದ ಮೇಕೆದಾಟು ಪಾದಯಾತ್ರೆ ಬಗ್ಗೆ ಕಾಂಗ್ರೆಸ್ ಪಾಳಯದಲ್ಲಿ ಒಳಗೊಳಗೆ ಚರ್ಚೆ ಶುರುವಾಗಿದ್ದು, ಕನಕಪುರ ಭಾಗದಲ್ಲಿ ಡಿಕೆ ಶಿವಕುಮಾರ್ ಬೆನ್ನುತಟ್ಟುವ ಕೆಲಸಗಳು ನಡೆದಿವೆ. ಇದರೊಂದಿಗೆ ಖುದ್ದು ಡಿಕೆಶಿ ಸಹ ಪಾದಯಾತ್ರೆ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಪಾದಯಾತ್ರೆಯ ಎಲ್ಲ ಆಯಾಮಗಳನ್ನು ಕಾಂಗ್ರೆಸ್ ನಾಯಕರೊಂದಿಗೆ ಮರಳೆಗವಿ ಮಠದ ಮುಮ್ಮಡಿ ಶಿವರುದ್ರ ಮಹಾ ಸ್ವಾಮೀಜಿ ಸಹ ಧ್ವನಿಗೂಡಿಸಿದ್ದಾರೆ.
Vijaya Karnataka Web ಮೇಕೆದಾಟು ಪಾದಯಾತ್ರೆ
ಮೇಕೆದಾಟು ಪಾದಯಾತ್ರೆ


ಮಂಗಳವಾರ ಕನಕಪುರಕ್ಕೆ ಆಗಮಿಸಿದ್ದ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ತಮ್ಮ ಸಂಗಡಿಗರೊಂದಿಗೆ ಮರಳೆಗವಿ ಮಠದಲ್ಲಿ ಮಧ್ಯಾಹ್ನದ ಊಟ ಮಾಡಿದ್ದಾರೆ. ಈ ವೇಳೆ ಡಿಕೆಶಿ, ಎಂಎಲ್‌ಸಿ ಎಸ್.ರವಿ, ಮಾಜಿ ಸಚಿವ ನರೇಂದ್ರಸ್ವಾಮಿ, ಮಠದ ಮುಮ್ಮಡಿ ಶಿವರುದ್ರ ಮಹಾ ಸ್ವಾಮೀಜಿಗಳು ಮಾತುಕತೆ ನಡೆಸಿದ್ದಾರೆ.

ಕಾಂಗ್ರೆಸ್ ಮೇಕೆದಾಟು ಪಾದಯಾತ್ರೆ ವಿರುದ್ಧ ನಾಲ್ಕನೇ FIR : 30 ಮಂದಿ ಮೇಲೆ ಕೇಸ್ ದಾಖಲು

ಯಾರು ಯಾರು ಏನು ಹೇಳಿದ್ದಾರೆ….

ಪಾದಯಾತ್ರೆ ಚೆನ್ನಾಗಿತ್ತು. ಸರಕಾರದ ವಿರೋದ ನಡುವೆ ಪಾದಯಾತ್ರೆ ಯಶಸ್ವಿಯಾಗಿದೆ. ಮಾಧ್ಯಮಗಳಲ್ಲಿ ಚರ್ಚೆ ನಡೆದಿವೆ. ಹೈಕೋರ್ಟ್ ಆದೇಶವು ಪ್ಲಸ್ ಆಯ್ತು. ಸರಕಾರದ ಕರ್ಫ್ಯೂ ನಡುವೆ ಜನರು ಸಹ ಪಾದಯಾತ್ರೆಯನ್ನು ಸವಾಲಾಗಿ ಸ್ವೀಕರಿಸಿದ್ದರು ಎಂದು ಎಂಎಲ್‌ಸಿ ಎಸ್.ರವಿ ಮೊದಲು ಮಾತು ಶುರು ಮಾಡಿದರು. ಇದಕ್ಕೆ ನರೇಂದ್ರ ಸ್ವಾಮಿ ಧ್ವನಿಗೂಡಿಸಿ, ಪಾದಯಾತ್ರೆ ರಾಮನಗರದಿಂದ ಹೊರಡಬೇಕಾದರೆ ನಾವು ಬೆಳಗ್ಗೆಯೇ ಬಂದಿದ್ದೆವು, ನಮ್ಮನ್ನು ಮಳವಳಿ ಗಡಿಯಲ್ಲಿ ಪೊಲೀಸರು ತಡೆದರು. ಮುಂದಿನ ಪಾದಯಾತ್ರೆಯಲ್ಲಿ ಇದಕ್ಕಿಂತ ಹೆಚ್ಚಿನ ಜನ ಸೇರುತ್ತಾರೆ ಎಂದರು.

ಮರಳೆಗವಿ ಮಠದ ಮುಮ್ಮಡಿ ಶಿವರುದ್ರ ಮಹಾಸ್ವಾಮಿಜಿ ಡಿಕೆಶಿಗೆ ಊಟ ಬಡಿಸಿದ್ದು ಮಾತ್ರವಲ್ಲದೇ, ಮೇಕೆದಾಟು ಬಗ್ಗೆ ಮಾತನಾಡಿ, ಪಾದಯಾತ್ರೆಯನ್ನು ಈ ರೀತಿ ಕರ್ನಾಟದಲ್ಲಿ ಯಾರು ಮಾಡಿಲ್ಲ. ಮುಂದೆ ಯಾರು ಮಾಡೋದು ಇಲ್ಲ. ನೀವು ಮಾತ್ರ ಎಲ್ಲ ನಿದ್ದೆ ಗೆಡಿಸಿದ್ದೀರಿ? ಹೀಯಾಳಿಸಿ ಮಾತನಾಡಿದ್ದವರಿಗೆಲ್ಲ ಉತ್ತರ ಕೊಟ್ಟಿದ್ದೀರಿ. ಎಲ್ಲ ನಾಯಕರು ನಿಮ್ಮ ನೆನಪು ಮಾಡಿಕೊಂಡಿದ್ದರು. ಇದು ನಿಮ್ಮ ಶಕ್ತಿ. ನಿಮ್ಮ ದೈವ ಶಕ್ತಿಯು ಸಹ ಕೆಲಸ ಮಾಡುತ್ತಿದೆ. ನಾನು ವೇದಿಕೆ ಮೇಲೆ ಇದ್ದಾಗ ಸಿದ್ದರಾಮಯ್ಯ ಸಹ ಮಾತನಾಡುತ್ತಿದ್ದರು . ಡಿಕೆಶಿ ಹಠವಾದಿ. ಯಾವುದೇ ಕಾರಣಕ್ಕೂ ಪಾದಯಾತ್ರೆ ಕೈ ಬಿಡುವುದಿಲ್ಲ ಎಂದು ಸಿದ್ದರಾಮಯ್ಯ ಸಹ ನನಗೆ ಹೇಳಿದ್ದರು ಎಂದರು.

ಈ ಎಲ್ಲ ಮಾತುಗಳಿಗು ಮುಗುಳುನಗೆಯನ್ನೆ ಬೀರುತ್ತಿದ್ದ ಡಿಕೆಶಿ, ನಾನು ಹೇಳ್ತಿನಿ ಕೇಳು. ರಾಮನಗರದಿಂದ ಬೆಂಗಳೂರಿಗೆ ಪಾದಯಾತ್ರೆ ಶುರುವಾಗಬೇಕಾದರೆ, ಲಾಸ್ಟ್ ಟೈಂಗಿಂತ ಹೆಚ್ಚಿನ ಜನ ಮಂಡ್ಯದಿಂದಲ್ಲೇ ಬರುತ್ತಾರೆ. ನದಿಯೋಳಗೆ ವೇದಿಕೆ ನಿರ್ಮಿಸಲು ಯಾರಿಂದಲ್ಲೂ ಸಾಧ್ಯವಾಗಲಿಲ್ಲ, ನಾನು ಮಾಡಿದ್ದೆನೆ. ಎಲ್ಲ ನಾಯಕರು ನನ್ನ ಕ್ಷೇತ್ರಕ್ಕೆ ಬಂದಿದ್ದು ನನ್ನ ಪುಣ್ಯಘಿ. ಬೇರೆ ನಾಯಕರಿಗೆ ಈ ರೀತಿ ಸಾಥ್ ಸಿಗುತ್ತಿರಲಿಲ್ಲ ಎಂದರು.

ವೈದ್ಯಕೀಯ ಕಾಲೇಜು, ರಾಜೀವ್ ಗಾಂಧಿ ಹೆಲ್ತ್ ವಿವಿಗೆ ಮಾರ್ಚ್ ತಿಂಗಳಿನಲ್ಲಿ ಸಿಎಂ ಚಾಲನೆ : ಅಶ್ವತ್ಥ ನಾರಾಯಣ

ಈ ವೇಳೆ ಸ್ವಾಮೀಜಿ ಮಾತಿನ ಮಧ್ಯೆ, ಮುಂದೆ ನೀವು ಅಧಿಕಾರಕ್ಕೆ ಬರುತ್ತೀರಾ ಎಂದು ಡಿಕೆಶಿಯನ್ನು ಪ್ರಶ್ನಿಸಿದರು. ಇದಕ್ಕೆ ಹೌದು ಎಂದು ಡಿಕೆಶಿ ತಲೆಯಾಡಿಸಿದರು. ಇದಲ್ಲದೇ, ಎಸ್.ರವಿ ಸಹ ಹೈಕೋರ್ಟ್‌ನ ಆದೇಶ ನಮಗೆ ಪಾಸಿಟಿವ್ ಆಗಿತ್ತು ಎನ್ನುತ್ತಾರೆ.

ಈ ಎಲ್ಲ ಮಾತುಕತೆಗಳು ಹಾಗೂ ಡಿಕೆ ಶಿವಕುಮಾರ್‌ ನಗುಮುಖದಿಂದಲ್ಲೇ ಪಾದಯಾತ್ರೆ ಬಗ್ಗೆ ಮಾತನಾಡುತ್ತಿದ್ದರು. ಈ ಲೆಕ್ಕಚಾರಗಳು ಕಾಂಗ್ರೆಸ್‌ನ ಗೇಮ್ ಪ್ಲ್ಯಾನ್ ಕೆಲಸ ಮಾಡಿದೆ ಎನ್ನುವುದನ್ನು ಹೇಳುತ್ತಿದ್ದವು ಎನ್ನಬಹುದು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ