ಆ್ಯಪ್ನಗರ

ಟಿಪ್ಪು ಜಯಂತಿ ಬಂದರೆ ಮಲಗಿದ್ದವರೂ ಎಚ್ಚರವಾಗುತ್ತಾರೆ: ಡಿಕೆ ಸುರೇಶ್

ಟಿಪ್ಪು ಮತಾಂಧನೇ ಆಗಿದ್ದಾರೆ ಶ್ರೀರಂಗನಾಥ ಸ್ವಾಮೀಯ ದೇವಸ್ಥಾನವನ್ನು ಕೆಡವಬೇಕಿತ್ತು. ಆದರೆ ದೇವಸ್ಥಾನ ಇನ್ನೂ ಜೀವಂತವಾಗಿದೆ ಎಂದು ಸುರೇಶ್ ತಿಳಿಸಿದ್ದಾರೆ.

Vijaya Karnataka Web 10 Nov 2018, 2:44 pm
ರಾಮನಗರ: ಟಿಪ್ಪು ಜಯಂತಿ ಬಂದರೆ‌ ಸಾಕು‌ ಮಲಗಿದ್ದವರೆಲ್ಲ ಎದ್ದು ನಿಲ್ಲುತ್ತಾರೆ ಎಂದು ಸಂಸದ ಡಿಕೆ ಸುರೇಶ್ ಹೇಳಿದ್ದಾರೆ.
Vijaya Karnataka Web DK Suresh


ರಾಮನಗರದಲ್ಲಿ ಟಿಪ್ಪು ಜಯಂತಿ ಉದ್ಘಾಟನೆ ನಂತರ ಹೇಳಿಕೆ ನೀಡಿದ ಅವರು, ಟಿಪ್ಪು ಜಯಂತಿ ಬಂದರೆ‌ ಸಾಕು‌ ಮಲಗಿದ್ದವರೆಲ್ಲ ಎದ್ದು ನಿಲ್ಲುತ್ತಾರೆ. ನಾಯಕರು ಆಗಲು ಈ ರೀತಿ ಮಾಡಲು ಹೊರಟಿದ್ದಾರೋ ಗೊತ್ತಿಲ್ಲ, ಅಲ್ಲದೆ ಟಿಪ್ಪುವಿನಿಂದ ಅವರಿಗೆ ಏನು ತೊಂದರೆ ಅಗಿದೆಯೋ ಗೊತ್ತಿಲ್ಲ ಎಂದು ಹೇಳಿದ್ದಾರೆ.

ಜಯಂತಿ ಬಗ್ಗೆ ಸಾಕಷ್ಟು ಪರ ವಿರೋಧ ಇರುತ್ತೆ, ಆದರೆ ಹಳದಿ ಕಣ್ಣಿನಲ್ಲಿ‌ ನೋಡುವುದನ್ನು ಬಿಟ್ಟು ಇದೀಗ ಕಣ್ಣಿಗೆ ಎಕ್ಸ್ಟ್ರಾ ಗ್ಲಾಸ್ ಹಾಕೊಂಡು ಬೆತ್ತಲೆಯಾಗಿ‌‌ ನೋಡುತ್ತಿದ್ದಾರೆ. ಟಿಪ್ಪು ಮತಾಂಧನೇ ಆಗಿದ್ದಾರೆ ಶ್ರೀರಂಗನಾಥ ಸ್ವಾಮೀಯ ದೇವಸ್ಥಾನವನ್ನು ಕೆಡವಬೇಕಿತ್ತು. ಆದರೆ ದೇವಸ್ಥಾನ ಇನ್ನೂ ಜೀವಂತವಾಗಿದೆ ಎಂದು ಸುರೇಶ್ ತಿಳಿಸಿದ್ದಾರೆ.

ಇತಿಹಾಸವನ್ನ ಪ್ರಶ್ನೆ ಮಾಡುತ್ತಾ ಹೋದರೆ ಎಲ್ಲವನ್ನು ಪ್ರಶ್ನೆ ಮಾಡಬೇಕಾಗುತ್ತೆ, ನಂಬಿಕೆಯನ್ನು ಆಚರಣೆ ಮಾಡುತ್ತಾ ಹೋಗುತ್ತಿದ್ದೇವೆ. ಪರ ವಿರೋಧ ಚರ್ಚೆ ಮಾಡುತ್ತಾ ಅಸಹಿಷ್ಣತೆ ಉಂಟು ಮಾಡುತ್ತಿದ್ದಾರೆ. ಇದನ್ನು‌ ನೋಡುತ್ತಿದ್ದರೆ ಇದರ ಹಿಂದೆ ರಾಜಕೀಯ ಇದೆ ಎಂದು ಅನ್ನಿಸುತ್ತದೆ.

ಮೊದಲಿಗೆ ಬಿಜೆಪಿಗೆ ಅಭಿನಂದನೆ ಸಲ್ಲಿಸುತ್ತೇನೆ, ಕೇವಲ ರಾಜ್ಯಕ್ಕೆ ಸೀಮಿತವಾಗಿದ್ದ ಟಿಪ್ಪುವನ್ನ ಹೋರಾಟದ ಮೂಲಕ ಇಡೀ ದೇಶಕ್ಕೆ ಪರಿಚಯಿಸಿದ್ದಾರೆ. ನಮಗೆ ಅಭಿವೃದ್ಧಿ ‌ಮುಖ್ಯ‌‌, ಚರ್ಚೆ ಮುಖ್ಯವಲ್ಲ ಎಂದು ಅಭಿಪ್ರಾಯಪಟ್ಟಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ