ಆ್ಯಪ್ನಗರ

ದಾಖಲಾತಿ ಆಂದೋಲನ ಜಾಗೃತಿ

ತಾಲೂಕು ಮೈಲನಾಯ್ಕನಹೊಸಹಳ್ಳಿ ಶಾಲೆಗೆ ಈ ಸಾಲಿನಿಂದ ಒಂದನೇ ತರಗತಿ ಆಂಗ್ಲ ಮಾಧ್ಯಮಕ್ಕೆ ಸರಕಾರದಿಂದ ಅನುಮತಿ ದೊರೆತಿde. ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಉದ್ದೇಶದಿಂದ ಕ್ಷೇತ್ರ ಶಿಕ್ಷಣಾಧಿಕಾರಿ ಅಧ್ಯಕ್ಷತೆಯಲ್ಲಿ ಗ್ರಾಮದಲ್ಲಿ ದಾಖಲಾತಿ ಆಂದೋಲನ ಜಾಗೃತಿ ಹಮ್ಮಿಕೊಳ್ಳಲಾಗಿತ್ತು.

Vijaya Karnataka 28 May 2019, 4:07 pm
ಚನ್ನಪಟ್ಟಣ: ತಾಲೂಕು ಮೈಲನಾಯ್ಕನಹೊಸಹಳ್ಳಿ ಶಾಲೆಗೆ ಈ ಸಾಲಿನಿಂದ ಒಂದನೇ ತರಗತಿ ಆಂಗ್ಲ ಮಾಧ್ಯಮಕ್ಕೆ ಸರಕಾರದಿಂದ ಅನುಮತಿ ದೊರೆತಿದ್ದು, ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಉದ್ದೇಶದಿಂದ ಕ್ಷೇತ್ರ ಶಿಕ್ಷ ಣಾಧಿಕಾರಿ ಅಧ್ಯಕ್ಷ ತೆಯಲ್ಲಿ ಎಸ್‌ಡಿಎಂಸಿ ಅಧ್ಯಕ್ಷ ರು ಮತ್ತು ಸದಸ್ಯರು ಸಿಆರ್‌ಪಿ ಹಾಗೂ ಶಾಲಾ ಶಿಕ್ಷ ಕರು ನೇತೃತ್ವದಲ್ಲಿ ಗ್ರಾಮದಲ್ಲಿ ದಾಖಲಾತಿ ಆಂದೋಲನ ಜಾಗೃತಿ ಹಮ್ಮಿಕೊಳ್ಳಲಾಗಿತ್ತು.
Vijaya Karnataka Web documentation movement awareness
ದಾಖಲಾತಿ ಆಂದೋಲನ ಜಾಗೃತಿ


ಕ್ಷೇತ್ರ ಶಿಕ್ಷ ಣಾಧಿಕಾರಿ ಆರ್‌.ಎಸ್‌. ಸೀತಾರಾಮು ಶಾಲಾಭಿವೃದ್ಧಿ ಸಮಿತಿ ಮತ್ತು ಶಿಕ್ಷ ಕರ ಸಭೆಯಲ್ಲಿ ಮಾತನಾಡಿ, ಗ್ರಾಮದ ಪ್ರಮುಖ ಬೀದಿಗಳಲ್ಲಿ ಆಂಗ್ಲ ಮಾಧ್ಯಮಕ್ಕೆ ಅನುಮತಿ ಸಿಕ್ಕಿರುವ ಬಗ್ಗೆ ಜಾಥಾ ನಡೆಸಬೇಕು. ಜತೆಗೆ ಪೋಷಕರಲ್ಲಿರುವ ಆಂಗ್ಲ ಮಾಧ್ಯಮದ ವ್ಯಾಮೋಹದ ಬಗ್ಗೆ ತಿಳಿ ಹೇಳಿ ಅವರ ಮನವೂಲಿಸಿ ಸರಕಾರ ಶಾಲೆಯಲ್ಲಿ ಉಚಿತವಾಗಿ ಸಿಗುತ್ತಿರುವ ಸೌಲಭ್ಯ ಮಾಹಿತಿ ನೀಡಬೇಕು ದಾಖಲಾತಿ ಹೆಚ್ಚು ಮಾಡಬೇಕು ಎಂದರು.

ಶಾಲೆಯಲ್ಲಿ ಯಾವುದೇ ರೀತಿ ಶುಲ್ಕವಾಗಲಿ, ಡೊನೇಷನ್‌ ಇಲ್ಲದಿರುವ ಬಗ್ಗೆ ಪ್ರಚಾರಪಡಿಸಿ, ಆಂಗ್ಲ ಮಾಧ್ಯಮದ ಶಿಕ್ಷ ಣ ಸದುಪಯೋಗ ಪಡಿಸಿಕೊಳ್ಳುವಂತೆ ಪೋಷಕರಿಗೆ ಹೇಳಬೇಕು ಎಂದು ತಿಳಿಸಿದರು. ಇದೇ ವೇಳೆ ಶಾಲೆಗೆ ನೂತನವಾಗಿ 1ನೇ ತರಗತಿಯ ಆಂಗ್ಲ ಮಾಧ್ಯಮಕ್ಕೆ ಸಾಂಕೇತಿಕವಾಗಿ ಐದು ಮಕ್ಕಳನ್ನು ದಾಖಲು ಮಾಡಿಕೊಳ್ಳಲಾಯಿತು.

ಸಭೆಯಲ್ಲಿ ಇಸಿಒ ವಸಂತ್‌ಕುಮಾರ್‌, ಸಿಆರ್‌ಪಿ ಕೆ.ಬಿ.ಉಮೇಶ್‌, ಮುಖ್ಯಶಿಕ್ಷ ಕಿ ಸಿ. ಭಾನುಮತಿ, ಎಸ್‌ಡಿಎಂಸಿ. ಅಧ್ಯಕ್ಷ ಶಿವಣ್ಣ, ಸದಸ್ಯರಾದ ಅಂಕೇಗೌಡ, ರಾಮು, ಶಿವಲಿಂಗಯ್ಯ ಹಾಗೂ ಗ್ರಾಮದ ಮುಖಂಡರಾದ ಪುಟ್ಟಸ್ವಾಮಿಗೌಡರು, ನಿ.ಶಿಕ್ಷ ಕ ಶಿವಣ್ಣಗೌಡ ಹಾಗೂ ಎಲ್ಲ ಶಿಕ್ಷ ಕರು ಉಪಸ್ಥಿತರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ