ಆ್ಯಪ್ನಗರ

ಹಸುಗೂಸಿನ ಮೇಲೆ ರಕ್ಕಸ ನಾಯಿಗಳ ದಾಳಿ

ಮನೆಯ ಮುಂದೆ ಆಟವಾಡುತ್ತಿದ್ದ 2 ವರ್ಷದ ಬಾಲಕನ ಮೇಲೆ ಬೀದಿ ನಾಯಿಗಳು ದಾಳಿ ನಡೆಸಿದ್ದು, ಸಾರ್ವಜನಿಕರು ಕೂಡಲೇ ಎಚ್ಚೆತ್ತು ಬಾಲಕನನ್ನು ರಕ್ಷಣೆ ಮಾಡಿದ್ದಾರೆ.

Vijaya Karnataka 18 Jul 2019, 4:36 pm
ಕನಕಪುರ: ಮನೆಯ ಮುಂದೆ ಆಟವಾಡುತ್ತಿದ್ದ 2 ವರ್ಷದ ಬಾಲಕನ ಮೇಲೆ ಬೀದಿ ನಾಯಿಗಳು ದಾಳಿ ನಡೆಸಿದ್ದು, ಸಾರ್ವಜನಿಕರು ಕೂಡಲೇ ಎಚ್ಚೆತ್ತು ಬಾಲಕನನ್ನು ರಕ್ಷಣೆ ಮಾಡಿದ್ದಾರೆ.
Vijaya Karnataka Web dogs attack on child
ಹಸುಗೂಸಿನ ಮೇಲೆ ರಕ್ಕಸ ನಾಯಿಗಳ ದಾಳಿ


ಕನಕಪುರ ನಗರದ ಪೈಪ್‌ಲೈನ್‌ ಪಕ್ಕದ ಅಜೀಜ್‌ನಗರದ ನಿವಾಸಿ ತನ್ವೀರ್‌ ಮತ್ತು ನಗೀನಬಾನು ದಂಪತಿ ಪುತ್ರ ಸುಲ್ತಾನ್‌ (2) ವರ್ಷ ನಾಯಿ ದಾಳಿಗೆ ಒಳಗಾದ ಬಾಲಕ. ತನ್ನ ಮನೆಯ ಮುಂದೆ ಆಟವಾಡುತ್ತಿದ್ದಾಗ ಬಂದ ಬೀದಿ ನಾಯಿಗಳು ಈ ದಾಳಿ ನಡೆಸಿದ್ದು, ಬಾಲಕನ ಕೆಳಹೊಟ್ಟೆಯ ಭಾಗಕ್ಕೆ ಕಚ್ಚಿ ಗಾಯಗೊಳಿಸಿವೆ. ನಾಯಿಗಳು ಎಳೆದಾಡುತ್ತಿದ್ದನ್ನು ಕಂಡ ಸಾರ್ವಜನಿಕರು ಬಾಲಕನ ರಕ್ಷ ಣೆ ಮಾಡಿದ್ದಾರೆ. ಸಾರ್ವಜನಿಕರು ತಕ್ಷ ಣ ಎಚ್ಚೆತ್ತು ಬಾಲಕನನ್ನು ರಕ್ಷ ಣೆ ಮಾಡದಿದ್ದರೆ ಬಾಲಕ ಜೀವಕ್ಕೆ ತೊಂದರೆಯಾಗುತ್ತಿತ್ತು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.

ಅಜೀಜ್‌ ನಗರದಲ್ಲಿ ಈ ಹಿಂದೆ ಎರಡು ಬಾರಿ ಮಕ್ಕಳ ಮೇಲೆ ನಾಯಿಗಳು ದಾಳಿ ಮಾಡಿವೆ. ಅವುಗಳ ಹಾವಳಿ ಮೇರೆ ಮೀರಿದ್ದು, ಸ್ಥಳೀಯ ನಿವಾಸಿಗಳು ಓಡಾಡಲು ಭಯಪಡುವಂತಾಗಿದೆ ಎಂದು ನಗರಸಭೆಯ ಅಧಿಕಾರಿಗಳ ವಿರುದ್ಧ ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ.

-----

ನಗರದಲ್ಲಿ ನಾಯಿಗಳ ಹಾವಳಿ ನಿಯಂತ್ರಿಸಲು ಈಗಾಗಲೇ ಮೂರು ಬಾರಿ ಟೆಂಡರ್‌ ಕರೆದಿದ್ದರೂ ಯಾರು ಟೆಂಡರ್‌ ಹಾಕದ ಕಾರಣ ನಗರದಲ್ಲಿ ಬೀದಿನಾಯಿಗಳ ಹಾವಳಿಯನ್ನು ನಿಯಂತ್ರಣ ಸಾಧ್ಯವಾಗಿಲ್ಲ. ಈ ಬಾರಿ ಟೆಂಡರ್‌ ಪ್ರಕ್ರಿಯೆ ಮುಗಿದಿದ್ದು, ಸದ್ಯದಲ್ಲೇ ಬೀದಿ ನಾಯಿಗಳ ಹಾವಳಿಗೆ ಕಡಿವಾಣ ಹಾಕಲಾಗುವುದು.

* ರಮಾಮಣಿ | ನಗರಸಭೆ ಆಯಕ್ತೆ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ