ಆ್ಯಪ್ನಗರ

ಚರಂಡಿ ನೀರು ಮಿಶ್ರಿತ ನೀರು: ಪೈಪ್‌ ಕಿತ್ತೆಸೆದ ಗ್ರಾಮಸ್ಥರು

ಕಾಲೋನಿಗೆ ಚರಂಡಿ ನೀರು ಮಿಶ್ರಿತ ಕುಡಿಯುವ ನೀರು ಸರಬರಾಜಾಗುತ್ತಿದ್ದರೂ, ಸಮಸ್ಯೆಗೆ ಯಾರೂ ಸ್ಪಂದಿಸುತ್ತಿಲ್ಲ ಎಂದು ಆಕ್ರೋಶಗೊಂಡ ಭೂತಿಕೆರೆ ಗ್ರಾಮಸ್ಥರು ನೀರು ಸರಬರಾಜು ಪೈಪ್‌ ಕಿತ್ತೆಸೆದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Vijaya Karnataka 17 Jan 2019, 5:00 am
ರಾಮನಗರ: ಕಾಲೋನಿಗೆ ಚರಂಡಿ ನೀರು ಮಿಶ್ರಿತ ಕುಡಿಯುವ ನೀರು ಸರಬರಾಜಾಗುತ್ತಿದ್ದರೂ, ಸಮಸ್ಯೆಗೆ ಯಾರೂ ಸ್ಪಂದಿಸುತ್ತಿಲ್ಲ ಎಂದು ಆಕ್ರೋಶಗೊಂಡ ಭೂತಿಕೆರೆ ಗ್ರಾಮಸ್ಥರು ನೀರು ಸರಬರಾಜು ಪೈಪ್‌ ಕಿತ್ತೆಸೆದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
Vijaya Karnataka Web drainage water mixed water piped villagers
ಚರಂಡಿ ನೀರು ಮಿಶ್ರಿತ ನೀರು: ಪೈಪ್‌ ಕಿತ್ತೆಸೆದ ಗ್ರಾಮಸ್ಥರು


ತಾಲೂಕಿನ ಭೂತಿಕೆರೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಭೂತಿಕೆರೆ ಗ್ರಾಮದ ದಲಿತರ ಕಾಲೋನಿಯಲ್ಲಿ ಮೂಲ ಸೌಕರ್ಯಗಳು ಮರೀಚಿಕೆ ಆಗಿರುವುದಲ್ಲದೆ ಕಳೆದ ಹಲವು ತಿಂಗಳಿನಿಂದ ಶಿಥಿಲಗೊಂಡಿರುವ ಪೈಪ್‌ಲೈನ್‌ನಲ್ಲಿ ಚರಂಡಿ ಮಿಶ್ರಿತ ಕುಡಿಯುವ ನೀರು ಸರಬರಾಜಾಗುತ್ತಿದೆ ಎಂದು ಗ್ರಾಮಸ್ಥರು ದೂರಿದ್ದಾರೆ.

ಸುಮಾರು 45-50 ಮನೆಗಳಿಗೆ ಕಾಲೋನಿಯಲ್ಲಿ ಸಮರ್ಪಕವಾದ ಚರಂಡಿ ವ್ಯವಸ್ಥೆಯೇ ಇಲ್ಲ. ಅಲ್ಲದೆ 4-5 ವರ್ಷಗಳಿಂದ ಕುಡಿಯುವ ನೀರು ಸರಬರಾಜಿಗೆ ಪ್ಲಾಸ್ಟಿಕ್‌ ಪೈಪ್‌ಲೈನ್‌ ಅಳವಡಿಸಲಾಗಿದೆ. ಭೂಮಿಯ ಒಳಗೆ ಅಳವಡಿಸಬೇಕಾದ ಪೈಪ್‌ಅನ್ನು ರಸ್ತೆಯ ಮೇಲ್ಭಾಗ ಮತ್ತು ಮೋರಿಯಲ್ಲಿ ಅಳವಡಿಸಲಾಗಿದೆ. ಬಿಸಿಲು ಮಳೆಯಿಂದ ಹಾನಿಯಾಗಿ ಪೈಪ್‌ಲೈನ್‌ ಪೂರ್ಣ ಶಿಥಿಲಗೊಂಡಿದೆ.

ಪೈಪ್‌ ಮೋರಿಯಲ್ಲೇ ಹಾದುಹೋಗಿರುವ ಪರಿಣಾಮ ಚರಂಡಿಯಲ್ಲಿ ಹರಿಯುವ ನೀರು ಕುಡಿಯುವ ನೀರಿನಲ್ಲಿ ಮಿಶ್ರಣಗೊಂಡು ಕೊಳಚೆ ನೀರು ಸರಬರಾಜಾಗುತ್ತಿದೆ ಎಂದು ಕಾಲೋನಿ ನಿವಾಸಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ನೀರನ್ನು ಬಳಸುತ್ತಿರುವ ಕಾಲೋನಿಯ ಸಾಕಷ್ಟು ಮಂದಿ ಅನಾರೋಗ್ಯ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಈ ಬಗ್ಗೆ ಪಂಚಾಯಿತಿ ಅಧಿಕಾರಿಗಳಿಗೆ ದೂರು ನೀಡಿದರೆ, ದೂರು ತೆಗೆದುಕೊಂಡು ಇಟ್ಟುಕೊಳ್ಳುತ್ತಾರೆಯೇ ಹೊರತು ಸಮಪರ್ಕವಾಗಿ ಸ್ಪಂದಿಸುತ್ತಿಲ್ಲ. ಪೈಪ್‌ ಒಡೆದಾಗಲೆಲ್ಲಾ ಬಂದು ಅದಕ್ಕೆ ತ್ಯಾಪೆ ಹಾಕಿ ಹೋಗುತ್ತಿದ್ದಾರೆ. ಹೊಸ ಪೈಪ್‌ ಅಳವಡಿಸುವ ನಮ್ಮ ಮನಗೆ ಕ್ಯಾರೆ ಎನ್ನುತ್ತಿಲ್ಲ ಎಂದು ದೂರಿದ ಗ್ರಾಮಸ್ಥರು, ಪೈಪ್‌ಲೈನ್‌ ಕಿತ್ತೆಸೆದು ಹೊಸ ಪೈಪ್‌ಲೈನ್‌ ಅಳವಡಿಸುವಂತೆ ಬೇಡಿಕೆ ಇಟ್ಟು ಪ್ರತಿಭಟನೆ ನಡೆಸಿದರು.

ಗ್ರಾಮಸ್ಥರಾದ ಶ್ರೀನಿವಾಸ್‌, ಪುಟ್ಟಯ್ಯ, ರಾಮಕುಮಾರ್‌, ಚಂದನ್‌ ಕುಮಾರ್‌, ಸಾಮಜಮ್ಮ, ಶೋಭಮ್ಮ, ಲಕ್ಷ್ಮಮ್ಮ ಇತರರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ