ಆ್ಯಪ್ನಗರ

ಕಲೆ, ಸಂಸ್ಕೃತಿ ಉಳಿಸುವಲ್ಲಿ ನಾಟಕಗಳ ಪಾತ್ರ ದೊಡ್ಡದು

ನಮ್ಮ ಸಂಸ್ಕೃತಿ ಮತ್ತು ಕಲೆಯನ್ನು ಉಳಿಸಿ ಬೆಳೆಸುವಲ್ಲಿ ನಮ್ಮ ಹಿರಿಯರು ನಾಟಕ, ಯಕ್ಷ ಗಾನ, ಜನಪದದ ಮೂಲಕ ಕಥೆಯನ್ನು ಕಟ್ಟಿ ನಟನೆ ಮೂಲಕ ಜನರಿಗೆ ಅರಿವು ಮೂಡಿಸುವ ಕೆಲಸ ಮಾಡಿದ್ದರು. ಅದರ ಪರಿಣಾಮ ಇಂದಿಗೂ ನಮ್ಮ ಕಲೆ ಮತ್ತು ಸಂಸ್ಕೃತಿ ಉಳಿದುಕೊಂಡಿದೆ ಎಂದು ಶರತ್‌ ಬಚ್ಚೇಗೌಡ ತಿಳಿಸಿದರು.

Vijaya Karnataka 22 Mar 2019, 5:00 am
ಮಾಗಡಿ ಗ್ರಾಮಾಂತರ: ನಮ್ಮ ಸಂಸ್ಕೃತಿ ಮತ್ತು ಕಲೆಯನ್ನು ಉಳಿಸಿ ಬೆಳೆಸುವಲ್ಲಿ ನಮ್ಮ ಹಿರಿಯರು ನಾಟಕ, ಯಕ್ಷ ಗಾನ, ಜನಪದದ ಮೂಲಕ ಕಥೆಯನ್ನು ಕಟ್ಟಿ ನಟನೆ ಮೂಲಕ ಜನರಿಗೆ ಅರಿವು ಮೂಡಿಸುವ ಕೆಲಸ ಮಾಡಿದ್ದರು. ಅದರ ಪರಿಣಾಮ ಇಂದಿಗೂ ನಮ್ಮ ಕಲೆ ಮತ್ತು ಸಂಸ್ಕೃತಿ ಉಳಿದುಕೊಂಡಿದೆ ಎಂದು ಶರತ್‌ ಬಚ್ಚೇಗೌಡ ತಿಳಿಸಿದರು.
Vijaya Karnataka Web drama role big in saving art and culture
ಕಲೆ, ಸಂಸ್ಕೃತಿ ಉಳಿಸುವಲ್ಲಿ ನಾಟಕಗಳ ಪಾತ್ರ ದೊಡ್ಡದು


ಸೋಲೂರು ಸಮೀಪದ ವನಕಲ್ಲು ಮಠದಲ್ಲಿ ತಾಲೂಕು ಪ್ರಾಥಮಿಕ ಶಾಲಾ ಶಿಕ್ಷ ಕರ ಸಂಘದಿಂದ ನಡೆದ ಕುರುಕ್ಷೇತ್ರ ನಾಟಕ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ದ್ವಾಪರ ಯುಗದಲ್ಲಿ ನಡೆದ ಘಟನೆಗಳನ್ನು ಈ ಕಲಿಯುಗದವರೆಗೂ ಕಟ್ಟಿ ಬೆಳೆಸಿದ ನಮ್ಮ ಪೂರ್ವಿಕರಲ್ಲಿನ ಇಚ್ಛಾಶಕ್ತಿಯನ್ನು ನಾವು ಮೆಚ್ಚಲೇಬೇಕು. ಅಂದಿನ ಘಟನೆಗಳಲ್ಲಿನ ನೀತಿ ಸಂಸ್ಕಾರ ಅನುಭವಗಳನ್ನು ನಾವು ಮಾದರಿಯಾಗಿ ಜೀವನದಲ್ಲಿ ಅಳವಡಿಸಿಕೊಳ್ಳಬೇಕು.

ಕುರುಕ್ಷೇತ್ರ ನಾಟಕದ ಸಾರಾಂಶ ಸತ್ಯ ಮತ್ತು ನ್ಯಾಯಕ್ಕೆ ಜಯವಾಗುತ್ತದೆ. ಜಯ ಸ್ವಲ್ಪ ನಿಧಾನವಾಗಿ ಸಿಗುವ ಮೂಲಕ ದುಷ್ಟ ಶಕ್ತಿಯ ನಿರ್ಮೂಲನೆ ಮಾಡುತ್ತದೆ ಎಂಬ ನೀತಿಯನ್ನು ತಿಳಿಸುತ್ತದೆ ಎಂದರು.

ಸಂಗೀತದ ಮೆರಗನ್ನು ನಾಟಕದಲ್ಲಿ ಬಳಸಿಕೊಂಡಿರುವುದು ಸಂಗೀತದ ಆಕರ್ಷಣೆಯಾಗಿ ಜನ ಪೀಳಿಗೆಯಿಂದ ಪೀಳಿಗೆಗೆ ವರ್ಗಾಯಿಸಿಕೊಂಡು ಬಂದಿದ್ದಾರೆ. ಈ ಕಲೆಯನ್ನು ಶಿಕ್ಷ ಕ ಸಮೂಹ ಬೆಳೆಸುತ್ತಿರುವುದು ಶಾಘ್ಲನೀಯ ಎಂದರು.

ವನಕಲ್ಲು ಮಠದ ಬಸವರಮಾನಂದ ಸ್ವಾಮೀಜಿ, ಜಿ.ಪಂ ಸದಸ್ಯ ನಂಜುಂಡಯ್ಯ, ಎಪಿಎಂಸಿ ಸದಸ್ಯ ಗಂಗಣ್ಣ, ಗ್ರಾಪಂ ಅಧ್ಯಕ್ಷ ನಾಗರಾಜು, ಎನ್‌.ಡಿ.ಎ. ಮಾಜಿ ಅದ್ಯಕ್ಷ ಮಲ್ಲಯ್ಯ ಗ್ರಾಪಂ ಸದಸ್ಯರು ಮತ್ತು ಶಿಕ್ಷ ಕ ಸಂಘದ ಪದಾದಿಕಾರಿಗಳು ಭಾಗವಹಿಸಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ