ಆ್ಯಪ್ನಗರ

ಮೈಕೊರೆವ ಚಳಿಗೆ ತತ್ತರಿಸಿದ ರೈತರು: ರಾಗಿ ಒಕ್ಕಣೆ ಮುಂದಕ್ಕೆ

ದಕ್ಷಿಣ ಭಾರತದಲ್ಲಿ ಕೆಲವು ದಿನಗಳಿಂದ ಉಂಟಾಗಿರುವ ಶೀತ ಮಾರುತದ ಪರಿಣಾಮ ತಾಲೂಕಿನಾದ್ಯಂತ ಮೈಕೊರೆವ ಚಳಿ ಕಾಣಿಸಿಕೊಂಡಿದ್ದು, ರೈತರು ರಾಗಿ ...

Vijaya Karnataka 8 Jan 2019, 5:00 am
ಮರಳವಾಡಿ: ದಕ್ಷಿಣ ಭಾರತದಲ್ಲಿ ಕೆಲವು ದಿನಗಳಿಂದ ಉಂಟಾಗಿರುವ ಶೀತ ಮಾರುತದ ಪರಿಣಾಮ ತಾಲೂಕಿನಾದ್ಯಂತ ಮೈಕೊರೆವ ಚಳಿ ಕಾಣಿಸಿಕೊಂಡಿದ್ದು, ರೈತರು ರಾಗಿ ಒಕ್ಕಣೆಯನ್ನೂ ಮುಂದೂಡಿದ್ದಾರೆ.
Vijaya Karnataka Web farmers who have been churning up the rainy season
ಮೈಕೊರೆವ ಚಳಿಗೆ ತತ್ತರಿಸಿದ ರೈತರು: ರಾಗಿ ಒಕ್ಕಣೆ ಮುಂದಕ್ಕೆ


ಮಳೆ, ಬಿಸಿಲಿಗೆ ಹೆದರದವರ ಹೆಡೆಮುರಿ ಕಟ್ಟಿದ ಚಳಿ: ಸಾಮಾನ್ಯವಾಗಿ ಕೃಷಿಕರು ಮಳೆ, ಗಾಳಿ, ಬಿಸಿಲು, ಚಳಿಗೆ ಹೆದರುವುದಿಲ್ಲ. ಎಷ್ಟೇ ಹವಾಮಾನ ವೈಪರೀತ್ಯವಿದ್ದರೂ, ರೈತರು ತಪಸ್ಸಿನಂತೆ ತಮ್ಮ ದೈನಂದಿನ ಕೃಷಿ ಚಟುವಟಿಕೆಯನ್ನು ನಡೆಸಿಕೊಂಡು ಹೋಗುತ್ತಾರೆ. ಆದರೆ, ಎಂತಹ ಮಳೆ ಚಳಿಗೂ ಹೆದರದ ರೈತರನ್ನೇ ದಿಢೀರ್‌ ಕಾಣಿಸಿಕೊಂಡಿರುವ ಚಳಿ ಹೆಡೆಮುರಿ ಕಟ್ಟಿದೆ. ಈಗ ರಾಗಿ ಕಟಾವು ಮುಗಿದಿದ್ದು, ಒಕ್ಕಣೆ ಸಮಯ, ಮುಂಜಾನೆಯಿಂದ ತಡರಾತ್ರಿವರೆಗೆ ಕಣದಲ್ಲೇ ರೈತರು ಕೆಲಸ ಮಾಡಬೇಕಾಗುತ್ತದೆ.

ಆದರೆ, ಈಗಿನ ಚಳಿ ರೈತರ ಕೈಕಾಲುಗಳನ್ನು ಮರಗಟ್ಟಿಸುತ್ತಿರುವುದರಿಂದ ಹೆಚ್ಚು ಹೊತ್ತು ಕೆಲಸ ಮಾಡಲು ಸಾಧ್ಯವಾಗುತ್ತಿಲ್ಲ. ಒಕ್ಕಣೆ ಸಮಯದಲ್ಲಿ ಮಧ್ಯೆಮಧ್ಯೆ ವಿಶ್ರಾಂತಿ ಪಡೆದು ಕೆಲಸ ಮಾಡುವಂತಿಲ್ಲವಾದ್ದರಿಂದ, ಒಕ್ಕಣೆಯನ್ನೇ ಒಂದೆರಡು ವಾರಗಳ ಮಟ್ಟಿಗೆ ಮುಂದೂಡಲು ರೈತರು ನಿರ್ಧರಿಸಿದ್ದಾರೆ.

ಶೇ.60ರಷ್ಟು ಒಕ್ಕಣೆ ಬಾಕಿ: ಚಳಿ ಆವರಿಸುವ ಮೊದಲೇ ಕೆಲವರು ಒಕ್ಕಣೆ ಕಾರ‍್ಯ ಮುಗಿಸಿಕೊಂಡಿದ್ದಾರೆ. ಆದರೆ, ಮರಳವಾಡಿ ಹೋಬಳಿ ಮಟ್ಟಿಗೆ ಶೇ.60ರಷ್ಟು ಒಕ್ಕಣೆ ಕೆಲಸ ಬಾಕಿ ಉಳಿದಿದೆ. ಯಂತ್ರಗಳಿಂದ ಒಕ್ಕಣೆ ಮಾಡುವವರಿಗೆ ಚಳಿಯಿಂದ ಹೆಚ್ಚು ತೊಂದರೆ ಆಗಿಲ್ಲವಾದರೂ, ಎತ್ತುಗಳನ್ನು ಬಳಸಿ ಕಣದಲ್ಲಿ ಒಕ್ಕಣೆ ಮಾಡುವವರಂತೂ ಚಳಿ ಕಡಿಮೆ ಆಗುವವರೆಗೆ ಕಾಯುವುದು ಅನಿವಾರ‍್ಯವಾಗಿದೆ. ಒಟ್ಟಾರೆ ಇದುವರೆಗೆ ಪ್ರಕೃತಿಯನ್ನೇ ಹೆದರಿಸುತ್ತಿದ್ದ ರೈತನನ್ನು ಈ ಸಾರಿ ಮೈಕೊರೆವ ಚಳಿ ಹಿಮ್ಮೆಟ್ಟಿಸಿದೆ ಎಂದರೆ ತಪ್ಪಾಗದು.

ಹವಾಮಾನ ವೈಪರೀತ್ಯದಿಂದ ಈ ವರ್ಷ ಎಲ್ಲಿಲ್ಲದ ಚಳಿ ಕಾಣಿಸಿಕೊಂಡಿದೆ. ಏನೇ ಆಗಲಿ ರಾಗಿ ಒಕ್ಕಣೆ ಮಾಡಿಯೇ ಸಿದ್ದ ಎಂಬ ಹಠಕ್ಕೆ ರೈತರು ಬೀಳಬಾರದು. ಮೈಕೊರೆಯುವ ಚಳಿಯನ್ನು ನಿರ್ಲಕ್ಷಿಸಿದರೆ ಆರೋಗ್ಯದ ಮೇಲೆ ದುಷ್ಪರಿಣಾಮ ಬೀಳುವುದರಿಂದ ರೈತರು ಎಚ್ಚರಿಕೆ ವಹಿಸಬೇಕು.
-ದೇವರಾಜು ಸಿ. ವಿ. ಉಪನ್ಯಾಸಕರು ರಸ್ತೆ ಜಕ್ಕಸಂದ್ರ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ