ಆ್ಯಪ್ನಗರ

ಗಬ್ಬಾಡಿ ಕಾವಲ್‌ ಅರಣ್ಯ ಪ್ರದೇಶದಲ್ಲಿ ಬೆಂಕಿ

ತಾಲೂಕಿನ ಹಾರೋಹಳ್ಳಿ ಹೋಬಳಿ ಕೆಬ್ಬೇದೊಡ್ಡಿ ಗ್ರಾಮದ ಹೊರವಲಯದ ಗಬ್ಬಾಡಿ ಕಾವಲ್‌ ಅರಣ್ಯ ಪ್ರದೇಶದ ನರ್ಸರಿ ಒಂದರಲ್ಲಿನ ಬಿದಿರು ಮೆಳೆಗೆ ತಗುಲಿದ ಆಕಸ್ಮಿಕ ಬೆಂಕಿಗೆ ಬಿದಿರುಮೆಳೆ ಮತ್ತು ಪಕ್ಕದಲ್ಲಿನ ರೈತರ ತೆಂಗಿನ ಮರಗಳು ಸುಟ್ಟುಹೋಗಿರುವ ಘಟನೆ ಗುರುವಾರ ಮಧ್ಯಾಹ್ನ ನಡೆದಿದೆ.

Vijaya Karnataka 22 Feb 2019, 5:00 am
ಹಾರೋಹಳ್ಳಿ (ಕನಕಪುರ ತಾ.): ತಾಲೂಕಿನ ಹಾರೋಹಳ್ಳಿ ಹೋಬಳಿ ಕೆಬ್ಬೇದೊಡ್ಡಿ ಗ್ರಾಮದ ಹೊರವಲಯದ ಗಬ್ಬಾಡಿ ಕಾವಲ್‌ ಅರಣ್ಯ ಪ್ರದೇಶದ ನರ್ಸರಿ ಒಂದರಲ್ಲಿನ ಬಿದಿರು ಮೆಳೆಗೆ ತಗುಲಿದ ಆಕಸ್ಮಿಕ ಬೆಂಕಿಗೆ ಬಿದಿರುಮೆಳೆ ಮತ್ತು ಪಕ್ಕದಲ್ಲಿನ ರೈತರ ತೆಂಗಿನ ಮರಗಳು ಸುಟ್ಟುಹೋಗಿರುವ ಘಟನೆ ಗುರುವಾರ ಮಧ್ಯಾಹ್ನ ನಡೆದಿದೆ.
Vijaya Karnataka Web fire in the gabbadi caval forest area
ಗಬ್ಬಾಡಿ ಕಾವಲ್‌ ಅರಣ್ಯ ಪ್ರದೇಶದಲ್ಲಿ ಬೆಂಕಿ


ಗಬ್ಬಾಡಿ ಕಾವಲ್‌ ಅರಣ್ಯ ಪ್ರದೇಶದ ಬಳಿಯಿರುವ ನರ್ಸರಿ ಬಿದಿರುಮೆಳೆಗೆ ತಗುಲಿದ ಬೆಂಕಿಯಿಂದಾಗಿ ಪಕ್ಕದ ಜಮೀನಿನ ಸರ್ವೆ ನಂಬರ್‌ 91ರ ಜಮೀನಿನ ಶಿವರಾಜ್‌ ಎಂಬುವವರ ತೆಂಗಿನ ಮರಗಳು ಹಾಗು ಪಕ್ಕದ ಜಮೀನಿನ ದ್ಯಾವರಸಣ್ಣ ರವರ ಜಮೀನಿನಲ್ಲಿರುವ ಹನಿನೀರಾವರಿಯ ಪೈಪುಗಳು, ಪಂಪ್‌ಸೆಟ್‌ ಸೇರಿದಂತೆ ಕೆಲ ಸಾಮಗ್ರಿಗಳು ಸುಟ್ಟು ಹೋಗಿವೆ.

ತಪ್ಪಿದ ಅನಾಹುತ: ಹೊರಗಿನಿಂದ ಸಿಡಿದು ಬರುವ ಬೆಂಕಿ (ಕ್ರೋನ್‌ ಫೈರ್‌)ಯಾದ ಬೆಂಕಿಯ ಕೆನ್ನಾಲಿಗೆ ಬಿದಿರುಮೆಳೆಗೆ ತಗುಲುತ್ತಿದ್ದಂತೆ ಬೇಸಿಗೆಯ ಬಿಸಿಲಿಗೆ ಒಣಗಿ ನಿಂತಿದ್ದ ಬಿದಿರುಮೆಳೆ ಧಗಧಗನೆ ಹೊತ್ತಿ ಉರಿಯಲು ಆರಂಭಿಸಿತು. ಮುಂದುವರಿದು ಕಾಡಿಗೆ ಹರಡುವ ಮುನ್ನವೇ ಎಚ್ಚೆತ್ತುಕೊಂಡ ಅರಣ್ಯ ಇಲಾಖೆ ಕೂಡಲೇ ಅಗ್ನಿಶಾಮಕ ದಳದವರನ್ನು ಕರೆಸಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿ ಮುಂದಾಗುವ ಅನಾಹುತ ತಪ್ಪಿಸಿದ್ದಾರೆಂದು ಗ್ರಾಮಸ್ಥರು ತಿಳಿಸಿದರು.

ಅರಣ್ಯ ವೀಕ್ಷ ಕ ಅರುಣ್‌, ಅರಣ್ಯ ರಕ್ಷ ಕರಾದ ರಾಜು, ನಂಜುಂಡಪ್ಪ, ಕಾಳಮಾರಯ್ಯ ಹಾಗು ಅಗ್ನಿಶಾಮಕ ದಳದ ಸಿಬ್ಬಂದಿ ಅಗ್ನಿ ನಂದಿಸುವ ಕಾರ್ಯದಲ್ಲಿ ಯಶಸ್ವಿಯಾದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ