ಆ್ಯಪ್ನಗರ

ಒತ್ತುವರಿ ತೆರವಿಗೆ ತೆರಳಿದ ಅರಣ್ಯ ಅಧಿಕಾರಿಗಳ ಮೇಲೆ ಹಲ್ಲೆ

ಸರಕಾರಿ ಜಾಗದ ಒತ್ತುವರಿ ತೆರವಿಗೆ ತೆರಳಿದ್ದ ಅರಣ್ಯಾಧಿಕಾರಿಗಳ ಮೇಲೆ ಭೂಗಳ್ಳರು ಹಲ್ಲೆ ನಡೆಸಿ, ಜೀಪಿನ ಗಾಜುಗಳನ್ನು ಪುಡಿಗೈದ ಘಟನೆ ಚುಳುಕನ ಕೆರೆ ಮೀಸಲು ಅರಣ್ಯದಲ್ಲಿ ಸೋಮವಾರ ನಡೆದಿದೆ.

Vijaya Karnataka 22 Jan 2019, 5:00 am
ಹಾರೋಹಳ್ಳಿ (ಕನಕಪುರ ತಾ.): ಸರಕಾರಿ ಜಾಗದ ಒತ್ತುವರಿ ತೆರವಿಗೆ ತೆರಳಿದ್ದ ಅರಣ್ಯಾಧಿಕಾರಿಗಳ ಮೇಲೆ ಭೂಗಳ್ಳರು ಹಲ್ಲೆ ನಡೆಸಿ, ಜೀಪಿನ ಗಾಜುಗಳನ್ನು ಪುಡಿಗೈದ ಘಟನೆ ಚುಳುಕನ ಕೆರೆ ಮೀಸಲು ಅರಣ್ಯದಲ್ಲಿ ಸೋಮವಾರ ನಡೆದಿದೆ.
Vijaya Karnataka Web forest officials who went to encroachment were attacked
ಒತ್ತುವರಿ ತೆರವಿಗೆ ತೆರಳಿದ ಅರಣ್ಯ ಅಧಿಕಾರಿಗಳ ಮೇಲೆ ಹಲ್ಲೆ


ಹಾರೋಹಳ್ಳಿ ಸಮೀಪದ ಚುಳುಕನ ಕೆರೆ ಮೀಸಲು ಅರಣ್ಯ ಪ್ರದೇಶದಲ್ಲಿ ಅಂಚಿಬಾರೆ ಗ್ರಾಮದ ಸಿಂಗ್ರಯ್ಯನ ಮಗ ಅನಂತ ಮತ್ತು ಬನ್ನಗಿರಿ ಗ್ರಾಮದ ಮುನಿಯಪ್ಪನ ಮಗ ರವಿ ಮತ್ತಿತರರು ಅರಣ್ಯದಲ್ಲಿರುವ ಕೆರೆಯ ಜಾಗವನ್ನು ಒತ್ತುವರಿ ಮಾಡಿಕೊಂಡಿದ್ದಾರೆ ಎಂಬ ಖಚಿತ ಮಾಹಿತಿ ಮೇಲೆ ಜಿಲ್ಲಾ ವಲಯ ಅರಣ್ಯಾಧಿಕಾರಿ ಬಿ.ಎಲ್‌.ರುದ್ರೇಶ್‌, ಆರ್‌ಎಫ್‌ಒ ದಿನೇಶ್‌, ಅರಣ್ಯ ಪಾಲಕರಾದ ಎಂ.ರಾಜು, ಚಂದ್ರು, ಚಾಲಕ ವಹಾಬ್‌, ವೀಕ್ಷ ಕ ಕಾಳಯ್ಯ ಮತ್ತು ರಾಜಣ್ಣ ಒತ್ತುವರಿ ಮಾಡಿಕೊಂಡಿದ್ದ ಸ್ಥಳಕ್ಕೆ ಬಂದು ಒತ್ತುವರಿ ತೆರವಿಗೆ ಮುಂದಾಗುತ್ತಿದ್ದಂತೆ ಅಧಿಕಾರಿಗಳೊಂದಿಗೆ ಜಗಳಕ್ಕೆ ನಿಂತ ಅನಂತ ಮತ್ತು ರವಿ ಮತ್ತಿತರರು, ಅಧಿಕಾರಿಗಳ ಮೇಲೆ ಹಲ್ಲೆಗೂ ಮುಂದಾಗಿದ್ದಾರೆ.

ಒತ್ತುವರಿ ತೆರವು ಸ್ಥಗಿತಗೊಳಿಸಲು ಅಧಿಕಾರಿಗಳು ನಿರಾಕರಿಸುತ್ತಿದ್ದಂತೆ ಕೋಪಗೊಂಡ ಹಲ್ಲೆಕೋರರು, ಜೀಪಿನ ಗಾಜುಗಳನ್ನು ಪುಡಿಗೈದರು. ತಕ್ಷಣ ಹಾರೋಹಳ್ಳಿ ಪೊಲೀಸ್‌ ಠಾಣೆಗೆ ತೆರಳಿದ ಅರಣ್ಯ ಅಧಿಕಾರಿಗಳು ಹಲ್ಲೆಕೋರರ ವಿರುದ್ಧ ದೂರು ದಾಖಲಿಸಿದ್ದಾರೆ. ಪೊಲೀಸರು ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ.

ಹಾರೋಹಳ್ಳಿ ಕೈಗಾರಿಕಾ ಪ್ರದೇಶವನ್ನು ಹೊಂದಿದ್ದು, ಸುತ್ತಮುತ್ತಲಿನ ಜಮೀನಿನ ಬೆಲೆ ಗಗನಕ್ಕೇರಿದೆ. ಈ ಹಿನ್ನೆಲೆಯಲ್ಲಿ ಸರಕಾರಿ ಜಾಗಗಳ ಅತಿಕ್ರಮಣ ಹೆಚ್ಚಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ