ಆ್ಯಪ್ನಗರ

ಯೋಗೇಶ್ವರ್‌ ವಸೂಲಿ ಬಗ್ಗೆ ಊರುಗಳಲ್ಲೇ ಚರ್ಚೆ ಆಗ್ತಿದೆ: ಸಿಪಿವೈ ವಿರುದ್ಧ ಎಚ್‌ಡಿ ಕುಮಾರಸ್ವಾಮಿ ಟೀಕೆ

ಮಾಜಿ ಸಿಎಂ ಎಚ್‌ಡಿ ಕುಮಾರಸ್ವಾಮಿ ಹಾಗೂ ಪರಿಷತ್‌ ಸದಸ್ಯ ಸಿಪಿ ಯೋಗೇಶ್ವರ್‌ ನಡುವಿನ ಮುಸುಕಿನ ಗುದ್ದಾಟ ಮುಂದುವರೆದಿದೆ. ಯೋಗೇಶ್ವರ್‌ ವಸೂಲಿ ಬಗ್ಗೆ ಊರುಗಳಲ್ಲೇ ಚರ್ಚೆ ಆಗ್ತಿದೆ. ಈ ಸರಕಾರದಲ್ಲಿ ನಡೆಯುತ್ತಿರುವುದು ಎಲ್ಲರಿಗೂ ಗೊತ್ತಿದೆ ಎಂದು ಕಿಡಿಕಾರಿದಾರೆ.

Vijaya Karnataka Web 11 Jan 2021, 3:49 pm
ರಾಮನಗರ: undefinedಯೋಗೇಶ್ವರ್‌ ವಸೂಲಿ ಬಗ್ಗೆ ಊರುಗಳಲ್ಲೇ ಚರ್ಚೆ ಆಗ್ತಿದೆ. ಈ ಸರಕಾರದಲ್ಲಿ ನಡೆಯುತ್ತಿರುವುದು ಎಲ್ಲರಿಗೂ ಗೊತ್ತಿದೆ. ಆದರೆ, ನಾನೇನು ಆರೋಪ ಮಾಡುತ್ತಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಎಚ್‌ಡಿ ಕುಮಾರಸ್ವಾಮಿ ಹೇಳಿದ್ದಾರೆ. ಈ ಮೂಲಕ ಸಿಪಿವೈ ಮತ್ತು ಎಚ್‌ಡಿಕೆ ನಡುವಿನ ಜಂಗಿಕುಸ್ತಿ ಮುಂದುವರೆದಿದೆ.
Vijaya Karnataka Web HD Kumaraswamy
ಎಚ್‌ಡಿ ಕುಮಾರಸ್ವಾಮಿ, ಮಾಜಿ ಮುಖ್ಯಮಂತ್ರಿ (ಸಂಗ್ರಹ ಚಿತ್ರ)


ರಾಮನಗರದಲ್ಲಿ ಮಾತನಾಡಿದ ಅವರು, ರಾಮನಗರ ಎಸಿ ಮೂಲಕ ವಸೂಲಿ ಮಾಡ್ತಿಲ್ವಾ..? ಈ ಸರ್ಕಾರದಲ್ಲಿ ನಡೆಯುತ್ತಿರುವುದು ಎಲ್ಲರಿಗೂ ಗೊತ್ತಿದೆ. ಆದರೆ, ನಾನು ನೇರವಾಗಿ ಹೇಳ್ತಿದ್ದೇನೆ. ಆ ಎಸಿ ನನಗೆ 3 ಕೋಟಿ ರೂ. ಆಫರ್ ನೀಡಿದ್ದರು. ಲೆಟರ್ ಹೆಡ್‌ನ ಯೋಗೇಶ್ವರ್ ಯಾವ ರೀತಿ ಬಳಸ್ತಿದ್ದಾರೆಂದು ಜನರಿಗೆ ಗೊತ್ತಿದೆ ಎಂದು ವಾಗ್ದಾಳಿ ನಡೆಸಿದರು.

ನಮ್ಮ ಕುಟುಂಬ ಯಾರಿಗೂ ರಾಜಿಯಾಗಲ್ಲ. ಪ್ರಧಾನ ಮಂತ್ರಿಯನ್ನೇ ನೋಡಿರುವ ಕುಟುಂಬ ನಮ್ಮದು. ಹಾಗಾಗಿ ಒಂದು ಮಂತ್ರಿ ಸ್ಥಾನಕ್ಕೆ ಹೆದರುತ್ತೇನಾ..? ಯೋಗೇಶ್ವರ್ ಮಂತ್ರಿಯಾಗಿದ್ದಾಗಲೇ ಸೋಲಿಸಿದ್ದೇವೆ. ಈಗ ಚನ್ನಪಟ್ಟಣಕ್ಕೆ ಹೋಗಲಿಲ್ಲ. ಆದರೂ ಜನ ನನಗೆ ಆರ್ಶೀವಾದ ಮಾಡಿಲ್ವಾ..? ಇಂತಹ ಮಂತ್ರಿ ಸ್ಥಾನಗಳನ್ನ ಎಷ್ಟು ನೋಡಿಲ್ಲ ನಾನು ಎಂದು ಹೇಳಿದರು.
ಅಸ್ತಿತ್ವಕ್ಕಾಗಿ ಎಚ್‌ಡಿ ಕುಮಾರಸ್ವಾಮಿ ಬಡಿದಾಟ: ಮಾಜಿ ಸಿಎಂಗೆ ಸಿಪಿ ಯೋಗೇಶ್ವರ್‌ ತಿರುಗೇಟುರಾಮನಗರ ಎಸಿ ಯಾರ್ಯಾರಿಗೆ ಎಷ್ಟು ಕಮೀಷನ್ ನೀಡಿದ್ದಾರೆ ಎಂಬುದು ಗೊತ್ತಿದೆ. ಇಲ್ಲಿನ ಎಸಿಯನ್ನು ತಗೆಯಬೇಕು ಎಂದು ನಿರ್ಧಾರ ಮಾಡಿದ್ದೆ. ಮುಖ್ಯಮಂತ್ರಿಗಳು ಕೂಡ ಆದೇಶದ ಮಾಡಿದ್ದರು. ಬಳಿಕ, ಅಲ್ಲಿ ಏನೇನು ಆಟ ನಡೆದಿದೆ ಎಂಬುದು ಗೊತ್ತಿದೆ. ಸಿಎಂ ಕಚೇರಿಯಿಂದ ಯಾರ್ಯಾರಿಗೆ ಪೇಮೆಂಟ್ ಆಗಿದೆ ಅಂತಾ ಗೊತ್ತಿದೆ ಎಂದರು.
ನಾನು ನೇರವಾಗಿ ಹೇಳ್ತಿದ್ದೇನೆ. ಇಲ್ಲಿನ ಎಸಿ ನನಗೆ 3 ಕೋಟಿ ರೂ. ಆಫರ್ ಕೊಟ್ಟಿದ್ದರು. ಇವರು ರಾಮನಗರದ ಜನರನ್ನು ಉಳಿಸುತ್ತಾರಾ..? ಕೊಟ್ಟ ಹಣವನ್ನು ಜನರಿಂದ ವಸೂಲಿ ಮಾಡಬೇಕಾಗುತ್ತದೆ. ಇಂತಹ ಅಧಿಕಾರಿಗಳನ್ನು ಇಟ್ಟುಕೊಂಡ್ರೆ ಜನರ ಕೆಲಸ ಆಗುತ್ತಾ..? ಬಿಜೆಪಿ ಸರಕಾರ ಭ್ರಷ್ಟಾಚಾರದ ವಿರುದ್ಧ ನಾನು ಮಾತನಾಡ್ತಿಲ್ಲಾ ರಾಜ್ಯದ ಜನ ಹಾಗೂ ಬಿಜೆಪಿ ಶಾಸಕರೇ ಮಾತನಾಡುತ್ತಿದ್ದಾರೆ ಎಂದರು.

ಗ್ರಾಮ ಪಂಚಾಯತ್‌ ಚುನಾವಣೆ: ರಾಮನಗರದಲ್ಲಿ ಬಿಜೆಪಿ ಗೆಲುವಿನ ಕ್ರೆಡಿಟ್‌ ಯಾರಿಗೆ ಸಲ್ಲಬೇಕು?

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ