ಆ್ಯಪ್ನಗರ

ಬಿಜೆಪಿ ಬಾವುಟ ಕಟ್ಟಿಕೊಂಡಿರಲು ನನಗೇನೂ ಬೇಸರವಿಲ್ಲ: ಸಿಪಿವೈ

ಡಿ.ಕೆ.ಸುರೇಶ್‌ ವಿರುದ್ಧ ಸ್ಪರ್ಧಿಸಲಾಗದೇ ಚುನಾವಣೆ ರಣಕಣದಿಂದ ಪಲಾಯನ ಮಾಡಿದ ಸಿ.ಪಿ.ಯೋಗೇಶ್ವರ್‌ಗೆ ಗಂಡಸ್ತನವೇ ಇಲ್ಲ ಎಂಬ ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್‌ ಮಾತಿಗೆ ಮಾಜಿ ಸಚಿವ ಸಿ.ಪಿ.ಯೋಗೇಶ್ವರ್‌ ಪ್ರತಿ ಸವಾಲು ಹಾಕಿದ್ದಾರೆ.

Vijaya Karnataka 14 Apr 2019, 4:13 pm
ಡಿಕೆಶಿ ಗಂಡಸ್ತನ ಸವಾಲಿಗೆ ತಿರುಗೇಟು ನೀಡಿದ ಸೈನಿಕ| ಸಚಿವರು ನಿಜವಾದ ಗಂಡಸಾಗಿದ್ದರೆ ಚನ್ನಪಟ್ಟಣದ ಕೆರೆಗಳಿಗೆ ನೀರು ಹರಿಸಲಿ
Vijaya Karnataka Web former minister cp yogeshwar challenged to dk shivakumar speech
ಬಿಜೆಪಿ ಬಾವುಟ ಕಟ್ಟಿಕೊಂಡಿರಲು ನನಗೇನೂ ಬೇಸರವಿಲ್ಲ: ಸಿಪಿವೈ


ಚನ್ನಪಟ್ಟಣ: ಡಿ.ಕೆ.ಸುರೇಶ್‌ ವಿರುದ್ಧ ಸ್ಪರ್ಧಿಸಲಾಗದೇ ಚುನಾವಣೆ ರಣಕಣದಿಂದ ಪಲಾಯನ ಮಾಡಿದ ಸಿ.ಪಿ.ಯೋಗೇಶ್ವರ್‌ಗೆ ಗಂಡಸ್ತನವೇ ಇಲ್ಲ ಎಂಬ ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್‌ ಮಾತಿಗೆ ಮಾಜಿ ಸಚಿವ ಸಿ.ಪಿ.ಯೋಗೇಶ್ವರ್‌ ಪ್ರತಿ ಸವಾಲು ಹಾಕಿದ್ದಾರೆ.

ಜಲಸಂಪನ್ಮೂಲ ಸಚಿವರೂ ಆಗಿರುವ ಜಿಲ್ಲಾ ಉಸ್ತುವಾರಿ ಸಚಿವ ಡಿ.ಕೆ.ಶಿವಕುಮಾರ್‌ಗೆ ನಿಜವಾಗಲೂ ಗಂಡಸ್ತನ ಇರುವುದೇ ಹೌದಾಗಿದ್ದರೆ, ಚನ್ನಪಟ್ಟಣದ ಕೆರೆಗಳಿಗೆ ನೀರು ತುಂಬಿಸಲಿ ಎಂದು ಅವರು ಪಂಥಾಹ್ವಾನ ನೀಡಿದರು.

ಕ್ಷೇತ್ರಕ್ಕೆ ನಿಮ್ಮ ಕೊಡುಗೆ ಏನು?:


ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರ ಬಿಜೆಪಿ ಅಭ್ಯರ್ಥಿ ಅಶ್ವಥ್‌ ನಾರಾಯಣಗೌಡ ಪರ ಪಟ್ಟಣದ ವಿವಿಧ ಕಡೆ ಬಿರುಸಿನ ಪ್ರಚಾರ ನಡೆಸಿ ಮಾತನಾಡಿದ ಅವರು, ಕ್ಷೇತ್ರದಲ್ಲಿ ಎದುರಾಗಿರುವ ನೀರಿನ ಸಮಸ್ಯೆಯನ್ನು ಬಗೆಹರಿಸದ ನೀವು, ಜಲಸಂಪನ್ಮೂಲ ಸಚಿವರಾಗಿದ್ದೀರಿ ನಿಮ್ಮ ಕೊಡುಗೆ ಕ್ಷೇತ್ರಕ್ಕೆ ಕಿಂಚಿತ್ತೂ ಇಲ್ಲ ಎಂದು ತಿರುಗೇಟು ನೀಡಿದರು.

ಬಿಜೆಪಿಯಲ್ಲಿ ಒಬ್ಬ ಸಾಮಾನ್ಯ ಕಾರ್ಯಕರ್ತನಂತೆ ಪಕ್ಷ ದ ಬಾವುಟ ಕಟ್ಟಿಕೊಂಡೇ ಇರುತ್ತೇನೆ.ನಾನು ಕೂಡ 8 ಬಾರಿ ಚುನಾವಣೆಗೆ ಸ್ಪರ್ಧೆ ಮಾಡಿದ್ದೇನೆ. ಚುನಾವಣೆಗಳಲ್ಲಿ ಸೋತಿದ್ದೇನೆ, ಗೆದ್ದಿದ್ದೇನೆ. ಆದರೆ ನಾನು ಡಿಕೆ ಶಿವಕುಮಾರ್‌ ಜತೆಗಿದ್ದು, ರಾಜ್ಯಭಾರ ಮಾಡಲು ಇಷ್ಟವಿಲ್ಲ. ಮುಂದೆ ನಾನು ಬಿಜೆಪಿಯಲ್ಲಿ ಒಬ್ಬ ಸಾಮಾನ್ಯ ಕಾರ್ಯಕರ್ತನಂತೆ ಪಕ್ಷ ದ ಬಾವುಟ ಕಟ್ಟಿಕೊಂಡೇ ಇರುತ್ತೇನೆ ಎಂದರು.

ದಬ್ಬಾಳಿಕೆಗೆ ಅಂತ್ಯ ಹಾಡುವ ಕಾಲ ಬಂದಿದೆ:

ಎಂದು ಪ್ರಶ್ನೆ ಮಾಡಿದ ಅವರು ಸಹೋದರರ ಅಟ್ಟಹಾಸಕ್ಕೆ ತಿಲಾಂಜಲಿ ಹಾಕುವ ಕಾಲ ಬಂದೊದಗಿದೆ. ಡಿಕೆ ಸಹೋದರರಿಗೆ ಸೋಲುವ ಭೀತಿ ಎದುರಾಗಿದೆ. ಅದಕ್ಕಾಗಿಯೇ ಇಲ್ಲಸಲ್ಲದ ಮಾತುಗಳನ್ನು ಕಿರುಚಾಡಿ ಹೋಗಿದ್ದಾರೆ ಎಂದು ಹಂಗಿಸಿದರು.

ಎಂದೆಂದಿಗೂ ವಿರೋಧ:

ಬಿಜೆಪಿ ಪಕ್ಷ ದಲ್ಲಿ ನನ್ನ ಮಾತೇ ನಡೆಯಬೇಕೆಂಬ ಆಸೆ ಇಲ್ಲ. ರಾಜ್ಯ ದಲ್ಲಿ ಬಿಜೆಪಿ ಸಕಾರದಲ್ಲಿ ಅಧಿಕಾರದಲ್ಲಿದ್ದಾಗ ಚನ್ನಪಟ್ಟಣಕ್ಕೆ ನೀರಾವರಿ ಸೌಲಭ್ಯ ದೊರೆತಿದೆ. ಅಧಿಕಾರದ ಆಸೆಗಾಗಿ ನಾನು ಯಾವತ್ತು ಡಿ.ಕೆ.ಶಿವಕುಮಾರ್‌ ಹಿಂದೆ ಹೋಗಲ್ಲ. ನಾನು ಡಿಕೆಶಿಯನ್ನು ಹಿಂದೆಯ ವಿರೋಧ ಮಾಡಿದ್ದೀನಿ, ಇವತ್ತು ಮಾಡ್ತೀನಿ, ಮುಂದೆಯೂ ಮಾಡುತ್ತೇನೆ ಎಂದು ಸಾರಿದರು.

ಏಕ ವಚನದಲ್ಲಿ ಮುಗಿಬಿದ್ದ ಅಶ್ವತ್ಥ್‌:

ಡಿ.ಕೆ.ಶಿವಕುಮಾರ್‌ ವಿರುದ್ಧ ಏಕವಚನದಲ್ಲಿ ವಾಗ್ದಾಳಿ ನಡೆಸಿದ ಬಿಜೆಪಿ ಅಭ್ಯರ್ಥಿ ಅಶ್ವತ್ಥ್‌ ನಾರಾಯಣಗೌಡ,ಅಶ್ವಥ್‌ ನಾರಾಯಣಗೌಡ ನನ್ನ ಜತೆ ಚೆನ್ನಾಗಿದ್ದಾರೆ ಎಂದು ಡಿಕೆಶಿ ಹೇಳಿದ್ದಾರೆ. ಅದು ಅಪ್ಪಟ ಸುಳ್ಳು, ನಾನು ಇರಲಿ ಡಿಕೆಶಿ ಹತ್ತಿರ ನನ್ನ ಕಿತ್ತೋಗಿರೋ ಬಟ್ಟೆ ಕೂಡ ಹೋಗಲ್ಲ. ನಾನು ಆತನ ಬಳಿ ಮಾತನಾಡಿಲ್ಲ. ವಿಧಾನ ಪರಿಷತ್‌ ಚರ್ಚೆಯಲ್ಲಿ ನನಗೂ ಡಿಕೆಶಿಗೂ ನಡೆದ ಮಾತುಕತೆ ಬಿಟ್ಟರೆ, ಇದುವರೆಗೂ ನಾನು ಎಲ್ಲೂ ಮಾತಾಡಿಲ್ಲ. ಇಂತಹ ಮಾತುಗಳನ್ನು ಬಿಟ್ಟು, ನೇರವಾಗಿ ಚುನಾವಣೆ ಎದುರಿಸಲಿ ಎಂದು ಗುಡುಗಿದರು.

ಹರಕೆ ಕುರಿ ಡಿಕೆಸು:

ವಿಧಾನ ಸಭೆಯ ಮರು ಚುನಾವಣೆ ವೇಳೆ ಅಣ್ಣತಮ್ಮ ಸೇರಿ ಸಿ.ಎಂ. ಲಿಂಗಪ್ಪ ಅವರ ಮಗನನ್ನು ವ್ಯಾಪಾರ ಮಾಡಿಕೊಂಡರು. ನಾನು ಈ ಕ್ಷೇತ್ರದ ಹರಕೆ ಕುರಿಯಲ್ಲ, ಹರಕೆ ತೆಗೆದುಕೊಳ್ಳುವವನು. ಈ ಬಾರಿ ಲೋಕಸಭೆ ಚುನಾವಣೆಯಲ್ಲಿ ಡಿ.ಕೆ.ಸುರೇಶ್‌ ಹರಕೆ ಕುರಿಯಾಗುತ್ತಾರೆ ಎಂದು ಹೇಳಿದರು.

ಡಿಕೆಶಿ ಒಬ್ಬಂಟಿ:

ಡಿಕೆ ಶಿವಕುಮಾರ್‌ ರಾಜ್ಯ ಕಾಂಗ್ರೆಸ್‌ ಅಧ್ಯಕ್ಷ ರಾಗುವಾಗ ಅವರ ತಮ್ಮ ಒಬ್ಬರೇ ಸಪೋರ್ಟ್‌ ಮಾಡಿದ್ದು ಬಿಟ್ಟರೆ. ಡಿಕೆಶಿ ಹಿಂದೇ ಒಬ್ಬ ಎಂಎಲ್‌ಎ, ಎಂಪಿಗಳಿಲ್ಲ, ಅವರ ಯೋಗ್ಯತೆಗೆ ಪಾರ್ಟಿ ಪ್ರೆಸಿಡೆಂಟ್‌ ಆಗೋಕೆ ಆಗಲಿಲ್ಲ. ಈ ಸಾರಿಯ ಚುನಾವಣೆಯಲ್ಲಿ ಮೋದಿ ಅಲೆಯಲ್ಲಿ ಅಣ್ಣ ತಮ್ಮನಿಗೆ ಸೋಲಿನ ಭಯ ಕಾಡುತ್ತಿದೆ ಟೀಕಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ