ಆ್ಯಪ್ನಗರ

ಜೆಸಿಬಿ ಯಂತ್ರದಿಂದ ಬಗೆದು ನಿಧಿ ಶೋಧನೆ

ನಿಧಿ ಆಸೆಗಾಗಿ ರಾತ್ರಿ ವೇಳೆ ಪುರಾತನ ಕಾಲದ ವೀರಗಲ್ಲನ್ನು ಜೆಸಿಬಿ ಯಂತ್ರದಿಂದ ಬಗೆದು ನಿಧಿ ಶೋಧನೆ ನಡೆಸಿರುವ ಪ್ರಕರಣ ಲಕ್ಕೋಜನಹಳ್ಳಿ ಗ್ರಾಮದ ಶಿವನಹಳ್ಳಿ ವೀರಭದ್ರಸ್ವಾಮಿ ದೇವಾಲಯದ ಸಮೀಪದ ಮಾವಿನ ತೋಟದಲ್ಲಿ ನಡೆದಿದೆ.

Vijaya Karnataka 29 Aug 2018, 4:06 pm
ರಾಮನಗರ: ನಿಧಿ ಆಸೆಗಾಗಿ ರಾತ್ರಿ ವೇಳೆ ಪುರಾತನ ಕಾಲದ ವೀರಗಲ್ಲನ್ನು ಜೆಸಿಬಿ ಯಂತ್ರದಿಂದ ಬಗೆದು ನಿಧಿ ಶೋಧನೆ ನಡೆಸಿರುವ ಪ್ರಕರಣ ಲಕ್ಕೋಜನಹಳ್ಳಿ ಗ್ರಾಮದ ಶಿವನಹಳ್ಳಿ ವೀರಭದ್ರಸ್ವಾಮಿ ದೇವಾಲಯದ ಸಮೀಪದ ಮಾವಿನ ತೋಟದಲ್ಲಿ ನಡೆದಿದೆ.
Vijaya Karnataka Web funding from the jcb machine
ಜೆಸಿಬಿ ಯಂತ್ರದಿಂದ ಬಗೆದು ನಿಧಿ ಶೋಧನೆ


ನಡೆದದ್ದು ಏನು?: ರಾತ್ರಿ ವೇಳೆಯಲ್ಲಿ ಜೆಸಿಬಿ ತಂದು ವೀರಗಲ್ಲು ಕಿತ್ತು ನಿಧಿ ಶೋಧನೆ ಮಾಡಿರುವ ಚೋರರು ಮತ್ತೆ ಜೆಸಿಬಿಯಿಂದ ಮಣ್ಣನ್ನು ಸಮತಟ್ಟು ಮಾಡಿ ವೀರಗಲ್ಲನ್ನು ಕೆಳಗೆ ಬೀಳಿಸಿ ಹೋಗಿದ್ದಾರೆ. ಕಳೆದ ತಿಂಗಳು ಕೂಡ ಗ್ರಾಮದ ಇನ್ನೊಂದು ಭಾಗದಲ್ಲಿದ್ದ ವೀರಗಲ್ಲನ್ನು ಕಿತ್ತು ಇದೇ ರೀತಿ ಮಾಡಿ ಹೋಗಿದ್ದರು. ಪದೇ ಪದೆ ಇಂತಹ ಪ್ರಕರಣಗಳು ನಡೆಯುತ್ತಿದ್ದು ಇತಿಹಾಸ ಸಾರುವ ವೀರಗಲ್ಲುಗಳು ನಿಧಿ ಚೋರರ ಕೃತ್ಯಕ್ಕೆ ಬಲಿಯಾಗುತ್ತಿರುವುದು ಚರ್ಚೆಗೆ ಗ್ರಾಸವೊದಗಿಸಿದೆ. ಕೂಡಲೇ ಪೋಲೀಸರು ಈ ಭಾಗದಲ್ಲಿ ರಾತ್ರಿ ಪಹರೆ ನಡೆಸಿ ಇಂತಹ ಕೃತ್ಯಗಳನ್ನು ತಡೆಗಟ್ಟಲು ಮುಂದಾಗಬೇಕು. ಪುರಾತತ್ವ ಇಲಾಖೆ ಕೂಡ ವೀರಗಲ್ಲು ಮಾಸ್ತಿಗಲ್ಲು ಇತಿಹಾಸ ಹೇಳುವ ಕುರುಹುಗಳನ್ನು ಸಂರಕ್ಷಿಸಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.

ಈ ಭಾಗದ ಹಲವು ಗ್ರಾಮಗಳಲ್ಲಿ ಇಂದಿಗೂ ವೀರಗಲ್ಲುಗಳು, ಮಾಸ್ತಿಗಲ್ಲುಗಳು ಕಾಣಸಿಗುತ್ತಿವೆ. ಆದರೆ ಅವುಗಳ ರಕ್ಷ ಣೆಯನ್ನು ಪುರಾತತ್ವ ಇಲಾಖೆಗಳು ಮಾಡದ್ದರಿಂದ ಅನೇಕ ವೀರಗಲ್ಲುಗಳು ಗುಡ್ಡ ಬೆಟ್ಟದ ಪೊದೆಗಳಲ್ಲಿ ಅವಿತು ಹೋಗಿವೆ ಇದನ್ನೇ ಬಂಡವಾಳ ಮಾಡಿಕೊಂಡ ನಿಧಿ ಚೋರರು ವೀರಗಲ್ಲು, ಮಾಸ್ತಿಗಲ್ಲುಗಳ ಬಳಿ ಹಣ ಇರುತ್ತದೆ ಎಂದು ಅಪರೂಪವಾದ ಇತಿಹಾಸ ಹೇಳುವ ವೀರಗಲ್ಲುಗಳನ್ನು ಕಿತ್ತು ನಿಧಿ ಶೋಧನೆ ನಡೆಸುತ್ತಿರುವ ಪ್ರಕರಣ ದಿನೇ ದಿನೇ ಈ ಭಾಗದಲ್ಲಿ ಹೆಚ್ಚುತ್ತಲೇ ಇದೆ ಎನ್ನುತ್ತಾರೆ ಸ್ಥಳೀಯರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ