ಆ್ಯಪ್ನಗರ

ಬಿಎಸ್ಸೆನ್ನೆಲ್‌ ಟವರ್‌ಗಳಿಗೆ ಜಿಯೊ ತರಂಗ ಅಳವಡಿಕೆ..!

ರಾಮನಗರ ಜಿಲ್ಲೆ ನಾಲ್ಕೂ ತಾಲೂಕುಗಳ ಗ್ರಾಮೀಣ ಪ್ರದೇಶದಲ್ಲಿ ಜಿಯೊ ಖಾಸಗಿ ನೆಟವರ್ಕ್‌ ಅಳವಡಿಸುವ ಕಾರ್ಯ ಮಾಗಡಿ ತಾಲೂಕಿನ ದೂರವಾಣಿ ಇಲಾಖೆ ಕೇಂದ್ರದ ಸಹಯೋಗದೊಂದಿಗೆ ಭರದಿಂದ ಸಾಗುತ್ತಿದೆ.

Vijaya Karnataka 17 Sep 2018, 3:44 pm
ಮಾಗಡಿ ಗ್ರಾಮಾಂತರ: ರಾಮನಗರ ಜಿಲ್ಲೆ ನಾಲ್ಕೂ ತಾಲೂಕುಗಳ ಗ್ರಾಮೀಣ ಪ್ರದೇಶದಲ್ಲಿ ಜಿಯೊ ಖಾಸಗಿ ನೆಟವರ್ಕ್‌ ಅಳವಡಿಸುವ ಕಾರ್ಯ ಮಾಗಡಿ ತಾಲೂಕಿನ ದೂರವಾಣಿ ಇಲಾಖೆ ಕೇಂದ್ರದ ಸಹಯೋಗದೊಂದಿಗೆ ಭರದಿಂದ ಸಾಗುತ್ತಿದೆ.
Vijaya Karnataka Web geo wave adaptation to bsnl tower
ಬಿಎಸ್ಸೆನ್ನೆಲ್‌ ಟವರ್‌ಗಳಿಗೆ ಜಿಯೊ ತರಂಗ ಅಳವಡಿಕೆ..!


ಜಿಲ್ಲೆಯ ಟವರ್‌: ಹೋಬಳಿ ಕೇಂದ್ರ ಹಾಗೂ ಹೆಚ್ಚಿನ ಜನಸಂದಣಿ ಇರುವ ಪ್ರದೇಶಗಳಲ್ಲಿ ತರಂಗ ಪ್ರಸಾರದ ಸರ್ವೆಮಾಡಿ ಹೊಸ ಟವರ್‌ಗಳನ್ನು ಅಳವಡಿಸುತ್ತಿದ್ದಾರೆ. ರಾಮನಗರ ಜಿಲ್ಲೆಯಲ್ಲಿ 110 ಜಿಯೋ ಟವರ್‌ಗಳು ಇದ್ದು ಮುಂದಿನ ಎರಡು ತಿಂಗಳಲ್ಲಿ 115 ಹೊಸ ಟವರ್‌ಗಳನ್ನು ಗ್ರಾಮೀಣಭಾಗದಲ್ಲಿ ಅಳವಡಿಸುವ ಯೋಜನೆಯನ್ನು ಅಕಾರಿಗಳು ತಿಳಿಯಪಡಿಸಿದ್ದಾರೆ. 300 ಅಡಿ ಎತ್ತರವಿರುವ ಬಿಎಸ್‌ಎನ್‌ಎಲ್‌ ಟವರ್‌ಗೆ ತಂತ್ರಜ್ಞಾನದ ತರಂಗಪ್ರಸಾರ ವಸ್ತುಗಳನ್ನು ಅಳವಡಿಸಲಾಗುತ್ತಿದೆ. ನೆಟವರ್ಕ್‌ ಎಂಜಿನಿಯರ್‌ಗಳು ಸರ್ವಮಾಡಿ ಆನಂತರ ಎರಡು ಮೂರುವಾರಗಳಲ್ಲಿ ತರಂಗ ಪ್ರಸಾರ ಕಾರ್ಯವನ್ನು ಸುಗಮಗೊಳಿಸಲಿದ್ದಾರೆ ಎಂದು ಕಂಪನಿಯ ತಾಂತ್ರಿಕ ವಿಭಾದ ಅಧಿಕಾರಿಗಳು ತಿಳಿಸಿದ್ದಾರೆ.

ಕುಗ್ರಾಮಗಳಿಗೂ ಸೇವೆ:ಬಿಎಸ್‌ಎನ್‌ಎಲ್‌ ಟವರ್‌ ಇಲ್ಲದ ಕಡೆ ಜಿಯೊ ತಾಂತ್ರಿಕ ತಂಡದವರು ಕಾಡಂಚಿನ ಗ್ರಾಮಗಳು ಮತ್ತು ಬೆಟ್ಟಗುಡ್ಡಗಾಡು ಪ್ರದೇಶ, ಸೇರಿದಂತೆ ಕುಗ್ರಾಮಗಳನ್ನು ಗುರಿಯಾಗಿಸಿಕೊಂಡು ತರಂಗ ಪ್ರಸಾರ ಮಾಡಲು ಯೋಜನೆ ರೂಪಿಸಿ ಹೊಸ ಟವರ್‌ ಹಾಕಲು 500ಕ್ಕೂ ಹೆಚ್ಚು ಹಳ್ಳಿಗಳಲ್ಲಿ ಸರ್ವೆನಡೆಸುತ್ತಿದ್ದಾರೆ. ಅಗತ್ಯ ಬಿದ್ದಕಡೆ ಶೀಘ್ರವಾಗಿ ಟವರ್‌ ನಿರ್ಮಾಣ ಕೆಲಸಕ್ಕೆ ಚಾಲನೆ ಕೊಡಲಿದ್ದಾರೆ.

ಪ್ರತ್ಯೇಕ ಯಂತ್ರಗಳು: ಬಿಎಸ್‌ಎನ್‌ಎಲ್‌ ಟವರ್‌ ಜತೆ ಒಡಂಬಡಿಕೆ ಮಾಡಿಕೊಂಡಿರುವ ಜಿಯೊ ಕಂಪನಿ ಪತ್ಯೇಕ ಬ್ಯಾಟರಿ, ಪ್ರತ್ಯೇಕ ವಿದ್ಯುತ್‌ ಮತ್ತು ಟ್ರಾನ್ಸ್‌ಮಿಟ್ಟರ್‌, ರಿಸೀವರ್‌ಗಳನ್ನು ಅಳವಡಿಸಿದ್ದು, ಬಹುತೇಕ ಶೇ. 90 ಕಾಮಗಾರಿ ಮುಗಿದಿದೆ. ಇನ್ನೇನಿದ್ದರೂ ಟವರ್‌ಗೆ ನೆಟ್‌ವರ್ಕ್‌ ಪ್ರಸಾರದ ಪರೀಕ್ಷೆ ನಡೆಸಿ ಟವರ್‌ ಕಾರ್ಯವನ್ನು ಲೋಕಾರ್ಪಣೆ ಗೊಳಿಸುವುದು,ತಾಲೂಕಿನ ಎಲ್ಲಾ ಗ್ರಾಮಗಳಿಗೂ ತರಂಗವನ್ನು ಪ್ರಸಾರಮಾಡುವ ಗುರಿಹೊಂದಿದೆ ಎನ್ನುತ್ತಾರೆ ತಾಂತ್ರಿಕ ಸಿಬ್ಬಂದಿ.

ಎಲ್ಲೆಲ್ಲಿ ಕಾಮಗಾರಿ ..? : ರಾಮನಗರ ತಾಲೂಖಿನ ಜಾಲಮಂಗಲ, ಲಕ್ಷ್ಮೀಪುರ, ಕೈಲಾಂಚ ಭಾಗಗಳಲ್ಲಿ, ಮಾಗಡಿ ತಾಲೂಕಿನ ತಿಪ್ಪಸಂದ್ರ, ಹುಳ್ಳೇನಹಳ್ಳಿ, ಸಂಕೀಘಟ್ಟ, ಕಾಳಾರಿ, ನಾರಸಂದ್ರ, ಮಾದಿಗೊಂಡನಹಳ್ಳಿ, ಮಾಡಬಾಳ್‌, ವೀರೇಗೌಡನದೊಡ್ಡಿ, ಚನ್ನಪಟ್ಟಣ ತಾಲೂಕಿನ ಬೇವೂರು, ಹರೂರು ಮಗೇನಹಳ್ಳಿ, ಕೋಡಂಬಳ್ಳಿ ಸುತ್ತಮುತ್ತ. ಕನಕಪುರ ತಾಲೂಕಿನ ಹಾರೋಹಳ್ಳಿ, ಸಾತನೂರು, ಅಚ್ಚಲು ಮುಂತಾದ ಗ್ರಾಮೀಣ ಪ್ರದೇಶದಲ್ಲಿ ಜಿಯೋ ಟವರ್‌ ತಲೆಯೆತ್ತಲಿದೆ. ಬಹುತೇಕ ಜಿಲ್ಲೆಯ ಎಲ್ಲಾ ಬಿಎಸ್ಸೆನ್ನೆಲ್‌ ದೂರವಾಣಿ ಕೇಂದ್ರಗಳಲ್ಲಿನ ಟವರ್‌ನಲ್ಲಿ ಜಿಯೋ ಅಳವಡಿಸುವ ಮಾಹಿತಿಯನ್ನು ಅಧಿಕಾರಿಗಳು ತಿಳಿಸಿದ್ದಾರೆ.


ಬಿಎಸ್ಸೆನ್ನೆಲ್‌ ಜತೆ ಒಡಂಬಡಿಕೆ ಮಾಡಿಕೊಂಡು ಗ್ರಾಮೀಣ ಪ್ರದೇಶದಲ್ಲಿ ತರಂಗ ಪ್ರಸಾರ ಮಾಡಲು ಸಿದ್ಧತೆ ನಡೆಸಿದ್ದೇವೆ. 15 ದಿನಗಳಲ್ಲಿ ಟವರ್‌ಗಳಿಗೆ ಕೇವಲ್‌, ಮುಂತಾದ ವಸ್ತುಗಳನ್ನು ಅಳವಡಿಸುವ ಕೆಲಸ ಆರಂಭಿಸುತ್ತೇವೆ.

ರೇಣುಕೇಶ್‌, ಜಿಯೊ ನೆಟವರ್ಕ ಅಧಿಕಾರಿ.

ಗ್ರಾಮಾಂತರ ಪ್ರದೇಶಗಳಿಗೆ ತುಂಬಾ ಅನುಕೂಲವಾಗಲಿದೆ. ಇಂಟರ್‌ನೆಟ್‌ ಸಮಸ್ಯೆ ಎದುರಿಸುತ್ತಿದ್ದ ಗ್ರಾಮಗಳಲ್ಲಿ ಇನ್ನುಮುಂದೆ ಮನೆಯಲ್ಲಿಯೇ ಕೂತು ಇಂಟರ್‌ನೆಟ್‌ ಸೇವೆ ಪಡೆದುಕೊಳ್ಳಬಹುದಾಗಿದೆ.

ಮಂಜುನಾಥ್‌, ಅಂಗಡಿ, ತಿಪ್ಪಸಂದ್ರ.


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ