ಆ್ಯಪ್ನಗರ

ಕಾಗಿಮಡು ಗ್ರಾಮದೇವತೆ ಜಾತ್ರಾ ಮಹೋತ್ಸವಕ್ಕೆ ತೆರೆ

ಕಳೆದ ಮೂರು ದಿನಗಳಿಂದ ಹೋಬಳಿಯ ಕಾಗಿಮಡು ಗ್ರಾಮದಲ್ಲಿ ಸಂಭ್ರಮಕ್ಕೆ ಕಾರಣವಾಗಿದ್ದ ಗ್ರಾಮದೇವತೆ ಹಾಗೂ ಬಸವೇಶ್ವರ ಜಾತ್ರಾ ಮಹೋತ್ಸವಕ್ಕೆ ಬುಧವಾರ ಸಂಜೆ ತೆರೆ ಬಿದ್ದಿತು.

Vijaya Karnataka 26 Jul 2019, 5:00 am
ಕುದೂರು: ಕಳೆದ ಮೂರು ದಿನಗಳಿಂದ ಹೋಬಳಿಯ ಕಾಗಿಮಡು ಗ್ರಾಮದಲ್ಲಿ ಸಂಭ್ರಮಕ್ಕೆ ಕಾರಣವಾಗಿದ್ದ ಗ್ರಾಮದೇವತೆ ಹಾಗೂ ಬಸವೇಶ್ವರ ಜಾತ್ರಾ ಮಹೋತ್ಸವಕ್ಕೆ ಬುಧವಾರ ಸಂಜೆ ತೆರೆ ಬಿದ್ದಿತು.
Vijaya Karnataka Web goddess kagimandu jatra mahotsava end
ಕಾಗಿಮಡು ಗ್ರಾಮದೇವತೆ ಜಾತ್ರಾ ಮಹೋತ್ಸವಕ್ಕೆ ತೆರೆ


ಮೂರು ವರ್ಷದ ಬಳಿಕ ಕುದೂರು ಹೋಬಳಿಯ ಕಾಗಿಮಡು ಗ್ರಾಮದಲ್ಲಿ ಅದ್ದೂರಿ ಜಾತ್ರಾ ಮಹೋತ್ಸವ ನಡೆಸಲಾಯಿತು. ಸೋಮವಾರ ಬಸವೇಶ್ವರಸ್ವಾಮಿ ಜಾತ್ರಾ ಮಹೋತ್ಸವ, ಮಂಗಳವಾರ ಉಪಾರ, ಆರತಿ ಸೇವೆ ಹಾಗೂ ಬುಧವಾರ ನಾನಾ ಉತ್ಸವ ಹಾಗೂ ಆರತಿ ಸೇವೆ ನಡೆಸಲಾಯಿತು. ಬಳಿಕ ವಿಸರ್ಜನಾ ದೇವಿಯ ವಿಗ್ರಹವನ್ನು ವಿಸರ್ಜಿಸುವ ಮೂಲಕ ಜಾತ್ರಾ ಮಹೋತ್ಸವಕ್ಕೆ ತೆರೆ ಎಳೆಯಲಾಯಿತು. ಊರಹಬ್ಬದ ಪ್ರಯುಕ್ತ ಗ್ರಾಮಸ್ಥರ ಮನೆಗಳಲ್ಲಿ ಬಂಧುಬಾಂಧವರು ಸೇರಿದ್ದರು.

ಮುಖಂಡ ಜಗದೀಶ್‌ ಮಾತನಾಡಿ, ಗ್ರಾಮದಲ್ಲಿ ಮೂರು ದಿನಗಳಿಂದ ಹಬ್ಬದ ವಾತಾವರಣ ಮನೆ ಮಾಡಿತ್ತು. ಅನಾದಿ ಕಾಲದಿಂದ ಗ್ರಾಮವನ್ನು ದುಷ್ಟಶಕ್ತಿಗಳಿಂದ ರಕ್ಷಿಸುತ್ತಿರುವ ಬಸವೇಶ್ವರಸ್ವಾಮಿ ಹಾಗೂ ಗ್ರಾಮದೇವತೆ ಆರಾಧನೆ ನಮ್ಮ ಕರ್ತವ್ಯ. ಗ್ರಾಮಸ್ಥರೆಲ್ಲರೂ ಸಂಭ್ರಮದಿಂದ ಹಬ್ಬ ಆಚರಿಸಿದೆವು. ಪ್ರತೀ ಮನೆ ಮನಗಳಲ್ಲಿ ಸಡಗರದ ವಾತಾವರಣ ಮನೆ ಮಾಡಿತ್ತು ಎಂದರು.

ಇದೇ ವೇಳೆ ದೇವಾಲಯ ಸೇವಾ ಸಮಿತಿಯ ಸದಸ್ಯರು ಹಾಗೂ ಗ್ರಾಮಸ್ಥರು ಹಾಜರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ