ಆ್ಯಪ್ನಗರ

ಚೈನ್‌ ಕದ್ದ ಕಳ್ಳರಿಗೆ ಜನರಿಂದ ಗೂಸಾ

ಹಾಡಹಾಗಲೇ ಕಳ್ಳತನಕ್ಕೆ ಯತ್ನಿಸಿದ್ದ ಇಬ್ಬರು ಖದೀಮರಿಗೆ ಸಾರ್ವಜನಿಕರೇ ಹಿಗ್ಗಾಮುಗ್ಗಾ ಥಳಿಸಿ ಪೊಲೀಸರ ವಶಕ್ಕೆ ನೀಡಿರುವ ಪ್ರಕರಣ ಬುಧವಾರ ಬೆಳಗ್ಗೆ ನಡೆದಿದೆ.

Vijaya Karnataka 7 Feb 2019, 5:00 am
ರಾಮನಗರ: ಹಾಡಹಾಗಲೇ ಕಳ್ಳತನಕ್ಕೆ ಯತ್ನಿಸಿದ್ದ ಇಬ್ಬರು ಖದೀಮರಿಗೆ ಸಾರ್ವಜನಿಕರೇ ಹಿಗ್ಗಾಮುಗ್ಗಾ ಥಳಿಸಿ ಪೊಲೀಸರ ವಶಕ್ಕೆ ನೀಡಿರುವ ಪ್ರಕರಣ ಬುಧವಾರ ಬೆಳಗ್ಗೆ ನಡೆದಿದೆ.
Vijaya Karnataka Web goosea by people for stealing chains
ಚೈನ್‌ ಕದ್ದ ಕಳ್ಳರಿಗೆ ಜನರಿಂದ ಗೂಸಾ


ಏನಿದು ಘಟನೆ: ರಾಮನಗರದ ರಾಯರದೊಡ್ಡಿ ಬಳಿಯಲ್ಲಿರುವ ಮನೆಯಲ್ಲಿದ್ದ ಮಹಿಳೆ ಮೈಮೇಲಿದ್ದ ಚಿನ್ನದ ಚೈನ್‌ ಕದಿಯಲು ಪಯತ್ನಿಸಿದ್ದ ಅಕ್ರಂ ಪಾಷ (34) ಮುನರುಲ್‌ ಶೇಕ್‌ (21) ಎಂಬ ಇಬ್ಬರು ಖದೀಮರು ಇದೀಗ ಪೊಲೀಸರ ವಶದಲ್ಲಿದ್ದಾರೆ.

ಪಶ್ಚಿಮಬಂಗಾಳ ಮೂಲದ ಇಬ್ಬರು ಆರೋಪಿಗಳು, ಅನೇಕ ವರ್ಷಗಳಿಂದಲೂ ಬೆಂಗಳೂರಿನಲ್ಲಿ ವಾಸವಾಗಿದ್ದರು. ಕಳ್ಳತನ ಮಾಡುವ ಸಲುವಾಗಿ ತಮ್ಮ ನೀಲಿ ಬಣ್ಣದ ಡಿಯೋ ಮೊಪೆಡ್‌ನಲ್ಲಿ ಬಂದಿದ್ದ ಆರೋಪಿಗಳು ಕಳ್ಳತನಕ್ಕೆ ಪ್ರಯತ್ನಿಸಿದ್ದಾರೆ. ಸಿನಿಮಿಯ ರೀತಿಯಲ್ಲಿಯೇ ಒಬ್ಬ ಕಳ್ಳ ಮೊಪೆಡ್‌ ಸ್ಟಾರ್ಟ್‌ ಮಾಡಿಕೊಂಡು ಕಾಯುತ್ತಿದ್ದರೆ, ಇನ್ನೊಬ್ಬ ಖದೀಮ ಅಲ್ಲೇ ಪಕ್ಕದಲ್ಲೇ ಇದ್ದ ಮನೆಯಲ್ಲಿ ಕುಡಿಯಲು ನೀರು ಕೇಳುವ ನೆಪ ಮಾಡಿಕೊಂಡು ಹೋಗಿದ್ದಾನೆ.

ಈ ವೇಳೆ ಮಹಿಳೆ ಲತಾ ಎಂಬುವವರು ಕುಡಿಯಲು ನೀರು ನೀಡಿದ್ದಾರೆ. ನೀರು ಕುಡಿದ ಬಳಿಕ ಏಕಾಎಕೀ ಮಹಿಳೆಯ ಕುತ್ತಿಗೆಗೆ ಕೈ ಹಾಕಿದ ಕಳ್ಳ ಚೈನ್‌ ಕಸಿಯಲು ಮುಂದಾಗಿದ್ದಾನೆ. ಚೈನ್‌ ಕಸಿದು ಮೊಪೆಡ್‌ ಬಳಿ ಓಡುವಾಗ ಅಲ್ಲೇ ಇದ್ದ ಸಾರ್ವಜನಿಕರು ಕೂಡಲೇ ಕಳ್ಳರನ್ನು ಹಿಡಿದು ಹಿಗ್ಗಾಮುಗ್ಗ ಥಳಿಸಿದ್ದಾರೆ. ಬಳಿಕ ಐಜೂರು ಪೊಲೀಸರ ವಶಕ್ಕೆ ನೀಡಿದ್ದಾರೆ.

ಮಾರಕಾಸ್ತ್ರಗಳನ್ನು ತಂದಿದ್ದರು: ಮೊಪೆಡ್‌ ವಾಹನದಲ್ಲಿ ಖದೀಮರು ಚಾಕು, ಮಚ್ಚುಗಳನ್ನು ಸಹ ಅಡಗಿಸಿಟ್ಟಿದ್ದರು. ಕಳ್ಳರ ಮೊಪೆಡ್‌ ಅನ್ನು ಪೊಲೀಸರ ವಶಪಡಿಸಿಕೊಂಡಾಗ ಗಾಡಿಯಲ್ಲಿದ್ದ ಮಾರಕಾಸ್ತ್ರಗಳು ಬೆಳಕಿಗೆ ಬಂದಿವೆ. ಒಂಟಿ ಮನೆಗಳನ್ನೇ ಟಾರ್ಗೆಟ್‌ ಮಾಡಿಕೊಂಡಿದ್ದ ಖದೀಮರು ನಿರ್ಜನ ಪ್ರದೇಶಗಳಲ್ಲಿ ಮಾರಕಾಸ್ತ್ರಗಳನ್ನು ತೋರಿಸಿ ದರೋಡೆ ಮಾಡುತ್ತಿದ್ದರು ಎನ್ನಲಾಗಿದೆ. ಈ ಸಂಬಂಧ ಐಜೂರು ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಸಾರ್ವಜನಿಕರಲ್ಲಿ ಆತಂಕ: ಹಾಡಗಲೇ ಕಳ್ಳತನಕ್ಕೆ ಯತ್ನ ನಡೆದಿರುವುದು ಮಾತ್ರವಲ್ಲದೇ, ಮನೆಯಲ್ಲಿದ್ದ ಮಹಿಳೆಯ ಒಡವೆಯನ್ನು ಕಸಿದಿರುವುದು ಸಾರ್ವಜನಿಕರ ಆತಂಕಕ್ಕೆ ಕಾರಣವಾಗಿದೆ. ಈ ಸಂಬಂಧ ಪೊಲೀಸರು ಸೂಕ್ತ ಕ್ರಮಕೈಗೊಳ್ಳಬೇಕು. ಬೀಟ್‌ ವ್ಯವಸ್ಥೆಯನ್ನು ಹೆಚ್ಚಿಸಬೇಕು ಎಂಬುದು ಸಾರ್ವಜನಿಕರ ಆಗ್ರಹ.


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ