ಆ್ಯಪ್ನಗರ

ಕನಕಪುರ ತಹಸೀಲ್ದಾರ್‌ಗೆ ಕಿರುಕುಳ, ಡಿಕೆ ಸಹೋದರರ ವಿರುದ್ಧ ಆಕ್ರೋಶ

ಕನಕಪುರ ತಾಲೂಕಿನಲ್ಲಿ ಉತ್ತಮ ಕೆಲಸ ಮಾಡುತ್ತಿರುವ ತಹಸೀಲ್ದಾರ್‌ ವರ್ಷಾ ಒಡೆಯರ್‌ಗೆ ತಮ್ಮ ಚೇಲಾಗಳ ಮೂಲಕ ಕಿರುಕುಳ ನೀಡುವುದನ್ನು ನಿಲ್ಲಿಸಬೇಕು ಎಂದು ಡಿಕೆ ಸಹೋದರರಿಗೆ ಮೇಕೆದಾಟು ಹೋರಾಟ ಸಮಿತಿಯ ಅಧ್ಯಕ್ಷ ಮಲ್ಲಪ್ಪ ಎಚ್ಚರಿಸಿದ್ದಾರೆ.

Vijaya Karnataka Web 13 Jan 2021, 5:19 pm
ಕನಕಪುರ: ಕಳೆದ ಲೋಕಸಭೆ ಚುನಾವಣೆಯಲ್ಲಿ ಮಂಡ್ಯ ಕ್ಷೇತ್ರದ ಫಲಿತಾಂಶದಿಂದ ಡಿಕೆ ಸಹೋದರರು ಪಾಠ ಕಲಿತುಕೊಳ್ಳಬೇಕು. ತಾಲೂಕಿನಲ್ಲಿ ಉತ್ತಮ ಕೆಲಸ ಮಾಡುತ್ತಿರುವ ತಹಸೀಲ್ದಾರ್‌ ವರ್ಷಾ ಒಡೆಯರ್‌ಗೆ ತಮ್ಮ ಚೇಲಾಗಳ ಮೂಲಕ ಕಿರುಕುಳ ನೀಡುವುದನ್ನು ನಿಲ್ಲಿಸಬೇಕು ಎಂದು ಮೇಕೆದಾಟು ಹೋರಾಟ ಸಮಿತಿಯ ಅಧ್ಯಕ್ಷ ಮಲ್ಲಪ್ಪ ಎಚ್ಚರಿಸಿದ್ದಾರೆ.
Vijaya Karnataka Web DK Shivakumar


ತಹಸೀಲ್ದಾರ್‌ ವರ್ಷಾ ಒಡೆಯರ್‌ಗೆ ನೈತಿಕ ಬೆಂಬಲ ಘೋಷಿಸಿ ಕನಕಪುರದ ತಾಲೂಕು ಕಚೇರಿ ಮುಂಭಾಗದಲ್ಲಿ ಮಂಗಳವಾರ ಆಯೋಜಿಸಿದ್ದ ಬೈಕ್‌ ಜಾಥಾಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಅನಾವಶ್ಯಕ ಕಿರುಕುಳ:
ಈ ಹಿಂದಿನ ತಹಸೀಲ್ದಾರ್‌ಗಳು ಮಾಡುತ್ತಿದ್ದಂತೆ ತಾವು ಹಾಕಿದ ತಾಳಕ್ಕೆ ತಕ್ಕಂತೆ ಕುಣಿಯುತ್ತಿಲ್ಲಎಂಬ ಏಕೈಕ ಕಾರಣಕ್ಕಾಗಿ ಡಿಕೆ ಸಹೋದರರು, ತಮ್ಮ ಚೇಲಾಗಳ ಮೂಲಕ ನಾನಾ ರೀತಿಯ ಕಿರುಕುಳ ನೀಡಿ ಹೆಣ್ಣು ಮಗಳ ಕಣ್ಣಲ್ಲಿನೀರು ಹಾಕಿಸುತ್ತಿದ್ದಾರೆ. ತಹಸೀಲ್ದಾರ್‌ಗೆ ಕಾನೂನು ಪ್ರಕಾರ ಕೆಲಸ ಮಾಡಲು ಬಿಡುತ್ತಿಲ್ಲ, ಇದೇ ಪ್ರವೃತ್ತಿಯನ್ನು ಮುಂದುವರಿಸಿದರೆ ಬಡಪಾಯಿ ಹೆಣ್ಣು ಮಗಳ ಶಾಪ ನಿಮಗೆ ತಟ್ಟದೇ ಬಿಡುವುದಿಲ್ಲಎಂದು ಅವರು ಎಚ್ಚರಿಸಿದರು.

ಬದುಕಿರುವಾಗಲೇ ದಿವ್ಯಾಂಗನನ್ನು ಕೊಂದ ಕಂದಾಯ ಇಲಾಖೆ: ಮಾಶಾಸನ ರದ್ದು, ಸಂಕಷ್ಟದಲ್ಲಿ ಬಡ ಕುಟುಂಬ!

ಜನರು ಪಾಠ ಕಲಿಸುತ್ತಾರೆ:

ಮಂಡ್ಯ ಲೋಕಸಭಾ ಕ್ಷೇತ್ರದ ಚುನಾವಣೆ ಫಲಿತಾಂಶದಿಂದ ನೀವು ಪಾಠ ಕಲಿತುಕೊಂಡಿಲ್ಲ. ಅಸಹಾಯಕ ಹೆಣ್ಣು ಮಗಳಾದ ಸುಮಲತಾ ಅವರಿಗೆ ನಿಮ್ಮ ಸರಕಾರ ಚುನಾವಣೆ ವೇಳೆ ಇನ್ನಿಲ್ಲದ ಕಿರುಕುಳ ನೀಡಿದರಿ, ನಿಮ್ಮ ಹಿಂಸೆ ತಾಳಲಾರದೇ ಆವರು ಕ್ಷೇತ್ರದ ಜನರ ಮುಂದೆ ಸೆರಗೊಡ್ಡಿ ಬೇಡಿಕೊಂಡರು. ಅವರ ಕಣ್ಣೀರಿಗೆ ಕರಗಿದ ಜನತೆ ಚುನಾವಣೆಯಲ್ಲಿಆಶೀರ್ವಾದ ಮಾಡಿ, ನಿಮ್ಮ ಸರಕಾರದ ಪತನಕ್ಕೆ ನಾಂದಿ ಹಾಡಿದರು. ಇಲ್ಲೂಅದೇ ಫಲಿತಾಂಶ ಪುನರಾವರ್ತನೆಯಾಗಲಿದೆ. ತಹಸೀಲ್ದಾರ್‌ಗೆ ನೀವು ನೀಡುತ್ತಿರುವ ಹಿಂಸೆಯಿಂದ ಜನ ರೊಚ್ಚಿಗೆದ್ದು ನಿಮಗೂ ಪಾಠ ಕಲಿಸಲಿದ್ದಾರೆ ಎಂದು ಅವರು ಹೇಳಿದರು.

‘ನಾನು ಸಾವಿರ ಕೋಟಿ ಕೊಟ್ಟರೂ, ಕನಕಪುರಕ್ಕೆ ಬಿಎಸ್‌ವೈ ಬಿಡಿಗಾಸು ಕೊಟ್ಟಿಲ್ಲ’-ಡಿಕೆಶಿ ಕಿಡಿ

ಕಾರ್ಯಕ್ರಮದಲ್ಲಿಅಂಬೇಡ್ಕರ್‌ ಯುವಶಕ್ತಿ ಸಂಘದ ಅಧ್ಯಕ್ಷರಾದ ವಿ. ಬಾಬು ಮಾತನಾಡಿ , ತಹಸೀಲ್ದಾರ್‌ಗೆ ನೀಡುತ್ತಿರುವ ಕಿರುಕುಳ ನಿಲ್ಲಿಸದಿದ್ದರೆ ಬೀದಿಗಿಳಿದು ಹೋರಾಟ ನಡೆಸುತ್ತೇವೆ. ಇದಕ್ಕೆ ಮುನ್ನುಡಿಯೆಂಬಂತೆ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸುವ ಮೂಲಕ ಸಾಂಕೇತಿಕ ಹೋರಾಟ ಆರಂಭಿಸುತ್ತೇವೆ ಎಂದರು. ಪ್ರತಿಭಟನೆಯಲ್ಲಿಜೆಡಿಎಸ್‌ ಮುಖಂಡ ಸೋಮಣ್ಣ, ಕನ್ನಡಪರ ಸಂಘಟನೆ ಆಂಜನಪ್ಪ, ಬಿಜೆಪಿ ಮೋರ್ಚಾದ ಶಿವಮುತ್ತು, ಶೇಖರ್‌, ಮಲ್ಲೇಶ್‌, ಸತೀಶ್‌ ಸೇರಿದಂತೆ ಹಲವರು ಪಾಲ್ಗೊಂಡಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ