ಆ್ಯಪ್ನಗರ

ಚನ್ನಪಟ್ಟಣದ ಅಂಬೇಡ್ಕರ್ ಭವನ ಉದ್ಘಾಟಿಸಿದ ಎಚ್.ಡಿ.ಕುಮಾರಸ್ವಾಮಿ

ಚನ್ನಪಟ್ಟಣ ತಾಲೂಕಿನ ಅಂಬೇಡ್ಕರ್ ಭವನಕ್ಕೆ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಶುಕ್ರವಾರ ಉದ್ಘಾಟಿಸುವ ಮೂಲಕ ತಾಲೂಕಿನ ಜನತೆಯ ಬಹುದಿನದ ಕನಸನ್ನು ಸಾಕಾರಗೊಳಿಸಿದ್ದಾರೆ.

Vijaya Karnataka Web 22 Jan 2021, 5:58 pm
ರಾಮನಗರ: ಚನ್ನಪಟ್ಟಣ ತಾಲೂಕಿನ ಅಂಬೇಡ್ಕರ್ ಭವನಕ್ಕೆ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಶುಕ್ರವಾರ ಉದ್ಘಾಟಿಸುವ ಮೂಲಕ ತಾಲೂಕಿನ ಜನತೆಯ ಬಹುದಿನದ ಕನಸನ್ನು ಸಾಕಾರಗೊಳಿಸಿದರು.

ನಗರದ ಬಿಎಂ ರಸ್ತೆಯಲ್ಲಿರುವ ಡಾ.ಬಿ.ಆರ್‌.ಅಂಬೇಡ್ಕರ್ ಭವನ ಉದ್ಘಾಟನೆಗೆ ರಾಜಕೀಯ ರಂಗು ಇತ್ತು. ಸಚಿವ ಸಿ.ಪಿ.ಯೋಗೇಶ್ವರ್ ಬೆಂಬಲಿಗರು ಸದ್ಯಕ್ಕೆ ಭವನ ಉದ್ಘಾಟನೆ ಬೇಡ ಎನ್ನುತ್ತಿದ್ದರೆ, ಶಾಸಕ ಹೆಚ್.ಡಿ.ಕುಮಾರಸ್ವಾಮಿ ಭವನ ಉದ್ಘಾಟನೆ ನಡೆಸುವಂತೆ ಅಧಿಕಾರಿಗಳಿಗೆ ತಾಕೀತು ಮಾಡಿದ್ದರು. ಈ ಬೆನ್ನಲ್ಲಿ ಚನ್ನಪಟ್ಟಣದಲ್ಲಿ ಹಾಲಿ - ಮಾಜಿ ಶಾಸಕರ ರಾಜಕೀಯ ಯುದ್ಧ ಶುರುವಾಯಿತು ಎಂಬ ಮಾತು ಕೇಳಿ ಬಂದಿತ್ತು.

ಇದರಿಂದ ಭವನ ಉದ್ಘಾಟನೆ ವೇಳೆ ಮುಂಜಾಗ್ರತಾ ಕ್ರಮವಾಗಿ‌ ಗಲಾಟೆಯಾಗುತ್ತದೆ ಎಂಬ ಹಿನ್ನಲೆಯಲ್ಲಿ ಬಿಗಿ ಪೋಲಿಸ್ ಬಂದೂಬಸ್ತ್ ಕಲ್ಪಿಸಿದ್ದರು. ಸಮಾರಂಭವು ಯಾವುದೇ ಅಡ್ಡಿ ಆತಂಕಗಳಿಲ್ಲದೆ ನಿರಾಂತವಾಗಿ ಸಾಗಿತು.

ಅಮಿತ್‌ ಶಾ ಭಾಷಣ ಕೇಳಿ ನಗು ಬರ್ತಿತ್ತು: ಎಚ್‌ಡಿ ಕುಮಾರಸ್ವಾಮಿ ವ್ಯಂಗ್ಯ

ಸಮಾಜ ಕಲ್ಯಾಣ ಇಲಾಖೆ ಸಚಿವ ಶ್ರೀರಾಮುಲು ಜ್ಯೋತಿ ಬೆಳಗುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ಕೊಟ್ಟರು. ನಂತರ ಮಾತನಾಡಿದ ಅವರು, ನನ್ನ ಮಾಜಿ ಸಿಎಂ ಹೆಚ್ಡಿಕೆ ಕುಮಾರಸ್ವಾಮಿ ರವರ ಸಂಬಂದ ಹಳೆಯದ್ದು, ಈ ಹಿಂದೆ ಸಮ್ಮಿಶ್ರ ಸರ್ಕಾರ ಇದ್ದಾಗ ನಾನು ಇವರ ಕೈ ಕೆಳೆಗೆ ಸಚಿವನಾಗಿ ಕೆಲಸ ಮಾಡಿದ್ದೇನೆ. ನಮ್ಮಿಬ್ಬರ ಪಕ್ಷ ಬೇರೆ ಬೇರೆ ಇರಬಹುದು ಆದ್ರೆ ವೈಯಕ್ತಿಕವಾಗಿ ನಾನು ಕುಮಾರಸ್ವಾಮಿ ರವರು ಚೆನ್ನಾಗಿಯೇ ಇದ್ದೇವೆ ಎಂದರು.

ಶಿವಮೊಗ್ಗ ಸ್ಫೋಟ ದುರಂತದ ಬಗ್ಗೆ ರಾಜ್ಯ ಸರ್ಕಾರ ತನಿಖೆ ನಡೆಸಬೇಕು; ಎಚ್‌ಡಿಕೆ ಆಗ್ರಹ

ನಂತ್ರ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕ್ಷೇತ್ರದ ಶಾಸಕ ಕುಮಾರಸ್ವಾಮಿ ಮಾತನಾಡಿ, ಕ್ಷೇತ್ರದ ಕೆಲಸ ಮಾಡುವಾಗ ರಾಜಕೀಯ ಬೇಡ. ಚುನಾವಣೆ ಬಂದಾಗ ರಾಜಕೀಯ ಮಾಡೋಣ. ಈ ಕ್ಷೇತ್ರದಲ್ಲಿ ಒಮ್ಮೆ ಶಾಸಕನಾಗಿ ಆಯ್ಕೆಯಾದ ಮೇಲೆ ಕ್ಷೇತ್ರದ ಅಭಿವೃದ್ಧಿಗೆ ನಾನು ರಾಜಕೀಯ ಮಾಡೋಲ್ಲ.

ಈಗ ಸಚಿವರಾಗುವ ಅವಕಾಶ ನಿಮಗೆ ಬಂದಿದೆ. ಒಳ್ಳೆಯ‌ ಕಲಸ ಮಾಡಿ. ಒಳ್ಳೆಯ ಕೆಲಸ ಮಾಡಿದ್ರೆ ನಾನು ಕೂಡ ನಿಮ್ಮ‌ಜೊತೆಯಲ್ಲೆ ಇರುವೆ. ರಾಜಕೀಯ ಬಂದಾಗ ಇಬ್ಬರು ರಾಜಕೀಯ ಮಾಡೋಣ ಎಂದು ಸಚಿವ ಸಿಪಿವೈಗೆ ಕುಮಾರಸ್ವಾಮಿ ವೇದಿಕೆಯಲ್ಲೆ ಟಾಂಗ್ ಕೊಟ್ಟರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ