ಆ್ಯಪ್ನಗರ

ಚನ್ನಪಟ್ಟಣ ಬಳಿ ಹೈಟೆಕ್‌ ಮಾರ್ಕೆಟ್‌ ನಿರ್ಮಾಣವಾಗಬೇಕು: ಎ ಮಂಜು

ಚನ್ನಪಟ್ಟಣದ ಬಳಿ ಹೈಟೆಕ್ ಮಾರ್ಕೆಟ್ ನಿರ್ಮಾಣವಾಗಬೇಕು. ಈಗ ಮಾರ್ಕೆಟ್ 2 ಎಕರೆಯಲ್ಲಿದೆ. ಆದರೆ ಚನ್ನಪಟ್ಟಣದ ಬಳಿ ಮಾರ್ಕೆಟ್ ನಿರ್ಮಾಣವಾದರೆ ರೈತರಿಗೆ ಅನುಕೂಲವಾಗಲಿದೆ ಮಾಗಡಿ ಶಾಸಕ ಎ ಮಂಜು ತಿಳಿಸಿದರು.

Vijaya Karnataka Web 22 Feb 2021, 6:17 pm
ರಾಮನಗರ: ರಾಮನಗರದಲ್ಲಿ ರೇಷ್ಮೆ ಮಾರುಕಟ್ಟೆ ನಿರ್ಮಾಣ ಕುರಿತು ಈಗಾಗಲೇ ಸಾಕಷ್ಟು ವಿವಾದ ಭುಗಿಲೆದ್ದಿದೆ. ಆದರೆ ಇದಕ್ಕೆ ಸೂಕ್ತ ಪರಿಹಾರ ಕಂಡುಕೊಳ್ಳಬೇಕು ಎಂದು ಮಾಗಡಿ ಶಾಸಕ ಎ ಮಂಜು ತಿಳಿಸಿದ್ದಾರೆ.
Vijaya Karnataka Web ಮಾಗಡಿ ಶಾಸಕ
ಮಾಗಡಿ ಶಾಸಕ


ರಾಮನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಎ ಮಂಜು, ಚನ್ನಪಟ್ಟಣದಲ್ಲಿ ಹೈಟೆಕ್‌ ಮಾರುಕಟ್ಟೆ ನಿರ್ಮಾಣವಾಗಬೇಕು ಎಂದರು.

ಈ ವಿಚಾರವಾಗಿ ರಾಮನಗರ ಬಂದ್ ನಡೆದ ಹಿನ್ನೆಲೆಯಲ್ಲಿ ಶಾಸಕರು ಕೆಲವು ಮಹತ್ವದ ವಿಷಯಗಳ ಕುರಿತು ಗಮನ ಸೆಳೆದರು.

ಚನ್ನಪಟ್ಟಣದ ಬಳಿ ಹೈಟೆಕ್ ಮಾರ್ಕೆಟ್ ನಿರ್ಮಾಣವಾಗಬೇಕು. ಈಗ ಮಾರ್ಕೆಟ್ 2 ಎಕರೆಯಲ್ಲಿದೆ. ಆದರೆ ಚನ್ನಪಟ್ಟಣದ ಬಳಿ ಮಾರ್ಕೆಟ್ ನಿರ್ಮಾಣವಾದರೆ ರೈತರಿಗೆ ಅನುಕೂಲವಾಗಲಿದೆ ಎಂದರು.

ರಾಜ್ಯ ಹಾಗೂ ಹೊರರಾಜ್ಯದಿಂದ ಗೂಡು ಬರುತ್ತಿದೆ. ರೈತರ ಹಿತಕ್ಕಾಗಿ ಹೈಟೆಕ್ ಮಾರ್ಕೆಟ್ ನಿರ್ಮಾಣ ಮಾಡಲಾಗುತ್ತಿದೆ. ಇದರಿಂದಾ ರೇಷ್ಮೆ ಬೆಳೆಗಾರರಿಗೆ ಸಾಕಷ್ಟು ಅನುಕೂಲವಾಗಲಿದೆ. ರೈತರಿಗೆ ಅನುಕೂಲವಾಗಬೇಕಾದರೆ ಹೈಟೆಕ್ ಮಾರ್ಕೆಟ್ ಬೇಕಿದೆ ಎಂದು ಶಾಸಕರು ತಿಳಿಸಿದರು.

ರಾಮನಗರ, ಚನ್ನಪಟ್ಟಣದಲ್ಲಿ ರೇಷ್ಮೆ ಬೆಳೆಗಾರರು ಹೆಚ್ಚಾಗಿದರೆ, ಎರಡು ಭಾಗದ ರೈತರಿಗೆ ಅನುಕೂಲವಾಗಬೇಕು. ಈ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಬೇಕಾಗಿದೆ ಎಂದು ಎ ಮಂಜು ವಿವರಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ