ಆ್ಯಪ್ನಗರ

ಯೋಧರ ಕ್ಷೇಮಕ್ಕಾಗಿ ಹೋಮ ಹವನ ನಾಳೆ

ದೇಶದ ರಕ್ಷಣೆಯಲ್ಲಿ ನಿರತರಾಗಿರುವ ಯೋಧರ ಕ್ಷೇಮಕ್ಕಾಗಿ ಪಕ್ಷದ ವತಿಯಿಂದ ಶನಿವಾರ ಬೆಳಿಗ್ಗೆ ಮಹಾಮೃತ್ಯುಂಜಯ ಹೋಮ ಹಾಗೂ ಧನ್ವಂತರಿ ಆಯುಷ್ಯಾ ಹೋಮ ...

Vijaya Karnataka 1 Mar 2019, 5:00 am
ರಾಮನಗರ: ದೇಶದ ರಕ್ಷಣೆಯಲ್ಲಿ ನಿರತರಾಗಿರುವ ಯೋಧರ ಕ್ಷೇಮಕ್ಕಾಗಿ ಪಕ್ಷದ ವತಿಯಿಂದ ಶನಿವಾರ ಬೆಳಿಗ್ಗೆ ಮಹಾಮೃತ್ಯುಂಜಯ ಹೋಮ ಹಾಗೂ ಧನ್ವಂತರಿ ಆಯುಷ್ಯಾ ಹೋಮ ಹಮ್ಮಿಕೊಳ್ಳಲಾಗಿದೆ ಎಂದು ಬಿಜೆಪಿ ಯುವ ಜಿಲ್ಲಾ ಮೋರ್ಚಾದ ಅಧ್ಯಕ್ಷ ವರದರಾಜಗೌಡ ತಿಳಿಸಿದರು.
Vijaya Karnataka Web homa havan tomorrow for the warriors health
ಯೋಧರ ಕ್ಷೇಮಕ್ಕಾಗಿ ಹೋಮ ಹವನ ನಾಳೆ


ಪಕ್ಷದ ಕಚೇರಿ ಆವರಣದಲ್ಲಿ ಗುರುವಾರ ಹಮ್ಮಿಕೊಳ್ಳಲಾಗಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಯೋಧರು ಹಗಲು ರಾತ್ರಿ ಎನ್ನದೇ ಗಡಿಯಲ್ಲಿ ನಮ್ಮ ದೇಶವನ್ನು ರಕ್ಷಿಸುತ್ತಿದ್ದಾರೆ. ಅವರ ಶಕ್ತಿ ಹೆಚ್ಚಿಸುವಂತೆ ವಿಶೇಷ ಪೂಜೆ ಮೂಲಕ ದೇವರಲ್ಲಿ ಪ್ರಾರ್ಥಿಸಲಾಗುವುದು ಎಂದರು.

ನಗರದ ಶ್ರೀರಾಮದೇವರ ಬೆಟ್ಟದ ಹೆಬ್ಬಾಗಿಲಿನ ಶ್ರೀ ಅಭಯ ಆಂಜನೇಯ ಸ್ವಾಮಿ ಪ್ರತಿ ಮೆ ಹತ್ತಿರದ ದೇವಾಲಯದಲ್ಲಿ ಬೆಳಗ್ಗೆ 7.30ಕ್ಕೆ ಹೋಮ ಕಾರ‍್ಯ ಪ್ರಾರಂಭವಾಗಲಿದ್ದು, ಬೆಳಗ್ಗೆ 10.45ಕ್ಕೆ ಪೂರ್ಣಾವತಿ ಆಗಲಿದೆ ಎಂದು ಹೇಳಿದರು.

ಹೋಮ ಕಾರ‍್ಯಕ್ರಮದಲ್ಲಿ ಗಡಿ ರಕ್ಷಣೆಯಲ್ಲಿ ನಿರತರಾಗಿ ಬಿಎಸ್‌ಎಫ್‌ ಹಾಗೂ ಸಿಆರ್‌ಪಿಎಫ್‌ ಅಯೋಧರ 25 ಕುಟುಂಬಗಳು ಭಾಗವಹಿಸಲಿದೆ. ವಿಶೇಷ ಪೂಜೆಯ ನಂತರ ಬಲಿಷ್ಠ ಭಾರತಕ್ಕಾಗಿ ಕೈ ಜೋಡಿಸಿ ಎಂಬ ಧ್ಯೇಯ ವಾಕ್ಯದೊಂದಿಗೆ ಬೈಕ್‌ ರಾರ‍ಯಲಿ ಹಮ್ಮಿಕೊಳ್ಳಲಾಗಿದೆ. ನಗರದ ಪ್ರಮುಖ ಬೀದಿಯಲ್ಲಿ ರಾರ‍ಯಲಿ ಸಂಚರಿಸಲಿದೆ ಎಂದು ಹೇಳಿದರು.

ಯೋಧರ ಕಾರ‍್ಯವಾಗಿರುವುದರಿಂದ ಎಲ್ಲಾ ಪಕ್ಷದ ಪ್ರಮುಖರನ್ನು ಆಹ್ವಾನಿಸಲಾಗುತ್ತದೆ. ಪಕ್ಷತೀತವಾಗಿರುವ ಈ ಕಾರ‍್ಯಕ್ಕೆ ಎಲ್ಲಾರೂ ಪಾಲ್ಗೊಳ್ಳುತ್ತಾರೆ ಎಂಬ ನಿರೀಕ್ಷೆ ಇದೆ ಎಂದು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ತಾಲೂಕು ಬಿಜೆಪಿ ಅಧ್ಯಕ್ಷ ಪ್ರವೀಣ್‌ ಗೌಡ, ಪದಾಧಿಕಾರಿಗಳಾದ ಶಬರೀಶ್‌, ರಾಜೇಶ್‌, ಶಿವಸ್ವಾಮಿ, ಕುಮಾರ್‌, ಅಪ್ಪಿ ಮತ್ತಿತರರು ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ