ಆ್ಯಪ್ನಗರ

ಪೌರಕಾರ್ಮಿಕರಿಗೆ ಜಿ+2 ಮಾದರಿಯಲ್ಲಿ ಮನೆ ನಿರ್ಮಾಣ

ನಗರದ ನಾಗರಿಕರ ಸೇವೆಯನ್ನು ಮಾಡುವ ಪೌರಕಾರ್ಮಿಕರಿಗೆ ಸ್ವಚ್ಛಂದವಾದ ಮನೆ ನಿರ್ಮಾಣ ಮಾಡುವ ಸಲುವಾಗಿ ಗಾಳಿ, ಬೆಳಕು ಉತ್ತಮವಾಗಿ ಬರುವಂತೆ ಜಿ+2 ಮಾದರಿಯಲ್ಲಿ ಮನೆಯನ್ನು ನಿರ್ಮಾಣ ಮಾಡುವುದಾಗಿ ವೈದ್ಯಕೀಯ ಶಿಕ್ಷ ಣ ಸಚಿವ ಡಿ.ಕೆ. ಶಿವಕುಮಾರ್‌ ಹೇಳಿದರು.

Vijaya Karnataka 5 Dec 2018, 5:00 am
ಕನಕಪುರ: ನಗರದ ನಾಗರಿಕರ ಸೇವೆಯನ್ನು ಮಾಡುವ ಪೌರಕಾರ್ಮಿಕರಿಗೆ ಸ್ವಚ್ಛಂದವಾದ ಮನೆ ನಿರ್ಮಾಣ ಮಾಡುವ ಸಲುವಾಗಿ ಗಾಳಿ, ಬೆಳಕು ಉತ್ತಮವಾಗಿ ಬರುವಂತೆ ಜಿ+2 ಮಾದರಿಯಲ್ಲಿ ಮನೆಯನ್ನು ನಿರ್ಮಾಣ ಮಾಡುವುದಾಗಿ ವೈದ್ಯಕೀಯ ಶಿಕ್ಷ ಣ ಸಚಿವ ಡಿ.ಕೆ. ಶಿವಕುಮಾರ್‌ ಹೇಳಿದರು.
Vijaya Karnataka Web home construction for civic workers in g 2
ಪೌರಕಾರ್ಮಿಕರಿಗೆ ಜಿ+2 ಮಾದರಿಯಲ್ಲಿ ಮನೆ ನಿರ್ಮಾಣ


ಕನಕಪುರ ನಗರದ ಪೈಪ್‌ಲೈನ್‌ ಹತ್ತಿರದ ನೀಲಕಂಠೇಶ್ವರ ಶಾಲೆಯ ಬಳಿಯ 10 ಗುಂಟೆ ಜಾಗದಲ್ಲಿ 43 ಮಂದಿ ಪೌರಕಾರ್ಮಿಕರಿಗೆ ಸುಮಾರು 3.59 ಕೋಟಿ ರೂ. ವೆಚ್ಚದಲ್ಲಿ ಮನೆ ನಿರ್ಮಾಣ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಿ ಮಾತನಾಡಿದರು.

''ಸರಕಾರದ ವಿವಿಧ ಯೋಜನೆಗಳನ್ನು ಒಗ್ಗೂಡಿಸಿಕೊಂಡು ಈ ಯೋಜನೆ ರೂಪಿಸಿದ್ದು, ಇದರಿಂದ ಪೌರಕಾರ್ಮಿಕರಿಗೆ ಸುಸಜ್ಜಿತ ಮತ್ತು ಶಾಶ್ವತವಾದ ಮನೆಗಳನ್ನು ನಿರ್ಮಾಣ ಮಾಡುತ್ತಿದ್ದು, ಪೌರಕಾರ್ಮಿಕರ ಹಲವಾರು ವರ್ಷದ ಬೇಡಿಕೆಯನ್ನು ಈ ಮೂಲಕ ಈಡೇರಿಸಲಾಗುತ್ತಿದೆ. ಈ ಹಿಂದೆ ವಸತಿಭಾಗ್ಯ ಯೋಜನೆಯಡಿಯಲ್ಲಿ ಟೆಂಡರ್‌ ಪ್ರಕ್ರಿಯೆ ಪೂರ್ಣಗೊಳಿಸಲಾಗಿತ್ತು. ಒತ್ತಡದ ನಡುವೆ ಕಾಮಕಾರಿ ಅನುಷ್ಠಾನಕ್ಕೆ ಸಾಧ್ಯವಾಗಿರಲಿಲ್ಲ ಈಗ ಅನುಷ್ಠಾನಗೊಳಿಸಲಾಗುತ್ತಿದೆ,'' ಎಂದರು.

''ದಿನ ಬೆಳಗಾದರೆ ಪೌರಕಾರ್ಮಿಕರಿಲ್ಲದೆ ನಗರದ ಸ್ವಚ್ಛತೆ ಇರಲಾರದು. ಅಂತಹ ಪೌರಕಾರ್ಮಿಕರ ಕನಸಿನ ಮನೆಯನ್ನು ನಿರ್ಮಾಣ ಮಾಡುವ ಹೊಣೆ ಹೊತ್ತಿರುವ ಗುತ್ತಿಗೆದಾರರು ಮನೆ ನಿರ್ಮಾಣದಲ್ಲಿ ಯಾವುದೇ ರಾಜಿ ಇಲ್ಲದೆ ಉತ್ತಮ ಹಾಗೂ ಗುಣಮಟ್ಟದ ನಿರ್ಮಾಣ ಮಾಡಬೇಕು,'' ಎಂದು ಗುತ್ತಿಗೆದಾರರಿಗೆ ತಿಳಿಸಿದರು. ''ಪೌರಕಾರ್ಮಿಕರು ಸಹ ಇತರರಂತೆ ನಗರದಲ್ಲಿ ಸ್ವಂತ ಮನೆ ಹೊಂದುವ ಆಸೆ ಈಡೇರಿಸಲಾಗುತ್ತಿದೆ,'' ಎಂದರು.

ವಿಧಾನ ಪರಿಷತ್‌ ಸದಸ್ಯರಾದ ಎಸ್‌.ರವಿ, ನಗರಸಭೆ ಅಧ್ಯಕ್ಷ ಕೆ.ಎಂ. ಮಲ್ಲೇಶ್‌, ಉಪಾಧ್ಯಕ್ಷ ಮುಜೀಬುಲ್ಲ, ಸದಸ್ಯರಾದ ಆರ್‌. ಕೃಷ್ಣಮೂರ್ತಿ, ರವಿ ಶಿವರಾಮಾಚಾರಿ, ಲೋಕೇಶ್‌, ಅಮ್ಜದ್‌ ಆಲಿಖಾನ್‌, ನಗರಸಭೆ ಆಯುಕ್ತೆ ರಮಾಮಣಿ, ವ್ಯವಸ್ಥಾಪಕ ರಾಮದಾಸು, ಎಂಜಿನಿಯರ್‌ ವಿಜಯ್‌ಕುಮಾರ್‌, ಗುತ್ತಿಗೆದಾರ ಅರವಿಂದ್‌ ಸೇರಿದಂತೆ ಅನೇಕರು ಹಾಜರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ