ಆ್ಯಪ್ನಗರ

ಒಕ್ಕಲಿಗ ಎನ್ನಿಸಿಕೊಳ್ಳುವುದೇ ಒಂದು ಭಾಗ್ಯ: ಡಿ.ಕೆ. ಶಿವಕುಮಾರ್‌ ಅಸ್ಮಿತೆ

ನಾನು ಏನೇ ಮಾಡಿದರೂ ಒಕ್ಕಲಿಗ ಎಂದೇ ಗುರುತಿಸುತ್ತಾರೆ. ಎಲ್ಲರಿಂದಲೂ ಒಕ್ಕಲಿಗ ಎನಿಸಿಕೊಳ್ಳಲು ಸಾಧ್ಯವಿಲ್ಲ. ಒಕ್ಕಲಿಗ ಎನ್ನಿಸಿಕೊಳ್ಳುವುದೇ ಒಂದು ಭಾಗ್ಯ ಎಂದು ಮಾಜಿ ಸಚಿವ ಡಿ.ಕೆ. ಶಿವಕುಮಾರ್‌ ಬಧವಾರ ರಾಮನಗರದಲ್ಲಿ ಹೇಳಿದರು.

Vijaya Karnataka Web 25 Dec 2019, 3:25 pm
ರಾಮನಗರ: ಕರ್ನಾಟಕ ವಿಚಾರ ಬಂದಾಗೆಲ್ಲ 5 "ಕೆ" ಗಳನ್ನ ಸ್ಮರಿಸಲೇಬೇಕು. ಅಂದರೆ ಬೆಂಗಳೂರು ಕಟ್ಟಿದ 'ಕೆಂಪೇಗೌಡ', ವಿಧಾನಸೌಧ ಕಟ್ಟಿದ 'ಕೆಂಗಲ್ ಹನುಮಂತಯ್ಯ', ವಿಶ್ವಮಾನವತೆ ಸಾರಿದ 'ಕುವೇಂಪು', ವಿಕಾಸಸೌಧ ಕಟ್ಟಿದ ಎಸ್ ಎಂ ಕೃಷ್ಣ, ಬೆಳಗಾವಿ ಸುವರ್ಣ ಸೌಧ ಕಟ್ಟಿದ 'ಕುಮಾರಸ್ವಾಮಿ' ಈ ಐವರನ್ನು ಸ್ಮರಿಸಬೇಕು ಎಂದು ಮಾಜಿ ಸಚಿವ ಡಿ ಕೆ ಶಿವಕುಮಾರ್ ಹೇಳಿದರು.
Vijaya Karnataka Web DKS new


ರಾಮನಗರದ ಜಿಲ್ಲಾ ಒಕ್ಕಲಿಗರ ಭವನ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದರು. ದೇವೇಗೌಡರು ಮುಖ್ಯಮಂತ್ರಿ ಆಗಿದ್ದಾಗಲೇ‌ ಪುಟ್ಟಪರ್ತಿ ಸಾಯಿಬಾಬಾ ಅವರು ದೇವೇಗೌಡರಿಗೆ ಪ್ರಧಾನಮಂತ್ರಿ ಅಂತಾ ಹೇಳಿದ್ರು. ನಾನು ಏನೇ ಮಾಡಿದ್ರು ನನ್ನನ್ನು ಒಕ್ಕಲಿಗ ಅಂತಲೇ ಗುರುತಿಸುತ್ತಾರೆ. ಒಕ್ಕಲಿಗ ಎಂದೇ ಮಂತ್ರಿ ಪದವಿ ಮತ್ತೊಂದು ನೀಡುತ್ತಾರೆ . ಎಲ್ಲರಿಂದಲೂ ಒಕ್ಕಲಿಗ ಎನಿಸಿಕೊಳ್ಳಲು ಸಾಧ್ಯವಿಲ್ಲ. ಒಕ್ಕಲಿಗ ಎಂದು ಅನ್ನಿಸಿಕೊಳ್ಳುವುದೇ ಭಾಗ್ಯ ಎಂದು ಹೇಳಿದರು.

ಕೆಂಗಲ್ ಹನುಮಂತಯ್ಯನವರು ಬೆಂಗಳೂರನ್ನ ರಾಜಧಾನಿ ಮಾಡದಿದ್ದರೆ ಒಕ್ಕಲಿಗರ ಪರಿಸ್ಥಿತಿ ಏನಾಗುತ್ತಿತ್ತು ಎಂಬುದನ್ನು ಊಹಿಸಿಕೊಳ್ಳಲೂ ಅಸಾಧ್ಯ. ಒಕ್ಕಲಿಗರು ಬೇರೆಯವರನ್ನ ತುಳಿದಿಲ್ಲ ನಮ್ಮನ್ನ ನಾವೇ ತುಳಿದುಕೊಂಡಿದ್ದೇವೆ . ರಾಜಕೀಯ ಮಾಡುವವರು ಕೂಡ ಸಾಕಷ್ಟು ತಪ್ಪುಗಳನ್ನ ಮಾಡಿದ್ದೇವೆ. ಒಕ್ಕಲಿಗ ಸಂಘದ ಬೆಂಬಲಕ್ಕೆ ನಾವು ಇದ್ದೇವೆ. ನಾನು‌ ಕಷ್ಟ ಕಾಲದಲ್ಲಿ ಇದ್ದಾಗ,‌ ನನ್ನ ವಿರುದ್ದ ರಾಜಕೀಯ ಷಡ್ಯಂತ್ರ ನಡೆದಾಗ ನಮಗೆ ಬೆಂಬಲ ನೀಡಿದ್ದೀರಿ. ಚಾರ್ಜ್ ಶೀಟ್ ಆಗದೇ ಹೊರಗೆ ಬಂದಿದ್ದೇನೆ ಅಂದ್ರೆ ನಿಮ್ಮೆಲ್ಲರ ಆರ್ಶಿವಾದ ಎಂದು ಡಿಕೆಶಿ ಹೇಳಿದರು.

ಬೆಂಗಳೂರಿನಲ್ಲಿ ಮತ್ತೊಂದು ಚೈನ್‌ಲಿಂಕ್‌ ದೋಖಾ: ಚಂದ್ರಾಲೇಔಟ್‌ ಠಾಣೆಯಲ್ಲಿ ಸ್ವಯಂಪ್ರೇರಿತ ಕೇಸ್‌ ದಾಖಲು

ಈ ಆಕ್ಟ್ ಎಷ್ಟು ಕಠಿಣವಾಗಿದೆ ಎಂಬುದು ಗೊತ್ತಿದೆ. ಆದ್ರೆ ಧೈರ್ಯವಾಗಿ ಇದ್ದೇನೆ. ತಿಹಾರ್ ಜೈಲಿಗೆ ನಾನು ಹೋಗಿ ಬಂದಿದ್ದಕ್ಕೆ ನನಗೆ ಬೇಸರವಿಲ್ಲ. ನಾನು ತಪ್ಪು ಮಾಡಿದ್ರೆ ದೇವರು ನನಗೆ ಶಿಕ್ಷೆ ಕೊಡಲಿ. ನಾನು ವ್ಯವಹಾರ ಮಾಡಿದ್ದೇನೆ. ನಾನು ಒಪ್ಪಂದ ಮಾಡಿಕೊಳ್ಳುವುದಿಲ್ಲ ಎಂದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ