ಆ್ಯಪ್ನಗರ

ಬಾಗಿದ ಮರ ತೆರವುಗೊಳಿಸಲು ಒತ್ತಾಯ

ಪಟ್ಟಣದ ಎಂಜಿರಸ್ತೆಯ ಶ್ರೀಕೊಲ್ಲಾಪುರದಮ್ಮ ದೇವಾಲಯದ ಹೋಟೆಲ್‌ ಬಳಿ ಮರ ಅರ್ಧಕ್ಕೆ ಮುರಿದು ಬಾಗಿದ ಪರಿಣಾಮ ಫುಟ್‌ ಪಾತ್‌ ಮೇಲೆ ಸಂಚರಿಸುವ ಪಾದಚಾರಿಗಳಿಗೆ ಅಪಾಯ ತಂದೊಡ್ಡಿದೆ...

Vijaya Karnataka 5 Apr 2019, 5:00 am
ಚನ್ನಪಟ್ಟಣ: ಪಟ್ಟಣದ ಎಂ.ಜಿ.ರಸ್ತೆಯ ಶ್ರೀಕೊಲ್ಲಾಪುರದಮ್ಮ ದೇವಾಲಯದ ಹೋಟೆಲ್‌ ಬಳಿ ಮರ ಅರ್ಧಕ್ಕೆ ಮುರಿದು ಬಾಗಿದ ಪರಿಣಾಮ ಫುಟ್‌ ಪಾತ್‌ ಮೇಲೆ ಸಂಚರಿಸುವ ಪಾದಚಾರಿಗಳಿಗೆ ಅಪಾಯ ತಂದೊಡ್ಡಿದೆ.
Vijaya Karnataka Web insist on clearing the curved tree
ಬಾಗಿದ ಮರ ತೆರವುಗೊಳಿಸಲು ಒತ್ತಾಯ


ಮರ ಮುರಿದು ಬಾಗಿದ ಸ್ಥಳದಲ್ಲಿ ಫುಟ್‌ಪಾತ್‌ ಇದ್ದು, ಪ್ರತಿನಿತ್ಯ ನೂರಾರು ಮಂದಿ ಇಲ್ಲಿ ಸಂಚರಿಸುತ್ತಾರೆ. ಅಲ್ಲದೇ ಇದೇ ಸ್ಥಳದಲ್ಲಿ ಹೋಟೆಲ್‌ ಇರುವುದರಿಂದ ಮುರಿದು ಬಾಗಿದ ಮರದ ಕೆಳಗೆ ಕುಳಿತು ಊಟ ಮಾಡುವುದರಿಂದ ಯಾವ ಸಂದರ್ಭದಲ್ಲಾದರೂ ಜನರ ಮೇಲೆ ಮರ ಮುರಿದು ಬೀಳುವ ಸಾಧ್ಯತೆ ಇದೆ.

ದೇವಾಲಯ ಜತೆಗೆ ಪಟ್ಟಣಕ್ಕೆ ಹೋಗುವ ನೂರಾರು ಮಂದಿ ಜನ ಇಲ್ಲಿನ ದಾರಿಯನ್ನು ಅವಲಂಬಿಸಿದ್ದು, ಅಕ್ಕಪಕ್ಕದ ಮೆಡಿಕಲ್ಸ್‌ ಸ್ಟೋರ್ಸ್‌, ಬೇಕರಿ, ಬಟ್ಟೆ ಅಂಗಡಿಗಳಿವೆ. ವಸ್ತುಗಳ ಖರೀದಿಗೆ ಹೋಗುತ್ತಾರೆ. ಇನ್ನೂ ಹತ್ತಾರು ಜನ ದ್ವಿಚಕ್ರ ವಾಹನ ಸವಾರರು ನೆರಳಿನಲ್ಲಿ ವಾಹನಗಳನ್ನು ನಿಲ್ಲಿಸುತ್ತಾರೆ. ಅವುಗಳ ಮೇಲೆ ಮರ ಬಿದ್ದರೆ ವಾಹನಗಳು ಜಖಂ ಆಗುವ ಸಾಧ್ಯತೆಯೂ ಇದೆ. ಸಂಬಂಧಪಟ್ಟ ಅಧಿಕಾರಿಗಳು ಕೂಡಲೇ ಇತ್ತ ಚಿತ್ತಹರಿಸಬೇಕು ಎಂದು ಸಾರ್ವಜನಿಕರು ಕೋರಿದ್ದಾರೆ.

ಮರ ಅರ್ಧಕ್ಕೆ ಮುರಿದು ಬಾಗಿದ್ದು, ವಾರ ಕಳೆದರೂ ನಗರಸಭೆ ಆಡಳಿತವಾಗಲಿ, ಸಂಬಂಧಿಸಿದ ಅರಣ್ಯ ಇಲಾಖೆಯವರಾಗಲಿ ಇತ್ತ ಕಡೆ ಗಮನ ನೀಡದಿರುವುದು ಇಲ್ಲಿ ಸಂಚರಿಸುವ ಪಾದಚಾರಿಗಳ ದೊಡ್ಡ ತಲೆನೋವಾಗಿ ಪರಿಣಾಮಿಸಿದೆ. ನಗರಸಭೆ ಹಾಗೂ ಅರಣ್ಯ ಇಲಾಖೆಯವರು ಮುರಿದು ಬಾಗಿರುವ ಮರವನ್ನು ತೆರವುಗೊಳಿಸಬೇಕೆಂಬುದು ನಾಗರಿಕರ ಒತ್ತಾಸೆಯಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ