ಆ್ಯಪ್ನಗರ

ಅಕ್ರಮ ಮರಳು ಫಿಲ್ಟರ್‌ ಘಟಕಗಳ ಮೇಲೆ ದಾಳಿ

ಜಿಲ್ಲಾಧಿಕಾರಿ ರಾಜೇಂದ್ರ ಸೂಚನೆ ಮೇರೆಗೆ ಸೋಮವಾರ ಜಿಲ್ಲೆಯ ವಿವಿಧ ಕಡೆಗಳಲ್ಲಿ ಅಕ್ರಮ ಮರಳು ಫಿಲ್ಟರ್‌ ಘಟಕಗಳ ಮೇಲೆ ಜಿಲ್ಲಾ ಪೋಲಿಸ್‌ ಅಧಿಕಾರಿಗಳು ...

Vijaya Karnataka 21 May 2019, 5:00 am
ರಾಮನಗರ: ಜಿಲ್ಲಾಧಿಕಾರಿ ರಾಜೇಂದ್ರ ಸೂಚನೆ ಮೇರೆಗೆ ಸೋಮವಾರ ಜಿಲ್ಲೆಯ ವಿವಿಧ ಕಡೆಗಳಲ್ಲಿ ಅಕ್ರಮ ಮರಳು ಫಿಲ್ಟರ್‌ ಘಟಕಗಳ ಮೇಲೆ ಜಿಲ್ಲಾ ಪೋಲಿಸ್‌ ಅಧಿಕಾರಿಗಳು ದಾಳಿ ನಡೆಸಿದರು.
Vijaya Karnataka Web invasion of illegal sand filter units
ಅಕ್ರಮ ಮರಳು ಫಿಲ್ಟರ್‌ ಘಟಕಗಳ ಮೇಲೆ ದಾಳಿ


ಜಿಲ್ಲಾ ಪೊಲೀಸ್‌ ಅಧಿಕಾರಿಗಳ ತಂಡ ಹಾಗೂ ಗಣಿ ಮತ್ತು ಭೂವಿಜ್ಞಾನ ಇಲಾಖೆ ಅಧಿಕಾರಿಗಳ ತಂಡ, ಚನ್ನಪಟ್ಟಣ ತಾಲ್ಲೂಕಿನ ವಿರೂಪಾಕ್ಷಿಪುರ, ಕಾಡಾಕನಹಳ್ಳಿ, ಗೀಜಗನದಾಸದೊಡ್ಡಿ, ರಾಮನಗರ ತಾಲ್ಲೂಕಿನ ಕೈಲಾಂಚ, ಅರಳಾಳುಸಂದ್ರ, ಗೆಂಡೇಕೆರೆ, ನಾಗೋಹಳ್ಳಿ ಹಾಗೂ ಮುಂತಾದ ಕಡೆ ಅಕ್ರಮ ಮರಳು ಫಿಲ್ಟರ್‌ ಘಟಕಗಳ ಮೇಲೆ ದಾಳಿ ನಡೆಸಿದರು.

ಫಿಲ್ಟರ್‌ ಮರಳು ತಯಾರಿಸಿ ಸಾಗಣಿ ಮಾಡಲಾಗುತ್ತಿದೆ ಎಂಬ ದೂರುಗಳ ಹಿನ್ನೆಲೆಯಲ್ಲಿ ಇತ್ತೀಚಿಗಷ್ಟೆ ಸಭೆ ನಡೆಸಿ ಸಂಬಂಧಿಸಿರುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿ ಸೂಚನೆ ನೀಡಿದ್ದರು. ಜಿಲ್ಲಾ ಪೋಲಿಸ್‌ ವರಿಷ್ಠಾಧಿಕಾರಿ ಬಿ. ರಮೇಶ್‌ ಅವರು ಪೊಲೀಸ್‌ ಸಿಬ್ಬಂದಿಗೆ ನಿರ್ದೇಶನ ನೀಡಿ ಅಕ್ರಮವೆಸಗಿದವರ ವಿರುದ್ಧ ಮೊಕದ್ದಮೆ ದಾಖಲಿಸುವಂತೆ ತಿಳಿಸಿದ್ದರು.

6 ಜೆಸಿಬಿ ಯಂತ್ರಗಳನ್ನು ಬಳಸಿ ಫಿಲ್ಟರ್‌ ತೊಟ್ಟಿಗಳನ್ನು ನಾಶಪಡಿಸಲಾಗಿದೆ. ದಾಳಿ ನೇತೃತ್ವವನ್ನು ಜಿಲ್ಲಾ ಭೂ ವಿಜ್ಞಾನ ಮತ್ತು ಗಣಿ ಇಲಾಖೆಯ ಉಪನಿರ್ದೇಶಕಿ ಡಾ. ಪುಷ್ಪ ಕಾರಾರ‍ಯಚರಣೆಯಲ್ಲಿ ಪಾಲ್ಗೊಂಡಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ