ಆ್ಯಪ್ನಗರ

ನಿಖಿಲ್-ರೇವತಿ ಮದುವೆಯನ್ನು ರಾಮನಗರದಿಂದ ಬೆಂಗಳೂರಿಗೆ ಸ್ಥಳಾಂತರಿಸಲು ಚಿಂತನೆ

ರಾಮನಗರದ ಜಾನಪದ ಲೋಕದ ಸಮೀಪ ಏ.17ರಂದು ನಡೆಸಲು ಉದ್ದೇಶಿಸಿದ್ದ ನಿಖಿಲ್‌ ಕುಮಾರಸ್ವಾಮಿ ಮದುವೆಯನ್ನು ಬೆಂಗಳೂರಿಗೆ ಶಿಫ್ಟ್ ಮಾಡಲು ದೇವೇಗೌಡರ ಕುಟುಂಬ ನಿರ್ಧರಿಸಿದೆ ಎಂದು ಹೇಳಲಾಗುತ್ತಿದೆ. ಯಾಕೆ ಎಂಬ ಬಗೆಗಿನ ಸಂಪೂರ್ಣ ಮಾಹಿತಿ ಇಲ್ಲಿದೆ.

Vijaya Karnataka Web 12 Mar 2020, 8:04 am
ರಾಮನಗರ: ವ್ಯಾಪಕವಾಗಿ ಹರಡುತ್ತಿರುವ ಕೊರೊನಾ ಸೋಂಕಿನ ಭೀತಿಯಿಂದಾಗಿ ರಾಮನಗರದ ಜಾನಪದ ಲೋಕದ ಸಮೀಪ ಏ.17ರಂದು ನಡೆಸಲು ಉದ್ದೇಶಿಸಿದ್ದ ನಿಖಿಲ್‌ ಕುಮಾರಸ್ವಾಮಿ ಅವರ ಮದುವೆಯನ್ನು ಬೆಂಗಳೂರಿನ ಅರಮನೆ ಮೈದಾನಕ್ಕೆ ಸ್ಥಳಾಂತರಿಸಲು ಎಚ್‌.ಡಿ.ದೇವೇಗೌಡರ ಕುಟುಂಬ ನಿರ್ಧರಿಸಿದೆ ಎನ್ನಲಾಗಿದೆ.
Vijaya Karnataka Web nikhil kumaraswamy


ಒಂದೊಮ್ಮೆ ಸೋಂಕು ತೀವ್ರಗೊಂಡರೆ, ಜಿಲ್ಲಾಡಳಿತ ಸಾರ್ವಜನಿಕ ಸಮಾರಂಭಗಳಿಗೆ ನಿಷೇಧ ಹೇರುವ ಸಾಧ್ಯತೆ ಇದೆ. ಜತೆಗೆ ಇಂತಹ ಸಂಕೀರ್ಣ ಸ್ಥಿತಿಯಲ್ಲಿ ಜನರ ಸುರಕ್ಷತೆಯನ್ನು ಕಡೆಗಣಿಸುವುದೂ ಸರಿಯಲ್ಲ ಎಂಬ ನೆಲೆಯಲ್ಲಿಈ ಚಿಂತನೆ ನಡೆದಿದೆ. ಇದೇ ಕಾರಣಕ್ಕಾಗಿ ಲಗ್ನಪತ್ರಿಕೆ ಹಂಚುವ ಕಾರ‍್ಯಕ್ಕೂ ಚಾಲನೆ ನೀಡಿಲ್ಲ. ಜಾನಪದ ಲೋಕ ಸಮೀಪ ನಡೆಯುತ್ತಿರುವ ಮದುವೆ ಮಂಟಪ ನಿರ್ಮಾಣ ಕೆಲಸವೂ ಮಂದಗತಿಯಲ್ಲಿ ಸಾಗಿದೆ.

ನಿಖಿಲ್-ರೇವತಿ ಮದುವೆಗೆ 8 ಲಕ್ಷ ಲಗ್ನಪತ್ರಿಕೆಯನ್ನು ಸಿದ್ಧಗೊಳಿಸಲಾಗಿದೆ. ಕುಮಾರಸ್ವಾಮಿ ಅವರು ಪಕ್ಷ ಬೇಧ ಮರೆತು, ಜಾತಿ-ಧರ್ಮ ಎನ್ನದೆ ಎಲ್ಲರಿಗೂ ಮಗನ ಮದುವೆಯ ಆಮಂತ್ರಣ ನೀಡಲು ಸಿದ್ಧತೆ ಕೈಗೊಂಡಿದ್ದಾರೆ. ನಿಖಿಲ್ ಮತ್ತು ಕುಮಾರಸ್ವಾಮಿ ಅವರು ಸಿನಿಮಾ ರಂಗದ ನಂಟನ್ನು ಹೊಂದಿದ್ದಾರೆ. ಹೀಗಾಗಿ ಸ್ಯಾಂಡಲ್‌ವುಡ್ ಮತ್ತು ಟಾಲಿವುಡ್‌ ಕಲಾವಿದರು ಕೂಡ ಹೆಚ್ಚಿನ ಸಂಖ್ಯೆಯಲ್ಲಿ ಮದುವೆಗೆ ಬರುವ ನಿರೀಕ್ಷೆ ಇದೆ.

ಬೆಂಗಳೂರಿನಲ್ಲಿ ಸರಳ ಮದುವೆ:ಹೀಗಾಗಿ ಮದುವೆಯನ್ನು ಬೆಂಗಳೂರಿನ ಅರಮನೆ ಮೈದಾನದಲ್ಲಿ ಆದಷ್ಟು ಸರಳವಾಗಿ ಆಚರಿಸಲು ಎಚ್‌ಡಿಕೆ ಕುಟುಂಬ ಚಿಂತನೆ ನಡೆಸಿದೆ ಎಂಬ ಮಾಹಿತಿ 'ವಿಕ'ಕ್ಕೆ ಲಭ್ಯವಾಗಿದೆ. ಬೆಂಗಳೂರಿನ ತಾಜ್ ವೆಸ್ಟೆಂಡ್ ಹೋಟೆಲಿನಲ್ಲಿ ನಿಖಿಲ್ ಹಾಗೂ ರೇವತಿ ಅವರ ನಿಶ್ಚಿತಾರ್ಥ ಫೆ 10 ರಂದು ನಡೆದಿತ್ತು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ