ಆ್ಯಪ್ನಗರ

ಕೊರೊನಾದ ಎಲ್ಲಾ ನಿಯಮಗಳನ್ನ ಗಾಳಿಗೆ ತೂರಿ ಜೆಡಿಎಸ್‌ ಮುಖಂಡನ ಬರ್ತಡೇ ಕಾರ್ಯಕ್ರಮ!

ಕೊರೊನಾ ರಾಜ್ಯದಲ್ಲಿ ವ್ಯಾಪಕವಾಗಿ ಹರಡುತ್ತಿದೆ. ದಿನ ನಿತ್ಯ ಹಲವರು ಕೊರೊನಾದಿಂದ ಸಾಯುತ್ತಿರುವ ಸಮಯದಲ್ಲಿ ರಾಮನಗರದ ಜೆಡಿಎಸ್‌ ಮುಖಂಡರೊಬ್ಬರು ಕೊರೊನಾದ ಎಲ್ಲಾ ನಿಯಮಗಳನ್ನ ಗಾಳಿಗೆ ತೂರಿ ಬರ್ತಡೇ ಆಚರಣೆ ಮಾಡಿದ್ದಾರೆ. ನೂರಾರು ಸಂಖ್ಯೆಯಲ್ಲಿ ಜಮಾಯಿಸಿದ ಜನರು ನಿಯಮವನ್ನ ಪಾಲಿಸದೆ ಕಾರ್ಯಕ್ರಮದಲ್ಲಿ ತೊಡಗಿದ್ದರು.

Vijaya Karnataka Web 7 Jul 2020, 12:22 pm
ರಾಮನಗರ: ಜಿಲ್ಲೆಯಲ್ಲಿ‌ ಕೊರೊನಾ ಮಾಹಾಮಾರಿ ರುದ್ರ ತಾಂಡವ ಆಡುತ್ತಿರುವ ನಡೆವೆಯೇ ಜೆಡಿಎಸ್ ಮುಖಂಡರೊಬ್ಬರು ಅದ್ದೂರಿಯಾಗಿ ಹುಟ್ಟುಹಬ್ಬವನ್ನ ಆಚರಣೆ ಮಾಡಿಕೊಳ್ಳುವ ಮೂಲಕ ಕೊರೊನಾ ನಿಯಮ ಉಲ್ಲಂಘಿಸಿದ್ದಾರೆ. ಬಿಡದಿ ಹೋಬಳಿಯ ಜೆಡಿಎಸ್ ಮುಖಂಡ ಶೇಷಪ್ಪ ಅವರು ತಮ್ಮ ಹುಟ್ಟು ಹಬ್ಬವನ್ನು ಅದ್ದೂರಿಯಾಗಿ ಆಚರಣೆ ಮಾಡಿಕೊಂಡಿದ್ದು, ಗ್ರಾಮಸ್ಥರು ಜೆಡಿಎಸ್‌ ಮುಖಂಡನ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
Vijaya Karnataka Web ai5TibSl


ಬಿಡದಿಯ ಹೊಸದೊಡ್ಡಿ ಗ್ರಾಮದಲ್ಲಿ ಬರ್ತಡೇ ಪಾರ್ಟಿ ಆಯೋಜನೆ ಮಾಡಿದ್ದ ಶೇಷಪ್ಪ. ಈ ಕಾರ್ಯಕ್ರಮಕ್ಕೆ ಭಾರೀ ಸಂಖ್ಯೆಯಲ್ಲಿ ಬೆಂಬಲಿಗರು, ಅತಿಥಿಗಳಿಗೆ ಆಹ್ವಾನಿಸಿದ ಹಿನ್ನೆಲೆ ಜನ ಜಮಾಯಿಸಿದ್ದರು. ಮೂಲಗಳ ಪ್ರಕಾರ ಬೆಂಗಳೂರು ಹಾಗೂ ಮೈಸೂರು ಭಾಗದಿಂದ ಜನರು ಬರ್ತಡೇ ಪಾರ್ಟಿಯಲ್ಲಿ ಭಾಗಿಯಾಗಲು ಆಗಮಿಸಿದ್ದರು ಎಂದು ತಿಳಿದುಬಂದಿದೆ. ಇನ್ನು ಮಾಗಡಿ ಶಾಸಕ ಎ. ಮಂಜು ಕೂಡ ಈ ಬರ್ತಡೇ ಪಾರ್ಟಿಯಲ್ಲಿ ಭಾಗವಹಿಸಿದ್ದರು. ಕಳೆದ ವಾರದ ಹಿಂದೆಯಷ್ಟೇ ಶಾಸಕ ಮಂಜು ಅವರು ಕ್ವಾರಂಟೈನ್‌ ಮುಗಿಸಿಕೊಂಡು ಹೊರಬಂದಿದ್ದರು.


ವಿಪರ್ಯಾಸ ಸಂಗತಿ ಏನು ಅಂದರೆ, ಹುಟ್ಟು ಹಬ್ಬದ ಕಾರ್ಯಕ್ರಮದಲ್ಲಿ ಯಾವುದೇ ಸಾಮಾಜಿಕ ಅಂತರ ಕಾಯ್ದುಕೊಂಡಿರಲಿಲ್ಲ, ಹಾಗೂ ಮಾಸ್ಕ್ ಇಲ್ಲದೇ ನೂರಾರು ಮಂದಿ ಪಾರ್ಟಿಯಲ್ಲಿ ಭಾಗಿಯಾದ್ದರು. ಜನರಿಗೆ ನೀತಿ ಪಾಠ ಹೇಳಬೇಕಿದ್ದ ಜನನಾಯಕರೇ ಈ ರೀತಿ ವರ್ತಿಸಿರುವುದು ಗ್ರಾಮಸ್ಥರ ಆಕ್ರೋಶಕ್ಕೆ ಕಾರಣವಾಗಿದೆ. ಈ ಬಗ್ಗೆ ಜಿಲ್ಲಾಡಳಿತ ಹಾಗೂ ಪೊಲೀಸರು ಕ್ರಮ ಕೈಗೊಳ್ಳುವಂತೆ ಆಗ್ರಹ ಕೇಳಿಬರುತ್ತಿದೆ. ಸದ್ಯ ರಾಜ್ಯದಲ್ಲಿ ಮದುವೆ, ಮುಂಜಿಯಂತಹ ಎಲ್ಲಾ ಕಾರ್ಯಕ್ರಮಗಳನ್ನ ರಾಜ್ಯ ಸರ್ಕಾರ ನಿಷೇಧಿಸಿದೆ. ಮುಂದಿನ ಆದೇಶದವರೆಗೆ ನಿಯಮ ಕಾಯ್ದುಕೊಳ್ಳುವಂತೆ ಸೂಚನೆ ನೀಡಿದೆ.

ಜಕಾರ್ತಾ: ಬೆಳಗಿನ ಜಾವ ಭೂಕಂಪ, 6.6 ತೀವ್ರತೆ, ಸುನಾಮಿ ಎಚ್ಚರಿಕೆ ಇಲ್ಲ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ