ಆ್ಯಪ್ನಗರ

ಬಿಎಸ್‌ವೈಯಿಂದ ದ್ವೇಷದ ರಾಜಕಾರಣ, ಎಚ್‌ಡಿಕೆ ಆರೋಪ

ಮುಖ್ಯಮಂತ್ರಿ ಬಿಎಸ್‌ ಯಡಿಯೂರಪ್ಪ ದ್ವೇಷದ ರಾಜಕಾರಣ ಮಾಡುತ್ತಿದ್ದಾರೆ ಎಂದು ಮಾಜಿ ಸಿಎಂ ಎಚ್‌. ಡಿ ಕುಮಾರಸ್ವಾಮಿ ಆರೋಪಿಸಿದ್ದಾರೆ. ರಾಮನಗರದಲ್ಲಿ ಮಾತನಾಡಿದ ಅವರು ಈ ವಿಚಾರವನ್ನು ವಿಧಾನಸಭೆಯ ಅಧಿವೇಶನದಲ್ಲಿ ಪ್ರಶ್ನಿಸುತ್ತೇನೆ ಎಂದಿದ್ದಾರೆ.

Vijaya Karnataka Web 16 Feb 2020, 4:13 pm
ರಾಮನಗರ: ಮುಖ್ಯಮಂತ್ರಿ ಬಿಎಸ್‌ ಯಡಿಯೂರಪ್ಪನವರು ದ್ವೇಷದ ರಾಜಕಾರಣ ಮಾಡುತ್ತಿದ್ದಾರೆ ಎಂದು ಮಾಜಿ ಸಿಎಂ ಎಚ್‌ ಡಿ ಕುಮಾರಸ್ವಾಮಿ ಆರೋಪಿಸಿದ್ದಾರೆ. ರಾಮನಗರದಲ್ಲಿ ಮಾತನಾಡಿದ ಅವರು ಈ ವಿಚಾರವಾಗಿ ಸದನದಲ್ಲಿ ಚರ್ಚೆ ನಡೆಸುತ್ತೇನೆ ಎಂದಿದ್ದಾರೆ.
Vijaya Karnataka Web jds leader h d kumaraswamy slms at bs yeddyurappa
ಬಿಎಸ್‌ವೈಯಿಂದ ದ್ವೇಷದ ರಾಜಕಾರಣ, ಎಚ್‌ಡಿಕೆ ಆರೋಪ


ಈ ಸರ್ಕಾರದಲ್ಲಿ ನಿರಂತರವಾಗಿ ದ್ವೇಷದ ರಾಜಕಾರಣ ನಡೆಯುತ್ತಿದೆ. ಇದನ್ನು ಸೋಮವಾರದಿಂದ ಆರಂಭವಾಗಲಿರುವ ವಿಧಾನಮಂಡಳ ಅಧಿವೇಶದದಲ್ಲಿ ರಾಜ್ಯಪಾಲರ ಭಾಷಣದ ವೇಳೆ ಪ್ರಸ್ತಾಪ ಮಾಡುತ್ತೇನೆ. ಜೊತೆಗೆ ನನ್ನ ಕಾಲದಲ್ಲಿ ಕೊಟ್ಟಿರುವ ಎಲ್ಲಾ ಅನುದಾನಗಳನ್ನ ಸ್ಥಗಿತ ಮಾಡಲಾಗಿದ್ದು ವಿಧಾನಸಭೆಯ ಕಲಾಪದಲ್ಲಿ ಈ ಬಗ್ಗೆ ಚರ್ಚೆ ಮಾಡುತ್ತೇನೆ ಎಂದರು.

ಬಿಎಸ್‌ವೈ ಮಣಿಸಲು ಕೈ ಸಿದ್ಧತೆ, ಸಿಎಲ್‌ಪಿ ಸಭೆಯಲ್ಲಿ ತಯಾರಾಗಲಿದೆ ಪ್ಲಾನ್

ರಾಜ್ಯ ಸರಕಾರದ ಜನವಿರೋಧಿ ನೀತಿಗಳ ವಿರುದ್ಧ ಜೆಡಿಎಸ್ ಪಕ್ಷ ಸದಾ ಹೋರಾಟಗಳನ್ನ ಮಾಡಿದೆ.ಈಗಲೂ ಸಹ ದೇವೇಗೌಡರ ನೇತೃತ್ವದಲ್ಲಿ ಮುಂದುವರೆಸುತ್ತೇವೆ. ಅನುದಾನಗಳ ಕಡಿತದ ಬಗ್ಗೆ ಇಲಾಖೆಯ ಸಚಿವರು, ಅಧಿಕಾರಿಗಳು ಸ್ಪಂದಿಸಿದ್ದಾರೆ. ಆದರೆ ಸಿಎಂ ಬಳಿ ಫೈಲ್ ಗಳಿವೆ, ಅವರು ಅಂತಿಮವಾಗಿ ತೀರ್ಮಾನ ಮಾಡಬೇಕು. ಅವರು ಯಾವಾಗ ಕಡತಗಳಿಗೆ ಸಹಿ ಹಾಕ್ತಾರೋ ಎಂದು ಕಾಯುತ್ತಿದ್ದೇನೆ ಎಂದಿದ್ದಾರೆ.

ಬಳ್ಳಾರಿ ಅಪಘಾತ: ಆರ್‌. ಅಶೋಕ್‌ ಮಗನ ಪಾತ್ರವಿಲ್ಲ, ನಾವ್ಯಾವುದನ್ನು ಮುಚ್ಚಿಹಾಕಲ್ಲ, ಜಗದೀಶ್‌ ಶೆಟ್ಟರ್‌

2008 ರಲ್ಲೂ ಬಿಜೆಪಿ ಸರ್ಕಾರದಿಂದ ನಮಗೆ ಇದೇ ತೊಂದರೆಯಾಯ್ತು.ಕ್ಷೇತ್ರಗಳ ಅಭಿವೃದ್ಧಿಗೆ ಯಾವುದೇ ಸಹಕಾರ ಇರಲಿಲ್ಲ. ಈಗಲೂ ಅದೇ ರೀತಿ ಆಗಿದೆ, ಮುಂದೆ ಯಾವ ರೀತಿ ಮಾಡ್ತಾರೆ ಕಾದು ನೋಡೋಣ ಎಂದು ಬಿಜೆಪಿ ಹಾಗೂ ಬಿಎಸ್ ಯಡಿಯೂರಪ್ಪ ವಿರುದ್ಧ ವಾಗ್ದಾಳಿ ನಡೆಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ