ಆ್ಯಪ್ನಗರ

ರಾಸುಗಳ ಜಾತ್ರೆಗೆ ಹೊರಟ ಜೋಡೆತ್ತಿನ ಬಂಡಿಗಳು

ಎತ್ತಿನ ಕೊರಳ ಕಿರುಗೆಜ್ಜೆ ಗಲಗಲ ಸದ್ದುಮಾಡುತ್ತಾ ಬಾರು ಕೋಲಿನ ಮೇಟಿ ಏಟನ್ನು ತಿನ್ನುತ್ತಾ ರಾಸುಗಳು ದನಗಳ ಜಾತ್ರೆಗೆ ಹೊರಟ ಸೊಬಗ ನೋಡಲು ರಾಷ್ಟ್ರೀಯ ಹೆದ್ದಾರಿ ಜನರು ಸಾಲುಗಟ್ಟಿ ನಿಂತರು.

Vijaya Karnataka 1 Mar 2019, 5:00 am
ಮಾಗಡಿ ಗ್ರಾಮಾಂತರ: ಎತ್ತಿನ ಕೊರಳ ಕಿರುಗೆಜ್ಜೆ ಗಲಗಲ ಸದ್ದುಮಾಡುತ್ತಾ ಬಾರು ಕೋಲಿನ ಮೇಟಿ ಏಟನ್ನು ತಿನ್ನುತ್ತಾ ರಾಸುಗಳು ದನಗಳ ಜಾತ್ರೆಗೆ ಹೊರಟ ಸೊಬಗ ನೋಡಲು ರಾಷ್ಟ್ರೀಯ ಹೆದ್ದಾರಿ ಜನರು ಸಾಲುಗಟ್ಟಿ ನಿಂತರು.
Vijaya Karnataka Web jet carts out to the couch
ರಾಸುಗಳ ಜಾತ್ರೆಗೆ ಹೊರಟ ಜೋಡೆತ್ತಿನ ಬಂಡಿಗಳು


ಇತಿಹಾಸ ಪ್ರಸಿದ್ದ ಸುಗನಹಳ್ಳಿ ಜಾತ್ರೆಗೆ ಕ್ಷ ಣಗಣನೆ ಆರಂಭವಾಗಿದ್ದು. ಜಾತ್ರೆಗೆ ಕೂಡಿಕೊಳ್ಳಲು ನೂರಾರು ಮೈಲಿಗಳಿಂದ ರಾಸುಗಳು ಇರುವೆಗಳ ಸಾಲಿನಂತೆ ರಾಜ್ಯ, ರಾಷ್ಟ್ರೀಯ ಹೆದ್ದಾರಿಯಲ್ಲಿ ಸಾಗುತ್ತಿರುವ ದೃಶ್ಯನೋಡುಗರನ್ನು ಒಂದುಕ್ಷ ಣ ತನ್ನತ್ತ ಆಕರ್ಷಿಸುವಂತೆ ಮಾಡಿದೆ.

ಹೆಚ್ಚಿನ ರಾಸುಗಳ ನಿರೀಕ್ಷೆ: ಮಾಗಡಿ ತಾಲೂಕಿನ ಕುದೂರು - ತುಮಕೂರು ಗ್ರಾಮಾಂತರ ಹೋಬಳಿಗಳ ಗಡಿಯಲ್ಲಿರುವ ಸುಗ್ಗನಹಳ್ಳಿ ದನಗಳ ಜಾತ್ರೆಗೆ ಮಾಗಡಿ ತಾಲೂಕು ಸೇರಿದಂತೆ ನಾನಾ ಜಿಲ್ಲೆಗಳಿಂದಲೂ ರಾಸುಗಳು ಬೆಂಗಳೂರು - ಮಂಗಳೂರು ರಾಷ್ಟ್ರೀಯ ಹೆದ್ದಾರಿ ಮೂಲಕ ಭಾರಿ ಸಂಖ್ಯೆಯಲ್ಲಿ ಆಗಮಿಸಿ ಜಾತ್ರೆಯ ಕಳೆಹೆಚ್ಚಿಸಲು ಶು» Üಸಂದೇಶ ನೀಡಿದಂತೆ ಕಾಣುತ್ತಿದೆ.

ನೆರೆಹೊರೆ ಜಿಲ್ಲೆಯ ರೈತರು: ಮಾಗಡಿ ತಾಲೂಕಿನ ಶ್ರೀಪತಿಹಳ್ಳಿ, ಮತ್ತ, ಸೋಲೂರಿನ ಲಕ್ಕೇನಹಳ್ಳಿ, ಗುಡೇಮಾರನಹಳ್ಳಿ, ಬೆಳಗುಂಬ, ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ, ಹೊಸಕೋಟೆ, ದೊಡ್ಡಬಳ್ಳಾಪುರ, ತುಮಕೂರು ಜಿಲ್ಲೆಯ ಕುಣಿಗಲ್‌ ತಾಲೂಕಿನ ಬಿದಿಗೆರೆ, ಎಡೆಯೂರು, ಕೊತ್ತಗೆರೆ, ಸಿದ್ದಮನಿಪಾಳ್ಯ, ಯಳವಾಡಿ, ಅಮೃತೂರು ಹಾಗೂ ಮಂಡ್ಯ ಜಿಲ್ಲೆಯ ಮದ್ದೂರು, ಕೆರಗೋಡು, ಹುಲಿದುರ್ಗ ಇನ್ನುಮುಂತಾದ ಜಿಲ್ಲೆಗಳ ರೈತರು ತಾವು ಸಾಕಿರುವ ನಾಟಿ ರಾಸುಗಳೊಂದಿಗೆ ಸುಗ್ಗನಹಳ್ಳಿಗೆ ರಾಷ್ಟ್ರೀಯ ಹೆದ್ದಾರಿ ಮೂಲಕ ಸಾಲುಸಾಲಾಗಿ ಸಾಗುತ್ತಿದ್ದಾರೆ. ಸುಗ್ಗನಹಳ್ಳಿ ಜಾತ್ರೆಗೆ ರಾಮನಗರ, ಕನಕಪುರ, ದೇವನಹಳ್ಳಿ ಸೇರಿದಂತೆ 120 ಕ್ಕೂ ಹೆಚ್ಚು ಕೀಲೋಮೀಟರ್‌ ದೂರದಿಂದ ರೈತರು ತಮ್ಮ ರಾಸುಗೊಳಂದಿಗೆ ನಡೆದುಬರುತ್ತಿದ್ದಾರೆ.

ಜನಪದ ಗೀತೆ : ಪ್ರಯಾಣದ ಆಯಾಸ ಮರೆಯಲು ದಾರಿಯುದ್ದಕ್ಕೂ ರೈತರು ಜಾನಪದ ಗೀತೆ, ರಂಗಗೀತೆ, ಲಾವಣಿ ಹಾಡುತ್ತಿರುವುದು ಜನರ ಚಿತ್ತವನ್ನು ಸೆಳೆದಿದೆ. ಹಾಡುಗಳ ಮಧ್ಯೆ ಕೃಷಿ ಚಟುವಟಿಕೆ, ರಾಜಕೀಯ ಬೆಳವಣಿಗೆ ಚರ್ಚೆಯೂ ಜೋರಾಗಿದ್ದು, ಪಾಕಿಸ್ತಾನವನ್ನು ಭಾರತ ಬಗ್ಗುಬಡಿಯುತ್ತಿರುವ ರೀತಿಯನ್ನು ರೈತರು ತಮ್ಮದೇ ಮಾತುಗಳಲ್ಲಿ ಬಣ್ಣಿಸುತ್ತಿರುವುದು ಕುತೂಹಲಕಾರಿಯಾಗಿದೆ.

ಎತ್ತಿನಬಂಡಿಯಲ್ಲಿ ಸಂಸಾರ : ಜಾತ್ರೆಗೆ ಎತ್ತನ ಬಂಡಿಯಮೂಲಕ ಆಗಮಿಸುತ್ತಿರುವ ರೈತರು ಎತ್ತಿನ ಬಂಡಿಯಲ್ಲಿ ಒಂದು ವಾರಕ್ಕೆ ಬೇಕಾಗುವ ಸಾಮಗ್ರಿಗಳ ಗಂಟಿನ ಜತೆಗೆ. ರಾಸುಗಳ ಮೇವು, ಹುರುಳಿ, ಹುಲ್ಲು, ನೀರು ಕುಡಿಸುವ ಪಾತ್ರೆ, ಮುದ್ದೆಮಾಡಲು ರಾಗಿಹಿಟ್ಟು, ಕಾರದಪುಡಿ, ಹುಣೆಸೆ ಹಣ್ಣು ಸೇರಿದಂತೆ ಎಲ್ಲಾಪರಿಕರಗಳು ಎತ್ತಿನ ಬಂಡಿಯಲ್ಲಿ ಇರಿಸಿಕೊಂಡು ಹೆಜ್ಜೆಹಾಕುತ್ತಿರುವ ದೃಶ್ಯವಂತೂ ಹಿಂದಿನ ಕಾಲದ ಜಾತ್ರೆ ಸೊಬಗನ್ನು ಮುಗಿಲಿಗೇರಿಸಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ