ಆ್ಯಪ್ನಗರ

Karnataka Elections 2023: ಚುನಾವಣಾ ಫಲಿತಾಂಶ, ಗೆಲುವು ಸೋಲಿನ ಲೆಕ್ಕಾಚಾರ ಜೋರು

Karnataka Election Results: ಮೇ 13 ರಂದು ಚುನಾವಣಾ ಅಭ್ಯರ್ಥಿಗಳ ಭವಿಷ್ಯ ನಿರ್ಧಾರವಾಗಲ್ಲಿದ್ದು, ರಿಲಾಕ್ಸ್ ಮೂಡ್ನಲ್ಲಿರು ರಾಜಕಾರಣಿಗಳಿಗೆ ಟೆನ್ಶನ್ ಶುರುವಾಗಿದೆ. ಕಳೆದ ಒಂದು ತಿಂಗಳಿಂದ ತಮ್ಮ ಅಭ್ಯರ್ಥಿಗಳನ್ನು ಗೆಲ್ಲಿಸಿಕೊಳ್ಳಲು ಪಕ್ಷದ ಮುಖಂಡರು, ಕಾರ್ಯಕರ್ತರು ಅವಿರತ ದುಡಿದರು. ರಾಜ್ಯದೆಲ್ಲೆಡೆ ಚುನಾವಣಾ ಪ್ರಚಾರದ ಅಬ್ಬರ, ಜನಜಂಗುಳಿ ಕಾಣಿಸುತ್ತಿತ್ತು. ಆದರೆ ಈಗ ಗೆಲುವು ಸೋಲಿನ ಲೆಕ್ಕಾಚಾರ ಜೋರಾಗಿದೆ. ತಮ್ಮ-ತಮ್ಮ ಕ್ಷೇತ್ರದ ಜನಪ್ರತಿನಿಧಿ ಯಾರೆಂಬುವುದು? ನಾಳೆ ಬಹಿರಂಗಗೊಳ್ಳಲಿದೆ.

Edited byಶ್ರುತಿ ಡಿ | Vijaya Karnataka Web 12 May 2023, 8:41 am

ಹೈಲೈಟ್ಸ್‌:

  • ಮೇ 13 ಕರ್ನಾಟಕ ವಿಧಾನಸಭಾ ಚುನಾವಣಾ ಫಲಿತಾಂಶ.
  • ರಾಜಕೀಯ ಭವಿಷ್ಯ ನಿರ್ಧಾರ, ರಾಜಕಾರಣಿಗಳಿಗೆ ಟೆನ್ಶನ್.
  • ಅಭ್ಯರ್ಥಿ ಗೆಲ್ಲಿಸಲು ಅವಿರತ ದುಡಿದ ಪಕ್ಷದ ಮುಖಂಡರು, ಕಾರ್ಯಕರ್ತರು.

ಹೈಲೈಟ್ಸ್‌ ಮಾತ್ರವೇ ಓದಲು ಆ್ಯಪ್‌ ಡೌನ್‌ಲೋಡ್‌ ಮಾಡಿ
Vijaya Karnataka Web ಕರ್ನಾಟಕ ವಿಧಾನಸಭಾ ಚುನಾವಣೆ 2023
ಕರ್ನಾಟಕ ವಿಧಾನಸಭಾ ಚುನಾವಣೆ 2023
ಎಸ್‌.ಶ್ರೀಧರ್‌
ರಾಮನಗರ:
ಘಟಾನುಘಟಿಗಳ ಸ್ಪರ್ಧೆ, ಜಿದ್ದಾಜಿದ್ದಿನ ನೇರ ಹಣಾಹಣೆಯಿಂದ ತೀವ್ರ ಕಾವು ಪಡೆದಿದ್ದ ರೇಷ್ಮೆ ನಾಡು ರಾಮನಗರ ಜಿಲ್ಲೆಯ ಚುನಾವಣ ಕಣ ಮತದಾನದ ನಂತರ ತಣ್ಣಗಾಗಿದೆ. ಆಯಾ ಪಕ್ಷಗಳ ಅಭ್ಯರ್ಥಿಗಳು, ಮುಖಂಡರು, ಕಾರ್ಯಕರ್ತರು ರಿಲಾಕ್ಸ್‌ ಮೋಡ್‌ನಲ್ಲಿದ್ದು, ಎಲ್ಲೆಡೆ ಗೆಲುವು ಸೋಲಿನ ಲೆಕ್ಕಾಚಾರ ನಡೆಯುತ್ತಿವೆ.

ಕಳೆದ ಒಂದು ತಿಂಗಳಿಂದ ತಮ್ಮ ಅಭ್ಯರ್ಥಿಗಳನ್ನು ಗೆಲ್ಲಿಸಿಕೊಳ್ಳಲು ಪಕ್ಷದ ಮುಖಂಡರು, ಕಾರ್ಯಕರ್ತರು ಅವಿರತ ದುಡಿದರು. ಎಲ್ಲೆಡೆ ಪ್ರಚಾರದ ಅಬ್ಬರ, ಜನಜಂಗುಳಿ ಕಾಣಿಸುತ್ತಿತ್ತು. ಆದರೆ ಮತದಾನ ಪ್ರಕ್ರಿಯೆ ಮುಕ್ತಾಯವಾಗುತ್ತಿದ್ದಂತೆ ಚುನಾವಣೆ ಗುಂಗಿನಿಂದ ಜನಜೀವನ ಹೊರಬಂದಿದೆ. ಆಯಾ ಬೂತ್‌ಗಳಲ್ಲಿ ಕಾರ್ಯಕರ್ತರು ಪಕ್ಷಭೇದ ಮರೆತು ಎಂದಿನಂತೆ ಜತೆಯಲ್ಲಿ ನಡೆದಾಡುತ್ತಿದ್ದಾರೆ.

ಎಲ್ಲೆಡೆ ಕೇಳಿಬರುತ್ತಿದ್ದ ಮೈಕ್‌ ಶಬ್ಧ, ನಾಯಕರ ಪರವಾದ ಜೈಕಾರ ಘೋಷಣೆಗಳ ಸದ್ದು ಅಡಗಿದೆ. ಚುನಾವಣಾ ಕಾರ್ಯಕ್ಕೆ ನೇಮಕವಾದ ಸಿಬ್ಬಂದಿ ಬಹುತೇಕ ಮಂದಿ ರಿಲಾಕ್ಸ್‌ ಮೂಡ್‌ನಲ್ಲಿದ್ದು, ಹಲವು ಮಂದಿ ದಿನನಿತ್ಯದ ಕರ್ತವ್ಯಕ್ಕೆ ಗೈರಾಗಿದ್ದಾರೆ.
Karnataka Elections 2023: ರಾಜ್ಯದಲ್ಲಿ ಈ ಬಾರಿ ನನ್ನ ಅಭ್ಯರ್ಥಿಗಳಿಗೆ ಹಣ ಒದಗಿಸಲು ಆಗಿಲ್ಲ: ಕುಮಾರಸ್ವಾಮಿ
ಬಸ್‌ ಸಂಚಾರ ಸುಗಮ
ಮತದಾನದ ಹಿನ್ನೆಲೆಯಲ್ಲಿ ಬಹುತೇಕ ಸಾರಿಗೆ ಬಸ್‌ಗಳನ್ನು ಚುನಾವಣಾ ಕಾರ್ಯಕ್ಕೆ ನಿಯೋಜಿಸಲಾಗಿತ್ತು. ಇದರಿಂದ ಪ್ರಯಾಣಿಕರು ಬಸ್‌ಗಳ ಸಮರ್ಪಕ ಸೌಲಭ್ಯವಿಲ್ಲದೆ ಕಳೆದ ಎರಡು ದಿನಗಳಿಂದ ಪರದಾಡುತ್ತಿದ್ದರು. ನೂಕು ನುಗ್ಗಲಿನಲ್ಲೆ ಪ್ರಯಾಣ ಮಾಡಬೇಕಾಗಿತ್ತು. ಇದೀಗ ಎಂದಿನಂತೆ ಬಸ್‌ ಸಂಚಾರ ಸುಗಮವಾಗಿದೆ. ಬೆಳಗ್ಗೆ ಬಸ್‌ಗಳಲ್ಲಿಹೆಚ್ಚಿನ ಜನ ಸಂದಣಿ ಕಂಡುಬಂತು.

ಗೆಲುವು ಸೋಲಿನ ಲೆಕ್ಕಾಚಾರ
ಚುನಾವಣೋತ್ತರ ಸಮೀಕ್ಷೆ, ಅಭ್ಯರ್ಥಿಗಳ ಸೋಲು ಗೆಲುವಿನ ಚರ್ಚೆ, ಗೆಲುವಿನ ಅಂತರದ ಬಗೆಗಿನ ಚರ್ಚೆಗಳು ಎಲ್ಲೆಡೆ ಕೇಳಿಬರುತ್ತಿವೆ. ಮುಖಂಡರು ಮನೆಗಳಲ್ಲೇ ಕೂತು ಲೆಕ್ಕಾಚಾರಗಳನ್ನು ಹಾಕಿಕೊಳ್ಳುತ್ತಿದ್ದಾರೆ. ಆಯಾ ಬೂತ್‌ ಕಾರ್ಯಕರ್ತರಿಂದ ಮತ ಚಲಾವಣೆ ಪ್ರಮಾಣ, ಎಷ್ಟು ಮತ ಬಂದಿರಬಹುದು ಎಂದು ಅಂದಾಜು ಮಾಡುತ್ತಿರುವ ಮುಖಂಡರು ಸೋಲು ಗೆಲುವಿನ ಲೆಕ್ಕಾಚಾರ ಹಾಕುತ್ತಿದ್ದಾರೆ.

ರಿಲ್ಯಾಕ್ಸ್‌ ಮೂಡ್‌
ಮತದಾನದ ನಂತರ ಅಭ್ಯರ್ಥಿಗಳು ರಿಲಾಕ್ಸ್‌ ಮೂಡ್‌ನಲ್ಲಿದ್ದಾರೆ. ಜಿಲ್ಲೆಯಲ್ಲಿಘಟಾನುಘಟಿಗಳ ಸ್ಪರ್ಧೆಯಿಂದ ಚುನಾವಣಾ ಕಣ ರಂಗೇರಿತ್ತು. ಇದೀಗ ಅಭ್ಯರ್ಥಿಗಳು ವಿಶ್ರಾಂತಿ ಪಡೆಯುತ್ತಿದ್ದಾರೆ.

ಚನ್ನಪಟ್ಟಣದಿಂದ ಸ್ಪರ್ಧಿಸಿದ್ದ ಎಚ್‌.ಡಿ.ಕುಮಾರಸ್ವಾಮಿ ಅವರು ವಿಶ್ರಾಂತಿಗೆಂದು ಸಿಂಗಾಪುರಕ್ಕೆ ತೆರಳಿದ್ದು, ಶನಿವಾರ ರಾಜ್ಯಕ್ಕೆ ಆಗಮಿಸುವ ನಿರೀಕ್ಷೆ ಇದೆ. ಕನಕಪುರದಿಂದ ಸ್ಪರ್ಧಿಸಿದ್ದ ಆರ್‌.ಅಶೋಕ್‌ ಬೆಂಗಳೂರಿನ ಸ್ವಗೃಹದಲ್ಲಿವಿಶ್ರಾಂತಿ ಪಡೆಯುತ್ತಿದ್ದಾರೆ. ಸಿ.ಪಿ.ಯೋಗೇಶ್ವರ್‌ ಅವರೂ ಸಹ ರಿಲ್ಯಾಕ್ಸ್‌ ಮೂಡ್‌ನಲ್ಲಿದ್ದು ಚನ್ನಪಟ್ಟಣದಲ್ಲಿ, ಇಕ್ಬಾಲ್‌ ಹುಸೇನ್‌, ಗೌತಮ್‌ ಗೌಡ, ಎ.ಮಂಜು, ಬಾಲಕೃಷ್ಣ, ಪ್ರಸಾದ್‌ ಗೌಡ ಸೇರಿದಂತೆ ಬಹುತೇಕ ಅಭ್ಯರ್ಥಿಗಳು ಸ್ವಗೃಹದಲ್ಲಿವಿಶ್ರಾಂತಿ ಪಡೆಯುತ್ತಿದ್ದಾರೆ.
Exit Poll 2023 Karnataka: ಅಚ್ಚರಿಯ ಭವಿಷ್ಯ ನುಡಿದಿದೆ ಜನ್ ಕಿ ಬಾತ್ ಸರ್ವೆ! ಯಾರಿಗೆ ಅಧಿಕಾರ?
ಕನಕಪುರಕ್ಕೆ ಭೇಟಿ ನೀಡಿದ್ದ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಜ್ವರದಿಂದ ಬಳಲುತ್ತಿದ್ದರು. ತಮ್ಮ ನೆಚ್ಚಿನ ಕನಕಪುರದ ವಾಸು ಹೋಟೆಲ್‌ನಲ್ಲಿತಿಂಡಿ ಮಾಡಿದ ಡಿಕೆಶಿ ನಂತರ ಅವರ ತಾಯಿಯವರ ಆರ್ಶೀವಾದ ಪಡೆದು ವಿಶ್ರಾಂತಿಗೆಂದು ಬೆಂಗಳೂರಿಗೆ ತೆರಳಿದರು.

ಕಣಕ್ಕಿಳಿದ ಬೆಟ್ಟಿಂಗ್‌ ದಾಸರು

ಬೆಟ್ಟಿಂಗ್‌ ದಾಸರು ಈಗಾಗಲೇ ಕಣಕ್ಕಿಳಿದಿದ್ದಾರೆ. ತಮ್ಮ ಮೂಲಗಳಿಂದ ಮಾಹಿತಿಯನ್ನು ಖಚಿತಪಡಿಸಿಕೊಳ್ಳುತ್ತಿರುವ ಇವರು ಅಭ್ಯರ್ಥಿ ಗೆಲುವು, ಸೋಲು, ಗೆಲುವಿನ ಅಂತರದ ಬಗ್ಗೆ ಬೆಟ್ಟಿಂಗ್‌ ಆಡಲು ಅಣಿಯಾಗಿದ್ದಾರೆ. ಗುರುವಾರ ಮತ್ತು ಶುಕ್ರವಾರ ಕೋಟ್ಯಾಂತರ ರೂಪಾಯಿ ಬೆಟ್ಟಿಂಗ್‌ ನಡೆಯುವ ಸಾಧ್ಯತೆ ಅಲ್ಲಗಳಿಯುವಂತಿಲ್ಲ.
ಲೇಖಕರ ಬಗ್ಗೆ
ಶ್ರುತಿ ಡಿ
ವಿಜಯ ಕರ್ನಾಟಕ ಡಿಜಿಟಲ್ ವಿಭಾಗದಲ್ಲಿ, ಗುತ್ತಿಗೆ ಆಧಾರದ ಮೇಲೆ ಪತ್ರಕರ್ತೆಯಾಗಿ ಕೆಲಸ ಮಾಡುತ್ತಿದ್ದಾರೆ. ಹುಟ್ಟಿ ಬೆಳೆದಿದ್ದು, ಮಲೆನಾಡು ಶಿವಮೊಗ್ಗ ಜಿಲ್ಲೆಯ, ಹೊಸನಗರ ತಾಲೂಕಿನ ಯಡೂರು ಗ್ರಾಮದಲ್ಲಿ. ಕುವೆಂಪು ವಿಶ್ವವಿದ್ಯಾಲಯದಲ್ಲಿ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಷಯದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಪುಸ್ತಕ ಓದುವುದು, ಬರೆಯುವುದು, ಹಿನ್ನೆಲೆ ಧ್ವನಿ, ಚಾರಣ, ಕವನ ರಚನೆ ನೆಚ್ಚಿನ ಹವ್ಯಾಸ. ಪ್ರಚಲಿತ ವಿದ್ಯಮಾನ, ರಾಜಕೀಯ, ಕೃಷಿ ಆಸಕ್ತಿವುಳ್ಳ ಕ್ಷೇತ್ರಗಳು.... ಇನ್ನಷ್ಟು ಓದಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ