ಆ್ಯಪ್ನಗರ

30 ರಂದು ಕೆಂಪೇಗೌಡ ಜಯಂತ್ಯುತ್ಸವ

ನಾಡಪ್ರಭು ಕೆಂಪೇಗೌಡರು ಐಕ್ಯವಾಗಿರುವ ಕೆಂಪಾಪುರ ಗ್ರಾಮವನ್ನು ಅಭಿವೃದ್ಧಿ ಪಡಿಸುವ ರೂಪರೇಷೆಗಳು ಭರದಿಂದ ಸಾಗುತ್ತಿದೆ ಎಂದು ಕೆಂಪೇಗೌಡ ಅಭಿವೃದ್ಧಿ ಪ್ರಾಧಿಕಾರ ನಿರ್ದೇಶಕ ಎಚ್‌.ಎಂ.ಕೃಷ್ಣಮೂರ್ತಿ ತಿಳಿಸಿದರು.

Vijaya Karnataka 12 Dec 2018, 5:00 am
ಮಾಗಡಿ: ನಾಡಪ್ರಭು ಕೆಂಪೇಗೌಡರು ಐಕ್ಯವಾಗಿರುವ ಕೆಂಪಾಪುರ ಗ್ರಾಮವನ್ನು ಅಭಿವೃದ್ಧಿ ಪಡಿಸುವ ರೂಪರೇಷೆಗಳು ಭರದಿಂದ ಸಾಗುತ್ತಿದೆ ಎಂದು ಕೆಂಪೇಗೌಡ ಅಭಿವೃದ್ಧಿ ಪ್ರಾಧಿಕಾರ ನಿರ್ದೇಶಕ ಎಚ್‌.ಎಂ.ಕೃಷ್ಣಮೂರ್ತಿ ತಿಳಿಸಿದರು.
Vijaya Karnataka Web kempegowda jayanti festival on 30th
30 ರಂದು ಕೆಂಪೇಗೌಡ ಜಯಂತ್ಯುತ್ಸವ


ಪಟ್ಟಣದ ಪುರಸಭೆಯ ಮುಂಭಾಗವಿರುವ ನಾಡಪ್ರಭು ಕೆಂಪೇಗೌಡರ ಪ್ರತಿಮೆಗೆ ಮಾಲಾರ್ಪಣೆ ನಡೆಸಿ ಮಾತನಾಡಿ, ''ನಾಡಪ್ರಭು ಕೆಂಪೇಗೌಡರು ಐಕ್ಯವಾಗಿರುವ ಸ್ಥಳ 4 ವರ್ಷಗಳ ಹಿಂದೆ ಮಾಗಡಿ ತಾಲೂಕಿನ ಕೆಂಪಾಪುರದಲ್ಲಿ ಪತ್ತೆಯಾಗಿದ್ದು, ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡ, ಸಚಿವ ಡಿ.ಕೆ.ಶಿವಕುಮಾರ್‌, ಬೆಂಗಳೂರಿನ ಮೇಯರ್‌ ಸೇರಿದಂತೆ ಹಲವು ಗಣ್ಯರು ಕೆಂಪಾಪುರಕ್ಕೆ ಆಗಮಿಸಿ ಸ್ಮಾರಕವನ್ನು ವೀಕ್ಷಿಸಿದ್ದಾರೆ. ಕೆಂಪಾಪುರವನ್ನು ಅಭಿವೃದ್ಧಿ ಪಡಿಸುವುದಕ್ಕೆ ಈಗಾಗಲೇ 5 ಕೋಟಿ ಹಣ ಮೀಸಲಿಡಲಾಗಿದ್ದು, ಮುಖ್ಯಮಂತ್ರಿಗಳ ಅಧ್ಯಕ್ಷ ತೆಯಲ್ಲಿ ಕೆಂಪೇಗೌಡ ಅಭಿವೃದ್ಧಿ ಪ್ರಾಧಿಕಾರವನ್ನು ಸಹ ರಚಿಸಲಾಗಿದೆ. ಪ್ರಾಧಿಕಾರದ ವತಿಯಿಂದ ಕೆಂಪಾಪುರವನ್ನು ಹಾಗೂ ಕೆಂಪೇಗೌಡರ ಸಮಾಧಿಯನ್ನು ಅಭಿವೃದ್ಧಿ ಪಡಿಸುವ ರೂಪರೇಷೆಗಳು ಭರದಿಂದ ಸಾಗುತ್ತಿದ್ದು, ಕೆಲವೇ ದಿನಗಳಲ್ಲಿ ಅಭಿವೃದ್ಧಿಗೆ ಚಾಲನೆ ನೀಡಲಾಗುವುದು,'' ಎಂದು ಕೃಷ್ಣಮೂರ್ತಿ ತಿಳಿಸಿದರು.

30 ರಂದು ಜಯಂತ್ಯುತ್ಸವ: ''20 ವರ್ಷಗಳ ಹಿಂದೆ ನಾಡಪ್ರಭು ಕೆಂಪೇಗೌಡರ ಬಗ್ಗೆ ಜನತೆಯಲ್ಲಿ ಅಷ್ಟಾಗಿ ಜಾಗೃತಿ ಇರಲಿಲ್ಲ, ತಾವು ಕೆಂಪೇಗೌಡ ಅಭಿವೃದ್ಧಿ ಸಮಿತಿ ರಚಿಸಿಕೊಂಡು ಪ್ರತಿ ವರ್ಷ ನಾಡಪ್ರಭುಗಳ ಜಯಂತ್ಯುತ್ಸವವನ್ನು ಅದ್ಧೂರಿಯಾಗಿ ಆಚರಿಸಿಕೊಂಡು ಬರುವ ಮೂಲಕ ಜನತೆಯಲ್ಲಿ ಕೆಂಪೇಗೌಡರ ಬಗ್ಗೆ ಜಾಗೃತಿಯನ್ನು ಮೂಡಿಸಿಕೊಂಡು ಬರುತ್ತಿದ್ದೇನೆ,'' ಎಂದ ಅವರು, ''ಈ ಬಾರಿ ಚುನಾವಣೆಗಳು ಇದ್ದ ಕಾರಣ ನಿಗದಿತ ಅವಧಿಯಲ್ಲಿ ಕೆಂಪೇಗೌಡರ ಜಯಂತ್ಯುತ್ಸವವನ್ನು ಆಚರಿಸಲು ಸಾಧ್ಯವಾಗಿರಲಿಲ್ಲ. ಡಿ. 30 ರಂದು ಅದ್ಧೂರಿಯಾಗಿ ನಾಡಪ್ರಭುಗಳ ಜಯಂತ್ಯುತ್ಸವನ್ನು ಆಚರಿಸಲಾಗುತ್ತಿದ್ದು, ಮಾಜಿ ಪ್ರಧಾನಿ ದೇವೇಗೌಡರನ್ನು ಹಾಗೂ ನಾಡಿನ ಹಲವು ಮಠಾಧೀಶರನ್ನು ಕಾರ್ಯಕ್ರಮಕ್ಕೆ ಆಹ್ವಾನಿಸಲಾಗುವುದು. ತಾಲೂಕಿನಲ್ಲಿರುವ ಎಲ್ಲಾ ಶಾಲೆಗಳಲ್ಲಿ ಅತೀ ಹೆಚ್ಚು ಅಂಕಗಳನ್ನು ಪಡೆದಿರುವ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಗುವುದು,'' ಎಂದು ಕೃಷ್ಣಮೂರ್ತಿ ತಿಳಿಸಿದರು.

ಮುಖಂಡರಾದ ಆನಂದ್‌, ತಮ್ಮಣ್ಣಗೌಡ, ಪೊಲೀಸ್‌ ರಾಮಣ್ಣ, ದೊಡ್ಡಿ ಗೋಪಿ, ಹೇಮಂತ್‌ ಗಣೇಶ್‌, ಸೀನಪ್ಪ, ಡೇರಿಮಂಜು, ರಾಮಣ್ಣ ಮತ್ತಿತರರು ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ