ಆ್ಯಪ್ನಗರ

ಕೋಲಾಟದಿಂದ ಉತ್ತಮ ಆರೋಗ್ಯ ಕಾಪಾಡಿಕೊಳ್ಳಬಹುದು

ನಗರದ ಜಾನಪದ ಲೋಕದಲ್ಲಿ ಪಾಂಡವಪುರ ತಾಲೂಕಿನ ಮೇನಾಗರ ಗ್ರಾಮದ ಶ್ರೀ ಆಂಜನೇಯಸ್ವಾಮಿ ಜಾನಪದ ಕಲಾ ಬಳಗದ ವತಿಯಿಂದ ಕೋಲಾಟ ಪ್ರದರ್ಶನ ನಡೆಯಿತು.

Vijaya Karnataka 18 Jun 2019, 4:33 pm
ಜಾನಪದ ಲೋಕದಲ್ಲಿ ಕೋಲಾಟ ಪ್ರದರ್ಶನ
Vijaya Karnataka Web kolata helpful to good health
ಕೋಲಾಟದಿಂದ ಉತ್ತಮ ಆರೋಗ್ಯ ಕಾಪಾಡಿಕೊಳ್ಳಬಹುದು


ರಾಮನಗರ: ನಗರದ ಜಾನಪದ ಲೋಕದಲ್ಲಿ ಪಾಂಡವಪುರ ತಾಲೂಕಿನ ಮೇನಾಗರ ಗ್ರಾಮದ ಶ್ರೀ ಆಂಜನೇಯಸ್ವಾಮಿ ಜಾನಪದ ಕಲಾ ಬಳಗದ ವತಿಯಿಂದ ಕೋಲಾಟ ಪ್ರದರ್ಶನ ನಡೆಯಿತು.

ಈ ವೇಳೆ ಹಿರಿಯ ಕಲಾವಿದ ಶಿವಣ್ಣಗೌಡ ಮಾತನಾಡಿ, 40 ವರ್ಷಗಳಿಂದ ಕೋಲಾಟ ಪ್ರದರ್ಶನ ನೀಡುತ್ತಿದ್ದೇನೆ. ನೂರಾರು ಜನರಿಗೆ ಕಲಿಸಿ ಕೊಟ್ಟಿದ್ದೇನೆ. ಈಗಲೂ ಕೋಲಾಟ ಪ್ರದರ್ಶನಕ್ಕೆ ಬೇಡಿಕೆ ಇದೆ ಎಂದು ತಿಳಿಸಿದರು.

ಕೋಲಾಟ ಪ್ರಾಚೀನವಾದ ಕಲೆ:

ಜನಪದ ಕಲೆಗಳಾದ ಡೊಳ್ಳು ಕುಣಿತ, ಪಟ ಕುಣಿತ, ಪೂಜಾ ಕುಣಿತದಂತೆ ಕೋಲಾಟ ಕುಣಿತವನ್ನು ಜನರು ಇಷ್ಟ ಪಡುತ್ತಾರೆ. ಕೋಲಾಟ ಪ್ರಾಚೀನವಾದ ಕಲೆಯಾಗಿದೆ. ಗೋಪಿಕಾ ಸ್ತ್ರೀಯರು ಶ್ರೀ ಕೃಷ್ಣನೊಂದಿಗೆ ಬಣ್ಣದ ಕೋಲುಗಳಿಗೆ ಆಟವಾಡಿದುದು ಕೋಲಾಟ ಪ್ರಾಚೀನವಾದ ಕಲೆ ಎಂಬುದನ್ನು ತಿಳಿಸುತ್ತದೆ ಎಂದರು.

ಸಮಾಜಕ್ಕೆ ಉತ್ತಮ ಸಂದೇಶ:

ಊರ ಹಬ್ಬಗಳಲ್ಲಿ, ಉತ್ಸವಗಳಲ್ಲಿ ಹೆಚ್ಚಿನ ಕಾರ್ಯಕ್ರಮಗಳು ಸಿಗುತ್ತವೆ. ಕೋಲಾಟ ಆಡುವುದರಿಂದ ಉತ್ತಮವಾದ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು. ಕೋಲಾಟದ ಗೀತೆಗಳು ಸಮಾಜಕ್ಕೆ ಉತ್ತಮವಾದ ಸಂದೇಶ ನೀಡುತ್ತವೆ ಎಂದು ಅವರು ಹೇಳಿದರು.

ಒಬ್ಬನ ಕೋಲಿಗೆ ಮತ್ತೊಬ್ಬನ ಕೋಲನ್ನು ತಾಕಿಸುವ ಮೂಲಕ ಆರಂಭವಾಗುವ ಕೋಲಾಟ ಒಬ್ಬನಿಗೆ ಮತ್ತೊಬ್ಬ ಸುತ್ತು ಹೊಡೆಯುತ್ತಾ ಆಡುವುದು, ಗುಂಪಿನಲ್ಲಿಯೇ ಚದುರಿದಂತೆ ನಿಂತು ಹೊರಗಿನವರು ಒಳಗೂ, ಒಳಗಿನವನು ಹೊರಗೂ ಕೋಲನ್ನು ಕೊಡುವುದು, ಹೀಗೆ ಆಡುತ್ತಾ ಕುಳಿತು ಕೋಲು ಕೊಡುವುದು, ಎರಡು ಗುಂಪು ಎದುರುಬದುರು ನಿಂತು ಕೋಲು ಕೊಡುವುದು, ಇತ್ಯಾದಿಯಾಗಿ ವಿವಿಧ ಗತಿಯಲ್ಲಿ ಕೋಲಾಟವು ನಡೆಯುತ್ತದೆ ಎಂದರು.

ಕೋಲಾಟದ ಕಲಾವಿದರಾದ ಶಿವರಾಜು, ಅಶ್ವತ್ಥ್‌, ಕುಮಾರ್‌, ಮಹೇಶ್‌, ರವೀಶ್‌, ಭರತ್‌, ಪ್ರತಾಪ್‌, ಕಾಳೇಗೌಡ, ಪುಟ್ಟಸ್ವಾಮಿಗೌಡ, ಜಯರಾಮೇಗೌಡ, ಪ್ರದೀಪ್‌, ಸಂತೋಷ್‌ ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ