ಆ್ಯಪ್ನಗರ

ಬೇಡಿಕೆ ಕಳೆದುಕೊಂಡ ತೊಗಲುಗೊಂಬೆಯಾಟ

ಪೋಷಕರ ಜತೆ ಒಂದು ಹಳ್ಳಿಗೆ ಹೋದರೆ ಅಲ್ಲೇ ಒಂದು ತಿಂಗಳ ಕಾಲ ಇದ್ದು, ರಾಮಾಯಣದ ಕಥೆಗಳನ್ನು 9 ರಾತ್ರಿಗಳ ಕಾಲ, ಮಹಾಭಾರತದ ಕಥೆ ಗಳನ್ನು 18 ದಿನಗಳ ಪ್ರದರ್ಶನ ನೀಡುತ್ತಿದ್ದೆವು ಎಂದು ಚಿಕ್ಕಗಂಗವಾಡಿಯ ತೊಗಲು ಗೊಂಬೆಯಾಟದ ಕಲಾವಿದೆ ಗೌರಮ್ಮ ತಿಳಿಸಿದರು.

Vijaya Karnataka 14 Oct 2019, 3:22 pm
ರಾಮನಗರ: ಪೋಷಕರ ಜತೆ ಒಂದು ಹಳ್ಳಿಗೆ ಹೋದರೆ ಅಲ್ಲೇ ಒಂದು ತಿಂಗಳ ಕಾಲ ಇದ್ದು, ರಾಮಾಯಣದ ಕಥೆಗಳನ್ನು 9 ರಾತ್ರಿಗಳ ಕಾಲ, ಮಹಾಭಾರತದ ಕಥೆ ಗಳನ್ನು 18 ದಿನಗಳ ಪ್ರದರ್ಶನ ನೀಡುತ್ತಿದ್ದೆವು ಎಂದು ಚಿಕ್ಕಗಂಗವಾಡಿಯ ತೊಗಲು ಗೊಂಬೆಯಾಟದ ಕಲಾವಿದೆ ಗೌರಮ್ಮ ತಿಳಿಸಿದರು. ನಗರದ ಜಾನಪದ ಲೋಕದಲ್ಲಿಆಯೋಜಿಸಿದ್ದ ತಿಂಗಳ ಅತಿಥಿ ಕಾರ್ಯ ಕ್ರಮದಲ್ಲಿ ಮಾತನಾಡಿದರು.
Vijaya Karnataka Web leather doll game is lost demand
ಬೇಡಿಕೆ ಕಳೆದುಕೊಂಡ ತೊಗಲುಗೊಂಬೆಯಾಟ


ವರದಕ್ಷಿಣೆಯಾಗಿ ಗೊಂಬೆ: ಹಾರ್ಮೋನಿಯಂ ಇಲ್ಲದಿದ್ದ ಕಾಲದಲ್ಲಿ ಮೃದಂಗ ಮತ್ತು ಗಂಗಾಳ ಶೃತಿಯನ್ನು ಸೇರಿಸಿ ಗೊಂಬೆಗಳನ್ನು ಕುಣಿಸುತ್ತಿದ್ದೆವು. ನಮ್ಮ ಮದುವೆಯ ಸಂದರ್ಭ ದಲ್ಲಿಗೊಂಬೆಗಳನ್ನೆ ವರದಕ್ಷಿಣೆಯಾಗಿ ಕೊಡು ತ್ತಿದ್ದರು. ಪ್ರಾಣಿಗಳ ಚರ್ಮದಿಂದ ಗೊಂಬೆಗಳನ್ನು ತಯಾರಿಸುತ್ತಿದ್ದೆವು ಎಂದು ಹೇಳಿದರು.

ಆಧುನಿಕತೆ ತುಳಿತಕ್ಕೆ ಸಿಕ್ಕಿ ನಾಶ: ಅಧುನಿಕ ವಿಜ್ಞಾನದ ತುಳಿತಕ್ಕೆ ಸಿಲುಕಿ ಕಾಲಕ್ರಮೇಣ ತೊಗಲು ಗೊಂಬೆ ಯಾಟದ ಪ್ರದರ್ಶನಕ್ಕೆ ಬೇಡಿಕೆ ಕಡಿಮೆ ಯಾಯಿತು. ನಂತರದ ಪೌರಾಣಿಕ ನಾಟಕಗಳಲ್ಲಿ ಭೀಮ, ದಶರಥ ಸೇರಿ ಹಲವು ಪಾತ್ರಗಳಲ್ಲಿಅಭಿ ನಯಿಸಿ ದ್ದೇನೆ ಎಂದು ತಮ್ಮ ನೆನಪುಗಳನ್ನು ಮೆಲಕು ಹಾಕಿದರು.

ಅವಕಾಶಕ್ಕೆ ಮನವಿ: ಇಪ್ಪತ್ತು ಕುಂಟೆ ಜಮೀನಿನಲ್ಲಿ13 ಜನರು ಜೀವನ ನಡೆಸುವ ಪರಿಸ್ಥಿತಿ ಇದೆ. ಆದ್ದರಿಂದ ಸಂಘಸಂಸ್ಥೆಗಳು, ಶಾಲಾ ಕಾಲೇಜು ಗಳಲ್ಲಿ, ಗ್ರಾಮಗಳಲ್ಲಿತೊಗಲು ಗೊಂಬೆ ಯಾಟದ ಪ್ರದರ್ಶನದ ಅವ ಕಾಶ ನೀಡಿದರೆ ಅನುಕೂಲ ಎಂದರು.

ತೊಗಲು ಬೊಂಬೆಯಾಟ: ಇದೇ ಸಂದರ್ಭದಲ್ಲಿ ದೇವಿ ಮಹಾತ್ಮೆಯ ಮಹಿಷಾಸುರ ಮರ್ಧಿನಿ ಪ್ರಸಂಗದ ಪ್ರದರ್ಶನ ನಡೆಯಿತು. ಜಾನಪದ ಲೋಕದ ಮುಖ್ಯ ಆಡಳಿತಾಧಿಕಾರಿ ಸಿ.ಎನ್‌. ರುದ್ರಪ್ಪ ಮಾತನಾಡಿ, ಚನ್ನಪಟ್ಟಣದ ಹಿರಿಯ ಔಷಧಿ ತಜ್ಞ ವೇದಮೂರ್ತಿ, ವಿಭೂತಿಕೆರೆ ಗ್ರಾಮ ಪಂಚಾಯಿತಿ ಅಧ್ಯಕ್ಷ ಆರ್‌. ಶಿವಾನಂದ, ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾಘಟಕದ ಅಧ್ಯಕ್ಷ ಸಿಂ.ಲಿಂ. ನಾಗರಾಜ್‌, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ನಿವೃತ್ತ ಸಹಾಯಕ ನಿರ್ದೇಶಕ ಎಂ. ರಾಜು, ಮಹಿಳಾ ಹೋರಾಟಗಾರ್ತಿ ಅನಸೂಯಮ್ಮ, ಸಂಗೀತ ವಿದ್ವಾನ್‌ ಶಿವಾಜಿ ರಾವ್‌, ಸಂಶೋಧನಾ ವಿದ್ಯಾರ್ಥಿ ಎಸ್‌. ರುದ್ರೇಶ್ವರ, ಲೇಖಕಿಯರಾದ ಕೆ.ಆರ್‌. ವಿನುತ, ಬಿ.ಎಸ್‌. ರೂಪ ಇನ್ನಿತರರು ಹಾಜರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ