ಆ್ಯಪ್ನಗರ

ಕೊಟ್ಟಿಗೆಯಲ್ಲಿ ಕುರಿ ರಕ್ಷಣೆಗೆ ಹಾಕಿದ್ದ ಉರುಳಿಗೆ ಬಿದ್ದು ಚಿರತೆ ಸಾವು

ತಾಲೂಕಿನ ಬೈರಾನಾಯಕನಹಳ್ಳಿ ಗ್ರಾಮದ ಮನೆ ಶಿವಣ್ಣ ಎಂಬುವರ ಕೊಟ್ಟಿಗೆಯಲ್ಲಿ ಹಾಕಿದ್ದ ಉರುಳಿಗೆ ಚಿರತೆ ಸಿಲುಕಿ ಸಾವಿಗೀಡಾಗಿರುವ ಘಟನೆ ನಡೆದಿದೆ...

Vijaya Karnataka 27 Mar 2019, 5:00 am
ಚನ್ನಪಟ್ಟಣ: ತಾಲೂಕಿನ ಬೈರಾನಾಯಕನಹಳ್ಳಿ ಗ್ರಾಮದ ಮನೆ ಶಿವಣ್ಣ ಎಂಬುವರ ಕೊಟ್ಟಿಗೆಯಲ್ಲಿ ಹಾಕಿದ್ದ ಉರುಳಿಗೆ ಚಿರತೆ ಸಿಲುಕಿ ಸಾವಿಗೀಡಾಗಿರುವ ಘಟನೆ ನಡೆದಿದೆ.
Vijaya Karnataka Web leopard death in the barn fell to the shaft of the sheep
ಕೊಟ್ಟಿಗೆಯಲ್ಲಿ ಕುರಿ ರಕ್ಷಣೆಗೆ ಹಾಕಿದ್ದ ಉರುಳಿಗೆ ಬಿದ್ದು ಚಿರತೆ ಸಾವು


ಸೋಮವಾರ ರಾತ್ರಿ ಮಾಕಳಿ ಮತ್ತು ಬೇವೂರು ಅರಣ್ಯ ಪ್ರದೇಶದಿಂದ ಆಹಾರ ಹುಡಿಕಿಕೊಂಡು ಬೈರಾನಾಯಕನಹಳ್ಳಿ ಗ್ರಾಮದತ್ತ ಬಂದಿದ್ದ ಮೂರು ವರ್ಷದ ಚಿರತೆ, ಶಿವಣ್ಣ ಎಂಬುವರ ಮನೆಯ ಬಳಿಯಿರುವ ಕೊಟ್ಟಿಗೆಯಲ್ಲಿ ದಾಳಿ ಮಾಡಿದ ವೇಳೆ ಕುರಿಯ ರಕ್ಷ ಣೆಗೆಂದು ಹಾಕಿದ್ದ ಬೈಕ್‌ನ ವೈರ್‌ಗೆ ಸಿಲುಕಿ ಮೃತಪಟ್ಟಿದೆ.

ಈ ಹಿಂದೆ ಹಲವಾರು ಬಾರಿ ಆಗಾಗ ಇಲ್ಲಿನ ಗ್ರಾಮದೊಳಗೆ ನುಗ್ಗಿ ರೈತರ ಸಾಕು ಪ್ರಾಣಿ ಕುರಿ, ಮೇಕೆ, ಸಾಕುನಾಯಿಗಳನ್ನು ಕೊಂದು ತಿಂದು ಹಾಕಿತ್ತು. ದನಕರುಗಳನ್ನು ಬಲಿ ತೆಗೆದುಕೊಳ್ಳುತ್ತಿತ್ತು. ಚಿರತೆಯ ಉಪಟಳದಿಂದ ಬೇಸತ್ತಿದ್ದ ಗ್ರಾಮಸ್ಥರು ಅದರ ಉಪಟಳದಿಂದ ತಪ್ಪಿಸಿಕೊಳ್ಳಲು ಮನೆಯ ಬಳಿ ಉರುಳು ಹಾಕಿ ಸೆರೆ ಸಿಕ್ಕರೆ ಅರಣ್ಯ ಇಲಾಖೆಯ ವಶಕ್ಕೆ ನೀಡಲು ತೀರ್ಮಾನಿಸಿದ್ದರು.

ರೈತ ಶಿವಣ್ಣ ತಮ್ಮ ಮನೆಯಲ್ಲಿನ ಸಾಕು ಪ್ರಾಣಿ ಮೇಕೆ ಮತ್ತು ಕುರಿ ರಕ್ಷ ಣೆಗೆ ಬೈಕ್‌ ಎಕ್ಸ್‌ ಲೇಟರ್‌ ವೈರ್‌ ಹಾಕಿದ್ದ ಉರುಳು ಮಾಡಿ ಹಾಕಿದ್ದ, ಎಂದಿನಂತೆ ಅರಣ್ಯ ಪ್ರದೇಶದಿಂದ ಗ್ರಾಮದ ಕಡೆ ಹೆಜ್ಜೆ ಹಾಕಿದ್ದ ಚಿರತೆ ಆಹಾರ ಹುಡಿಕಿಕೊಂಡು ರಾತ್ರಿ ದಾಳಿ ಮಾಡುವ ವೇಳೆಯಲ್ಲಿ ಉರುಳಿಗೆ ಏಕಾಎಕಿ ಬಿದ್ದಿದೆ. ಉರುಳಿಗೆ ಸಿಲುಕಿಕೊಂಡ ಚಿರತೆ ಗಾಬರಿಯಿಂದ ಹಾರಲು ಯತ್ನಿಸಿದಾಗ ಒದ್ದಾಡಿ ದೇಹಕ್ಕೆ ಗಂಭೀರಗಾಯವಾಗಿ ತೀವ್ರರಕ್ತಸ್ರಾವದಿಂದ ಚಿರತೆ ಸ್ಥಳದಲ್ಲೇ ಮೃತಪಟ್ಟಿದೆ.

ಅಧಿಕಾರಿಗಳ ಭೇಟಿ: ಈ ವಿಷಯ ತಿಳಿದ ಅರಣ್ಯ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಅರಣ್ಯ ಇಲಾಖೆಯ ಸಹಾಯಕ ಅರಣ್ಯಾಧಿಕಾರಿ ಎಂ. ರಾಮಕೃಷ್ಣಪ್ಪ ಪರಿಶೀಲನೆ ನಡೆಸಿ ಮಾಹಿತಿ ಪಡೆದುಕೊಂಡಿದ್ದಾರೆ.

ಚಿರತೆ ಸಾವಿನ ಬಗ್ಗೆ ಪಶು ವೈದ್ಯಾಧಿಕಾರಿಯ ಮರಣೋತ್ತರ ಪರೀಕ್ಷೆಯ ವರದಿ ನೀಡಿದ ನಂತರ ಅರಣ್ಯ ಕಾಯ್ದೆಯಡಿಯ ಪ್ರಕಾರ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ ಎಂದು ತಾಲೂಕು ಅರಣ್ಯಾಧಿಕಾರಿ ಮಹಮ್ಮದ್‌ ಮನ್ಸೂರ್‌ ಮಾಹಿತಿ ನೀಡಿದ್ದಾರೆ.

ಕಾಡಂಚಿನ ಗ್ರಾಮಗಳಿಗೆ ಪದೇಪದೆ ಚಿರತೆ, ಆನೆ, ಕರಡಿ ಸೇರಿದಂತೆ ಇನ್ನಿತರ ಕಾಡು ಪ್ರಾಣಿಗಳು ದಾಳಿ ಮಾಡುತ್ತಿದ್ದು, ಕಾಡಿನಲ್ಲಿ ಪ್ರಾಣಿಗಳಿ ನೀರು ಮತ್ತು ಆಹಾರವಿಲ್ಲದೆ ನಾಡಿನತ್ತ ದಾಳಿ ಮಾಡಿ, ಬೆಳೆ ನಷ್ಟದ ಜತೆಗೆ ಪ್ರಾಣಹಾನಿ ಆಗುವ ಸಂಭವ ಹೆಚ್ಚಾಗಿದ್ದು, ಈ ಬಗ್ಗೆ ಅರಣ್ಯ ಅಧಿಕಾರಿಗಳಿಗೆ ಮನವಿ ಮಾಡಿದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ರೈತರು ತಮ್ಮ ಅಳಲು ತೋಡಿಕೊಂಡಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ