ಆ್ಯಪ್ನಗರ

ಡಿಸೆಂಬರ್ 15ರ ಒಳಗೆ ಬೇಕೇ ಬೇಕು ಫಾಸ್ಟ್‌ ಟ್ಯಾಗ್! ಹೆದ್ದಾರಿ ಟೋಲ್‌ಗಳಲ್ಲಿ ಸರತಿ ಸಾಲಲ್ಲಿ ನಿಂತ ಸವಾರರು

ಕಾರು, ಬಸ್ಸು, ಟ್ರಾಕ್ಟರ್‌, ಲಾರಿ, ಟೆಂಪೋ ಮಾಲೀಕರು ದ್ವಿಚಕ್ರ ವಾಹನಗಳಲ್ಲಿ ಬಂದು ವಿಶೇಷವಾಗಿ ಟೋಲ್‌ಗಳ ಬಳಿಯಲ್ಲಿ ತೆರೆದಿರುವ ಫಾಸ್ಟ್‌ ಟ್ಯಾಗ್ ಮಳಿಗೆಯಲ್ಲಿ ಸರತಿಯಲ್ಲಿ ನಿಂತು ಬ್ಯಾಂಕ್‌ ಖಾತೆ ಸಂಖ್ಯೆ ಹಾಗೂ ಆಧಾರ್‌ ಪ್ರತಿ ಮತ್ತು ಪಾನ್‌ ಕಾರ್ಡ್‌ ಗಳನ್ನು ನೀಡಿ ಫಾಸ್ಟ್ ಟ್ಯಾಗ್ ನೋಂದಣಿ ಕಾರ್ಯದಲ್ಲಿ ತಲ್ಲೀನರಾಗಿದ್ದಾರೆ.

Vijaya Karnataka Web 4 Dec 2019, 3:37 pm
ಮಾಗಡಿ (ರಾಮನಗರ): ಹೆದ್ದಾರಿಗಳಲ್ಲಿ ಸಂಚರಿಸುವ ವಾಹನಗಳಿಗೆ ಟೋಲ್‌ಗಳಲ್ಲಿ ಫಾಸ್ಟ್‌ ಟ್ಯಾಗ್ ಕಡ್ಡಾಯಕ್ಕೆ ಡಿಸೆಂಬರ್ 15ರವರೆಗೂ ಗಡುವು ವಿಸ್ತರಣೆ ಮಾಡಿರೋದು ವಾಹನ ಚಾಲಕರಿಗೆ ನಿರಾಳವಾಗಿದೆ. ಆದ್ರೂ ಡಿಸೆಂಬರ್‌ 15ರ ಒಳಗೆ ಫಾಸ್ಟ್‌ ಟ್ಯಾಗ್ ಪಡೆಯಲೇಬೇಕು ಅನ್ನೋ ಕಾರಣಕ್ಕಾಗಿ ನಾಮುಂದು, ತಾಮುಂದು ಎಂದು ಕ್ಯೂನಲ್ಲಿ ನಿಲ್ಲುವಂತಾಗಿದೆ.
Vijaya Karnataka Web ಡಿಸೆಂಬರ್ 15ರ ಒಳಗೆ ಬೇಕೇ ಬೇಕು ಫಾಸ್ಟ್‌ ಟ್ಯಾಗ್! ಹೆದ್ದಾರಿ ಟೋಲ್‌ಗಳಲ್ಲಿ ಸರತಿ ಸಾಲಲ್ಲಿ ನಿಂತ ಸವಾರರು


ಬೆಂಗಳೂರು - ಮಂಗಳೂರು ರಾಷ್ಟ್ರೀಯ ಹೆದ್ದಾರಿಯ ಟೋಲ್‌ಗಳನ್ನೇ ಉದಾಹರಣೆಗೆ ತೆಗೆದುಕೊಳ್ಳುವುದಾದರೆ, ಇಲ್ಲಿ ವಾಹನ ಚಾಲಕರು ಮಾರುದ್ದ ಕ್ಯೂಗಳಲ್ಲಿ ನಿಂತು ಫಾಸ್ಟ್‌ ಟ್ಯಾಗ್ ನೋಂದಣಿ ಮಾಡಿಸಿಕೊಳ್ಳುತ್ತಿದ್ದಾರೆ. ಟೋಲ್‌ಗಳಲ್ಲಿ ಸಮಯ ಉಳಿತಾಯ ಮಾಡುವ ನಿಟ್ಟಿನಲ್ಲಿ ಜಾರಿಗೊಳಿಸಿರುವ ಯೋಜನೆಗೆ, ವಾಹನ ಚಾಲಕರು ಮತ್ತು ಸಾರ್ವಜನಿಕರು ಮಿಶ್ರ ಪ್ರತಿಕ್ರಿಯೆ ವ್ಯಕ್ತಪಡಿಸುತ್ತಿದ್ದಾರೆ.

ಕಳೆದ ಎರಡು ದಿನಗಳಿಂದಲೂ ಬೆಂಗಳೂರು-ಮಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಬರುವ ಚಿಕ್ಕಬಿದರಕಲ್ಲು, ನೆಲಮಂಗಲ, ಸೋಲೂರು ಸಮೀಪದ ಮಹಾದೇವಪುರ, ಎಡೆಯೂರು ಬಳಿಯ ಬೆಳ್ಳೂರು ಕ್ರಾಸ್‌ ಬಳಿಯ ಟೋಲ್‌ಗಳಲ್ಲಿ ಫಾಸ್ಟ್‌ ಟ್ಯಾಕ್‌ ನೋಂದಣಿ ಕಾರ್ಯ ಚುರುಕುಗೊಂಡಿದೆ.

ನಿಮ್ಮ ವಾಹನದಲ್ಲಿ ಇದ್ಯಾ ಫಾಸ್ಟ್‌ ಟ್ಯಾಗ್ ಸ್ಟಿಕ್ಕರ್? ಎಲ್ಲಿ ಸಿಗುತ್ತೆ?

ಕಾರು, ಬಸ್ಸು, ಟ್ರಾಕ್ಟರ್‌, ಲಾರಿ, ಟೆಂಪೋ ಮಾಲೀಕರು ದ್ವಿಚಕ್ರ ವಾಹನಗಳಲ್ಲಿ ಬಂದು ವಿಶೇಷವಾಗಿ ಟೋಲ್‌ಗಳ ಬಳಿಯಲ್ಲಿ ತೆರೆದಿರುವ ಫಾಸ್ಟ್‌ ಟ್ಯಾಗ್ ಮಳಿಗೆಯಲ್ಲಿ ಸರತಿಯಲ್ಲಿ ನಿಂತು ಬ್ಯಾಂಕ್‌ ಖಾತೆ ಸಂಖ್ಯೆ ಹಾಗೂ ಆಧಾರ್‌ ಪ್ರತಿ ಮತ್ತು ಪಾನ್‌ ಕಾರ್ಡ್‌ ಗಳನ್ನು ನೀಡಿ ಫಾಸ್ಟ್ ಟ್ಯಾಗ್ ನೋಂದಣಿ ಕಾರ್ಯದಲ್ಲಿ ತಲ್ಲೀನರಾಗಿದ್ದಾರೆ.

ಟೋಲ್‌ನವರು ಕೊಟ್ಟಿರುವ ಮಾಹಿತಿ ಪ್ರಕಾರ, ನಿತ್ಯ ಒಂದು ಟೋಲ್‌ನಲ್ಲಿ ಲಕ್ಷಗಟ್ಟಲೆ ವಾಹನಗಳು ಓಡಾಟ ನಡೆಸಲಿವೆ. ಇಲ್ಲಿವರೆಗೂ ಫಾಸ್ಟ್‌ ಟ್ಯಾಗ್ ಆಗಿರುವುದು ಕೇವಲ 15 ಪರ್ಸೆಂಟ್‌ ಮಾತ್ರ ಎಂದಿದ್ದಾರೆ.

ಆಪ್‌ ಬಿಡುವಂತೆ ಮನವಿ : ಫಾಸ್ಟ್‌ ಟ್ಯಾಗ್ ನೋಂದಣಿ ಸಂಬಂಧ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಮೊಬೈಲ್‌ ಆಪ್‌ ಬಿಡುಗಡೆಗೊಳಿಸಿ ಮಾಹಿತಿ ಕೊಟ್ಟರೆ ಎಲ್ಲಾ ವಾಹನ ಚಾಲಕರು ಮತ್ತು ಮಾಲೀಕರು ಆಪ್‌ನಲ್ಲಿ ಸುಲಭವಾಗಿ ನೋಂದಣಿ ಮಾಡಿಕೊಳ್ಳುತ್ತಾರೆ. ಇದರಿಂದ ಸಮಯವೂ ಉಳಿತಾಯವಾಗಲಿದೆ ಜತೆಗೆ ಟೋಲ್‌ ಸಿಬ್ಬಂದಿ ಕೆಲಸವೂ ಕಮ್ಮಿಯಾಗಲಿದೆ ಎನ್ನುತ್ತಿದ್ದಾರೆ ವಾಹನ ಮಾಲೀಕರು.

ಫಾಸ್ಟ್‌ಟ್ಯಾಗ್‌ನಿಂದ 3000 ಉದ್ಯೋಗಕ್ಕೆ ಕತ್ತರಿ: ಟೋಲ್‌ ಸಮೀಪದ ವ್ಯಾಪಾರಕ್ಕೂ ಹೊಡೆತ!

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ