ಆ್ಯಪ್ನಗರ

ರಾಮನವಮಿ ಪಾನಕಕ್ಕೆ ಮಂಡ್ಯ, ಮದ್ದೂರು ಆಲೆಮನೆ ಬೆಲ್ಲ

ಮರ್ಯಾದ ಪುರುಷೋತ್ತಮ ರಾಮನ ರಾಮನವಮಿ ಹಬ್ಬದ ಪಾನಕಕ್ಕೆ ಬೇಕಿರುವ ಬೆಲ್ಲ ನೆರೆ ಜಿಲ್ಲೆ ಮಂಡ್ಯ, ಮದ್ದೂರಿನಿಂದ ಜಿಲ್ಲೆಗೆ ಸರಬರಾಜಾಗುತ್ತಿದೆ. ರೈತರ ಮಟ್ಟಿಗೆ ಬೆಲ್ಲದ ಬೆಲೆ ಏರಿಳಿತ ಕಾಣುತ್ತಿದ್ದರೂ, ಗ್ರಾಹಕರ ಜೇಬಿಗೆ ಹೊರೆ ತಗ್ಗಿಲ್ಲದಿರುವುದು ಅಚ್ಚರಿಗೆ ಕಾರಣವಾಗಿದೆ. ಯುಗಾದಿ ಹಬ್ಬಕ್ಕೆ ಗಗನಕ್ಕೇರಿದ್ದ ಬೆಲ್ಲದ ಬೆಲೆ ಈಗ ಸ್ವಲ್ಪ ಇಳಿಕೆ ಕಂಡಿದೆ.

Vijaya Karnataka 14 Apr 2019, 4:29 pm
ಮಾಗಡಿ ಗ್ರಾಮಾಂತರ: ಮರ್ಯಾದ ಪುರುಷೋತ್ತಮ ರಾಮನ ರಾಮನವಮಿ ಹಬ್ಬದ ಪಾನಕಕ್ಕೆ ಬೇಕಿರುವ ಬೆಲ್ಲ ನೆರೆ ಜಿಲ್ಲೆ ಮಂಡ್ಯ, ಮದ್ದೂರಿನಿಂದ ಜಿಲ್ಲೆಗೆ ಸರಬರಾಜಾಗುತ್ತಿದೆ. ರೈತರ ಮಟ್ಟಿಗೆ ಬೆಲ್ಲದ ಬೆಲೆ ಏರಿಳಿತ ಕಾಣುತ್ತಿದ್ದರೂ, ಗ್ರಾಹಕರ ಜೇಬಿಗೆ ಹೊರೆ ತಗ್ಗಿಲ್ಲದಿರುವುದು ಅಚ್ಚರಿಗೆ ಕಾರಣವಾಗಿದೆ. ಯುಗಾದಿ ಹಬ್ಬಕ್ಕೆ ಗಗನಕ್ಕೇರಿದ್ದ ಬೆಲ್ಲದ ಬೆಲೆ ಈಗ ಸ್ವಲ್ಪ ಇಳಿಕೆ ಕಂಡಿದೆ.
Vijaya Karnataka Web mandya maddur alemane jaggery for ramanavami panaka
ರಾಮನವಮಿ ಪಾನಕಕ್ಕೆ ಮಂಡ್ಯ, ಮದ್ದೂರು ಆಲೆಮನೆ ಬೆಲ್ಲ


ಮಂಡ್ಯ ಆಲೆಮನೆಯಿಂದ ಪೂರೈಕೆ:

ನೆರೆ ಜಿಲ್ಲೆ ಮಂಡ್ಯ ಆಲೆಮನೆಗಳಿಂದ ಬೆಲ್ಲದ ಪಿಂಡಿಗಳು ಜಿಲ್ಲೆಯ ಹಲವಾರು ಅಂಗಡಿಗಳಿಗೆ ಬಂದು ಸೇರುತ್ತಿವೆ. ಕೆ.ಜಿ ಅಚ್ಚು ಬೆಲ್ಲ 45 ರೂ ಮಾರಟವಾಗುತ್ತಿದ್ದರೆ, ಉಂಡೆ ಬೆಲ್ಲ ಕೆಜಿಗೆ 40 ರೂ.ಗೆ ಸಿಗುತ್ತಿದೆ. ಯುಗಾದಿ ವೇಳೆ ಉಂಡೆ ಬೆಲ್ಲ 50 ರೂ. ದಾಟಿತ್ತು.

ಅನ್ಯ ರಾಜ್ಯಗಳ ಹಿಂದೇಟು :

ಮಂಡ್ಯ ಬೆಲ್ಲ ದೇಶದಾದ್ಯಂತ ಪ್ರಸಿದ್ಧಿ ಪಡೆದಿದೆ. ಆದರೆ ಗುಜರಾತ್‌, ರಾಜಸ್ಥಾನ, ಪಂಜಾಬ್‌, ಹರಿಯಾಣ, ಆಂಧ್ರಪ್ರದೇಶ ಮುಂತಾದ ರಾಜ್ಯಗಳಿಗೂ ಸರಬರಾಜಾಗುತಿತ್ತು. ದಾವಣಗೆರೆ, ಹೊಸಪೇಟೆ, ಬಳ್ಳಾರಿ ಭಾಗ ಸೇರಿ ಉತ್ತರ ಕರ್ನಾಟಕಕ್ಕೂ ರವಾನೆಯಾಗುತ್ತಿತ್ತು. ಆದರೆ ಇತ್ತೀಚೆಗೆ ಮಂಡ್ಯ ಬೆಲ್ಲಕೊಳ್ಳಲು ಇತರೆ ರಾಜ್ಯಗಳು ಹಿಂದೇಟು ಹಾಕಿದ ಹಿನ್ನೆಲೆಯಲ್ಲಿ ಮಂಡ್ಯ ಬೆಲ್ಲ ನಮ್ಮ ರಾಜ್ಯದಲ್ಲಿಯೇ ಹೆಚ್ಚು ಓಡಾಡುತ್ತಿದೆ. ಇದರಿಂದ ಬೆಲೆಯೂ ಕಡಿಮೆಯಾಗಿದೆ ಎನ್ನುತ್ತಾರೆ ಬೆಲ್ಲ ಮಾರಾಟಗಾರರು.

ಭಾರೀ ಕುಸಿತ :

ಡಿ.12 ರಿಂದ ಕ್ವಿಂಟಲ್‌ ಬಕೆಟ್‌ ಬೆಲ್ಲದ ಬೆಲೆ 1,100 ರೂ. ಕುಸಿದಿದೆ. ಅಚ್ಚು, ಬಾಕ್ಸ್‌, ಕುರಿಕಾಲಚ್ಚು ಬೆಲ್ಲದ ಬೆಲೆಯಲ್ಲಿ 1000 ರೂ. ಇಳಿಕೆಯಾಗಿದೆ. ದಶಕದಿಂದೀಚೆಗೆ ಇಷ್ಟೊಂದು ದೊಡ್ಡ ಪ್ರಮಾಣದಲ್ಲಿ ಕುಸಿತ ಕಂಡಿರಲಿಲ್ಲ. ಮಾರುಕಟ್ಟೆಯಲ್ಲಿ ಚಿನ್ನದಂತಹ ಹೊಳಪಿನ ಬೆಲ್ಲವೂ ಮಾರಾಟವಾಗದೇ, ಉಳಿದಿದ್ದು ರೈತರು ಆತಂಕಕ್ಕೀಡಾಗಿದ್ದಾರೆ. ಹೆಚ್ಚು ದಿನ ಸಂಗ್ರಹಿಸಿಡಲು ಸಾಧ್ಯವಾಗದೆ, ಆಲೆಮನೆ ಮಾಲೀಕರು ಕೇಳಿದ ಬೆಲೆಗೆ ಮಾರಾಟ ಮಾಡುತ್ತಿದ್ದಾರೆ.

ಬೆಲ್ಲದ ಬೆಲೆ ವಿವರ (ಕ್ವಿಂಟಲ್‌ಗೆ)

ದಿನಾಂಕ ಅಚ್ಚುಬೆಲ್ಲ ಉಂಡೆ ಬೆಲ್ಲ ಬಕೆಟ್‌ ಬೆಲ್ಲ

ಡಿ.1 3,100 3,000 3,100

ಜ. 1 2,950 2,800 2,900

ಮಾ.1 1 2,800 2,700 2,700

ಏ. 12 2,600 2,650 2,550

-----

ಮಂಡ್ಯ ಬೆಲ್ಲ ಈ ಬಾರಿ ಹೆಚ್ಚು ಸ್ಥಳೀಯ ಅಂಗಡಿಗಳಿಗೆ ರವಾನೆಯಾಗುತ್ತಿದೆ. ಅನ್ಯ ರಾಜ್ಯಗಳಲ್ಲಿ ಉತ್ತರ ಪ್ರದೇಶದ ಬೆಲ್ಲ ಹೆಚ್ಚು ಓಡಾಡುತ್ತಿರುವುದರಿಂದ ಬೆಲ್ಲದ ಬೆಲೆ ಕುಸಿದಿದೆ.

* ಶಂಕರ್‌ ಪ್ರಸಾದ್‌, ಬೆಲ್ಲದ ವ್ಯಾಪಾರಿ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ