ಆ್ಯಪ್ನಗರ

ನಿಫಾ ವೈರಸ್‌ಗೆ ಮಾವು ಬೆಲೆ ಇಳಿಕೆ: ವೆಂಕಟೇಶ್‌

ಕಳೆದ ವರ್ಷ ನಿಫಾ ವೈರಸ್‌ ಭೀತಿ ಹಾಗೂ ವಿವಿಧ ಕಾರಣಗಳಿಂದಾಗಿ ಮಾವಿನ ಬೆಲೆ ಮತ್ತು ಬೇಡಿಕೆ ಕುಸಿದು ರೈತರು ನಷ್ಟ ಅನುಭವಿಸುವಂತಾಗಿತ್ತು ಎಂದು ತೋಟಗಾರಿಕೆ ಇಲಾಖೆಯ ನಿರ್ದೇಶಕ ಎಂ.ವಿ. ವೆಂಕಟೇಶ್‌ ಹೇಳಿದರು.

Vijaya Karnataka 5 Apr 2019, 4:06 pm
ರಾಮನಗರ: ಕಳೆದ ವರ್ಷ ನಿಫಾ ವೈರಸ್‌ ಭೀತಿ ಹಾಗೂ ವಿವಿಧ ಕಾರಣಗಳಿಂದಾಗಿ ಮಾವಿನ ಬೆಲೆ ಮತ್ತು ಬೇಡಿಕೆ ಕುಸಿದು ರೈತರು ನಷ್ಟ ಅನುಭವಿಸುವಂತಾಗಿತ್ತು ಎಂದು ತೋಟಗಾರಿಕೆ ಇಲಾಖೆಯ ನಿರ್ದೇಶಕ ಎಂ.ವಿ. ವೆಂಕಟೇಶ್‌ ಹೇಳಿದರು.
Vijaya Karnataka Web mango price dropped for nipah virus venkatesh
ನಿಫಾ ವೈರಸ್‌ಗೆ ಮಾವು ಬೆಲೆ ಇಳಿಕೆ: ವೆಂಕಟೇಶ್‌


ನಗರದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಗುರುವಾರ ತೋಟಗಾರಿಕೆ ಇಲಾಖೆ ಹಾಗೂ ಮಾವು ಅಭಿವೃದ್ಧಿ ಮತ್ತು ಮಾರುಕಟ್ಟೆ ನಿಗಮದ ವತಿಯಿಂದ ಆಯೋಜಿಸಿದ್ದ ಮಾವು ಖರೀದಿದಾರರು ಮತ್ತು ಉತ್ಪಾದಕರ ಸಂಪರ್ಕ ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿದರು.

8 ಟನ್‌ ಫಸಲಿನ ನಿರೀಕ್ಷೆ:

ರಾಜ್ಯದಲ್ಲಿ ಪ್ರಸ್ತುತ 1.7 ಲಕ್ಷ ಹೆಕ್ಟೇರ್‌ ಪ್ರದೇಶದಲ್ಲಿ ಮಾವು ಬೆಳೆಯಲಾಗುತ್ತದೆ. ಈ ಭಾರಿ 8 ಲಕ್ಷ ಟನ್‌ನಷ್ಟು ಮಾವು ಉತ್ಪನ್ನ ಸಿಗುವ ನಿರೀಕ್ಷೆ ಇದ್ದು, ರೈತರು ಮಾವಿನ ಹಣ್ಣನ್ನು ವೈಜ್ಞಾನಿಕವಾಗಿ ಸಂಸ್ಕರಿಸಿ ಅಂತರರಾಷ್ಟ್ರೀಯ ಮಾರುಕಟ್ಟೆಯವರೆಗೂ ತೆಗೆದುಕೊಂಡು ಹೋದಾಗ ಮಾತ್ರ ಉತ್ತಮ ಬೆಲೆ ಲಭಿಸುತ್ತದೆ ಎಂದು ಹೇಳಿದರು.

ಉತ್ತಮ ಮಾರುಕಟ್ಟೆ ಸಂಪರ್ಕ ಇಲ್ಲದಿರುವುದೂ ಮಾವಿನ ಹಣ್ಣಿನ ಬೆಲೆ ಕುಸಿತಕ್ಕೆ ಕಾರಣವಾಗಿತ್ತು. ಬೆಳೆಗಾರರ ಸಮಸ್ಯೆ ಅರಿತು ರೈತರು ಮತ್ತು ಖರೀದಿದಾರರ ನಡುವೆ ಸಂಪರ್ಕ ಬೆಳೆಸಲು ಈ ಸಮಾವೇಶ ಆಯೋಜಿಸಲಾಗಿದೆ ಎಂದರು.

50 ಸಾವಿರ ಟನ್‌ ಕೊಯ್ಲು:

ಉಪನ್ಯಾಸ ನೀಡಿ ಮಾತನಾಡಿದ ತೋಟಗಾರಿಕೆ ಇಲಾಖೆಯ ನಿವೃತ್ತ ಅಧಿಕಾರಿ ಡಾ. ಹಿತ್ತಲಮನಿ, ಈ ವರ್ಷ 8 ಲಕ್ಷ ಟನ್‌ ಇಳುವರಿ ನಿರೀಕ್ಷಿಸಲಾಗಿದೆ. ಜಿಲ್ಲೆಯಲ್ಲಿ ಈಗಾಗಲೇ 50 ಸಾವಿರ ಟನ್‌ನಷ್ಟು ಉತ್ಪನ್ನ ಕೊಯ್ಲು ಆಗುತ್ತಿದೆ ಎಂದು ಹೇಳಿದರು.

ಆನ್‌ಲೈನ್‌ ಮೂಲಕ ಮಾರುಕಟ್ಟೆ ಸಂಪರ್ಕ:

ಹೆಚ್ಚುವರಿ ಜಿಲ್ಲಾಧಿಕಾರಿ ಬಿ.ಪಿ.ವಿಜಯ್‌ ಮಾತನಾಡಿ, ಮಾರುಕಟ್ಟೆಗಳ ನಡುವೆ ಸಂಪರ್ಕ ಕಲ್ಪಿಸಿ ಆನ್‌ಲೈನ್‌ ಮೂಲಕ ವಹಿವಾಟು ನಡೆದಲ್ಲಿ ರೈತರಿಗೆ ಉತ್ತಮ ಬೆಲೆ ಸಿಗಲಿದೆ. ರಾಜ್ಯದಲ್ಲಿ ಆ್ಯಪ್‌ ಮತ್ತು ವೆಬ… ಆಧಾರಿತ ಮಾರುಕಟ್ಟೆ ನಿರ್ಮಾಣದ ಅಗತ್ಯವಿದೆ ಎಂದು ಹೇಳಿದರು.

ಮಾವು ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ನಿರ್ದೇಶಕ ಸಿ.ಜಿ. ನಾಗರಾಜು, ತೋಟಗಾರಿಕೆ ಇಲಾಖೆಯ ಉಪನಿರ್ದೇಶಕ ಗುಣವಂತ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳಾದ ನಾಗೇಂದ್ರ ಪ್ರಸಾದ್‌, ಉಮೇಶ್‌, ವಿಶ್ವನಾಥ್‌ ಇದ್ದರು.

25ಕ್ಕೂ ಹೆಚ್ಚು ರಪ್ತುದಾರರು:

ಸಮಾವೇಶದಲ್ಲಿ 25ಕ್ಕೂ ಹೆಚ್ಚು ರಫ್ತುದಾರರು ಹಾಗೂ 15ಕ್ಕೂ ಹೆಚ್ಚು ಸಗಟು ಖರೀದಿದಾರರು ಪಾಲ್ಗೊಂಡಿದ್ದು, ಅವರನ್ನು ರೈತರೊಂದಿಗೆ ಸಂಪರ್ಕ ಬೆಸೆಯುವ ಪ್ರಯತ್ನ ನಡೆಯಿತು. ಮಾವಿನ ಕಾಯಿಯು ಹೀಚು ಹಂತದಲ್ಲಿ ಇರುವಾಗಲೇ ಅದಕ್ಕೆ ಕವರ್‌ ಕಟ್ಟಿ, ರೋಗಗಳಿಂದ ಕಾಪಾಡುವ ಕಾಸ್ಮೆಟಿಕ್‌ ಪ್ರೋಟ್‌ ಎಂಬ ತಂತ್ರಗಾರಿಕೆ ಜನತೆಯ ಗಮನ ಸೆಳೆಯಿತು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ