ಆ್ಯಪ್ನಗರ

ಆರೋಗ್ಯ ಮತ್ತು ಸ್ವಚ್ಛತೆಗಾಗಿ ಮ್ಯಾರಥಾನ್‌

ಆರೋಗ್ಯ ಹಾಗೂ ಸ್ವಚ್ಛತೆಯ ಅರಿವಿಗಾಗಿ ಮ್ಯಾರಥಾನ್‌ ಹಮ್ಮಿಕೊಳ್ಳಲಾಗುತ್ತಿದೆ ಎಂದು ಯೋಗಮಕರಂದ ಸಂಘದ ಅಧ್ಯಕ್ಷ ರಂಗನಾಥ್‌ ಹೇಳಿದರು.

Vijaya Karnataka 27 Dec 2018, 5:00 am
ಕುದೂರು: ಆರೋಗ್ಯ ಹಾಗೂ ಸ್ವಚ್ಛತೆಯ ಅರಿವಿಗಾಗಿ ಮ್ಯಾರಥಾನ್‌ ಹಮ್ಮಿಕೊಳ್ಳಲಾಗುತ್ತಿದೆ ಎಂದು ಯೋಗಮಕರಂದ ಸಂಘದ ಅಧ್ಯಕ್ಷ ರಂಗನಾಥ್‌ ಹೇಳಿದರು.
Vijaya Karnataka Web marathon for health and hygiene
ಆರೋಗ್ಯ ಮತ್ತು ಸ್ವಚ್ಛತೆಗಾಗಿ ಮ್ಯಾರಥಾನ್‌


ಕುದೂರು ವೈನತೇಯ ಆರ್ಕೇಡ್‌ನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಇಂದಿನ ಮೊಬೈಲ್‌ ಹಾಗೂ ಸಮೂಹ ಮಾಧ್ಯಮಗಳ ನಡುವೆ ಅಂಕಣಕ್ಕಿಳಿದು ಆಟ ಆಡುವವರು, ಯೋಗ ಹಾಗೂ ವ್ಯಾಯಾಮ ಮಾಡುವವರ ಸಂಖ್ಯೆ ದಿನೇ ದಿನೆ ಕಡಿಮೆಯಾಗುತ್ತಿರುವುದು ಬೇಸರದ ಸಂಗತಿ. ಈ ನಿಟ್ಟಿನಲ್ಲಿ ದೈಹಿಕ ಹಾಗೂ ಮಾನಸಿಕ ಸ್ವಾಸ್ಥ್ಯ ಮತ್ತು ಸ್ವಚತೆಯ ಅರಿವಿಗಾಗಿ ಕುದೂರಿನಲ್ಲಿ ಡಿ.30 ರಂದು ಮುಂಜಾನೆ 7 ಗಂಟೆಗೆ 5 ಕಿಮೀ ಮ್ಯಾರಥಾನ್‌ ಹಾಗೂ 25 ಕಿಮೀ ವಾಕಥಾನ್‌ ಹಮ್ಮಿಕೊಳ್ಳಲಾಗಿದೆ. ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವ ಮೂಲಕ ನಮ್ಮ ಪ್ರಯತ್ನವನ್ನು ಪ್ರೋತ್ಸಾಹಿಸಬೇಕೆಂದು ಮನವಿ ಮಾಡಿದರು.

ಯೋಗಮಕರಂದ ಸಂಘದ ಸದಸ್ಯ ಸತೀಶ್‌ ಮಾತನಾಡಿ, ಹೋಬಳಿ ಹಂತದಲ್ಲಿ ಯೋಗಮಕರಂದ ಹಾಗೂ ಗ್ರಾಮಸ್ಥರು ಸೇರಿ ವರ್ಷದ ಅಂತ್ಯದಲ್ಲಿ ಮ್ಯಾರಥಾನ್‌ ಹಮ್ಮಿಕೊಳ್ಳಲಾಗಿದೆ. ಇದಕ್ಕೆ ಸಮಸ್ತ ಗ್ರಾಮಸ್ಥರು ಆಗಮಿಸಿ ಪ್ರೋತ್ಸಾಹ ನೀಡಬೇಕು. ಎಲ್ಲಾ ವರ್ಗದವರೂ ಮ್ಯಾರಥಾನ್‌ ಹಾಗೂ ವಾಕಥಾನ್‌ನಲ್ಲಿ ಪಾಲ್ಗೊಳ್ಳಬಹದು. ವಿಜೇತರಿಗೆ ಪ್ರಥಮ, ದ್ವತೀಯ, ತೃತೀಯ ಬಹುಮಾನವಾಗಿ ಆಕರ್ಷಕ ಟ್ರೋಫಿ ಹಾಗೂ ಪ್ರಶಸ್ತಿ ಪತ್ರ ವಿತರಿಸಲಾಗುವುದು ಎಂದರು.

ಇದೇ ವೇಳೆ ಯೋಗಮಕರಂದ ಅಧ್ಯಕ್ಷ ರಂಗನಾಥ್‌, ಸದಸ್ಯ ಸತೀಶ್‌, ದ್ವಾರಕನಾಥ್‌, ಕುಮಾರ್‌, ಮಂಜುನಾಥ್‌, ಮುರಳೀಧರ್‌, ಅಣ್ಣಪ್ಪಸ್ವಾಮಿ, ಸರಸ್ವತಿ, ಕೃಷ್ಣ, ಮೂರ್ತಿ, ಸೋಮೇಶ್‌ ಹಾಗೂ ಸಂಘದ ಸದಸ್ಯರು ಹಾಜರಿದ್ದರು.

ವೇದಿಕೆ ಕಾರ್ಯಕ್ರಮ: ಬಳಿಕ ವೇದಿಕೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು ಕಾರ್ಯಕ್ರಮವನ್ನು ಚಿತ್ರನಟಿ ಅನಿತಾ ಭಟ್‌ ಉದ್ಘಾಟಿಸುವರು. ಸರ್ಕಲ್‌ ಇಸ್ಪೆಕ್ಟರ್‌ ರವಿ, ಆಲದಕಟ್ಟೆ ಆಶ್ರಮದ ಸ್ವಾಮೀಜಿ ಮತ್ತಿತರರ ಗಣ್ಯರು ಪಾಲ್ಗೊಳ್ಳುವರು. ಈ ವೇಳೆ ನಾನಾ ಕ್ಷೇತ್ರಗಳಲ್ಲಿ ಸಾಧಿತರನ್ನು ಸನ್ಮಾನಿಸಲಾಗುವುದು.

ಮ್ಯಾರಥಾನ್‌ ಸ್ಪರ್ಧೆಯಲ್ಲಿ ಕುದೂರು ಬಸ್‌ ನಿಲ್ದಾಣದಿಂದ ಓಟ ಆರಂಭಿಸಿ ಬಸವನಗುಡಿಪಾಳ್ಯ ತೆರಳಿ ಟೋಕನ್‌ ಪಡೆದು ಮತ್ತೆ ಮರಳಬೇಕು.


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ