ಆ್ಯಪ್ನಗರ

ಅನಾಮಧೇಯ ಕರೆಯಿಂದ ಮುರಿದು ಬಿದ್ದ ಮದುವೆ, ಹೆಣ್ಣಿಗೆ ಬಾಳು ಕೊಟ್ಟು ಸಾರ್ಥಕತೆ ಮೆರೆದ ಯುವಕ

ಅನಾಮಧೇಯ ಫೋನ್ ಕಾಲ್ ನಿಂದ ಮದುವೆಯೊಂದು ಮುರಿದು ಬಿದ್ದ ಘಟನೆ ಚನ್ನಪಟ್ಟಣದಲ್ಲಿ ನಡೆದಿದೆ. ಬಳಿಕ ವಧುವಿಗೆ ಮತ್ತೊಬ್ಬ ಯುವಕ ಬಾಳು ನೀಡಿ ಸಾರ್ಥಕತೆ ಮೆರೆದು , ಮೆಚ್ಚುಗೆಗೆ ಪಾತ್ರನಾಗಿದ್ದಾನೆ.

Vijaya Karnataka Web 22 Nov 2019, 3:28 pm
ರಾಮನಗರ: ಚನ್ನಪಟ್ಟಣದ ತಿಟ್ಟಮಾರನಹಳ್ಳಿಯ ಚೇತನ ಸಮುದಾಯ ಭವನದಲ್ಲಿ ನಡೆಯ ಬೇಕಿದ್ದ ಮದುವೆಯೊಂದು ಒಂದು ಫೋನ್ ಕಾಲ್ ನಿಂದ ಮುರಿದುಬಿದ್ದಿದೆ. ಹೀಗಾಗಿ ವಧುವಿಗೆ ಮತ್ತೊಬ್ಬ ಬಾಳು ನೀಡಲು ಮುಂದಾಗಿದ್ದಾನೆ.
Vijaya Karnataka Web Ramanagara


ನಗರದ ಎಲೆಕೇರಿ ಬಡಾವಣೆಯ ಭಾಗ್ಯಶ್ರೀ ಎಂಬ ವಧುವಿನ ವಿವಾಹ ಎಲೀಯೂರು ಗ್ರಾಮದ ಬಸವರಾಜು ಎಂಬವರ ಜೊತೆ ನಡೆಯಬೇಕಿತ್ತು. ಆರು ತಿಂಗಳೆ ಹಿಂದೆ ಗುರು ಹಿರಿಯರ ಸಮ್ಮಖದಲ್ಲಿ ನಿಶ್ಚಿತಾರ್ಥ ಕೂಡ ನಡೆದು ನವೆಂಬರ್ 22ಕ್ಕೆ ಮದುವೆ ನಿಗದಿ ಮಾಡಲಾಗಿತ್ತು.

ಹೀಗಾಗಿ ಮದುವೆ ತಯಾರಿಯಲ್ಲಿದ್ದ ವಧುವಿನ ಮನೆಯವರಿಗೆ ಗುರುವಾರ ರಾತ್ರಿ ಅನಾಮಧೇಯ ಕರೆಯೊಂದು ಬಂದಿದೆ. ವರನಿಗೆ ಈಗಾಗಲೇ ಮದುವೆಯಾಗಿದೆ ಮತ್ತು ಮಕ್ಕಳು ಕೂಡ ಇವೆ ಎಂದು ಅನಾಮಧೇಯ ವ್ಯಕ್ತಿ ತಿಳಿಸಿದ ಬೆನ್ನಲ್ಲೇ ಗಲಾಟೆ ಆರಂಭವಾಗಿದೆ.

ವರನ ನಾಗಿನ್ ಡ್ಯಾನ್ಸ್‌ ... ಮದುವೆಯೇ ಬೇಡವೆಂದು ಕಲ್ಯಾಣಮಂಟಪದಿಂದಲೇ ಹೋದ ವಧು...!

ಬಳಿಕ ಪ್ರಕರಣ ಪೋರ್ವ ಪೋಲೀಸ್ ಠಾಣೆಯ ಠಾಣೆ ಮೆಟ್ಟಲೇರಿದೆ. ಆರೋಪ ಸಾಬೀತಿಗೆ ವರ ಪಟ್ಟು ಹಿಡಿದುದರಿಂದ ಮಧ್ಯರಾತ್ರಿಯವರೆಗೆ ಠಾಣೆಯಲ್ಲಿ ಹೈಡ್ರಾಮವೇ ನಡೆಯಿತು. ಸುದೀರ್ಘ ಚರ್ಚೆಯ ಬಳಿಕ ಹೆಣ್ಣಿನ ಮನೆಯವರು ಮದುವೆ ನಿರಾಕರಿಸಿದರು.

ಹೈಹೀಲ್ಡ್‌ ಚಪ್ಪಲಿಯಿಂದ ಮುರಿದು ಬಿತ್ತು ಮದುವೆ

ಬಳಿಕ ಎಲೆಕೇರಿ ಗ್ರಾಮದ ಆನಂದ್ ಎಂಬಾತ ಹೆಣ್ಣಿಗೆ ಬಾಳು ಕೊಡಲು ಮುಂದಾದ. ಗುರು ಹಿರಿಯರು ಇದಕ್ಕೆ ಒಪ್ಪಿಗೆ ಸೂಚಿಸಿದ್ದು, ಆನಂದ್ ನೊಂದಿಗೆ ಭಾಗ್ಯಶ್ರೀ ವಿವಾಹ ನಡೆಯಲಿದೆ. ಘಟನೆ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಪೋರ್ವ ಠಾಣೆ ಪೊಲೀಸರು ದೂರವಾಣಿ ಕರೆ ಮಾಡಿದ ವ್ಯಕ್ತಿಯ ಪತ್ತೆಗೆ ಬಲೆ ಬೀಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ