ಆ್ಯಪ್ನಗರ

ಕಾಶ್ಮೀರ ವಿಷಯದಲ್ಲಿಮೋದಿ ಅವರದ್ದು ದಿಟ್ಟ ನಿರ್ಧಾರ

ಭಾರತದ ದೇಶದಲ್ಲಿಇದುವರೆಗಿನ ಯಾವುದೇ ಪ್ರಧಾನ ಮಂತ್ರಿಗಳು ಕೈಗೊಳ್ಳದಂತಹ ದಿಟ್ಟ ನಿರ್ಧಾರವನ್ನು ಪ್ರಧಾನಿ ನರೇಂದ್ರ ಮೋದಿ ಅವರು ಕಾಶ್ಮೀರ ವಿಚಾರದಲ್ಲಿಕೈಗೊಂಡಿದ್ದಾರೆ. ಜಮ್ಮು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡಿದ್ದ 370ನೇ ವಿಧಿ ರದ್ದು ಸಣ್ಣ ವಿಷಯವಲ್ಲ. ಈ ಹೊತ್ತಿನಲ್ಲಿಪ್ರತಿಯೊಬ್ಬರೂ ಮೋದಿ ಅವರನ್ನು ಬೆಂಬಲಿಸಿ ದೇಶ ಕಟ್ಟುವ ಕೆಲಸದಲ್ಲಿಕೈಜೋಡಿಸಬೇಕು ಎಂದು ಮಾಜಿ ಸಚಿವ ಪಿ.ಜಿ.ಆರ್‌. ಸಿಂಧ್ಯಾ ಹೇಳಿದರು.

Vijaya Karnataka 20 Sep 2019, 3:31 pm
ಕನಕಪುರ:ಭಾರತದ ದೇಶದಲ್ಲಿಇದುವರೆಗಿನ ಯಾವುದೇ ಪ್ರಧಾನ ಮಂತ್ರಿಗಳು ಕೈಗೊಳ್ಳದಂತಹ ದಿಟ್ಟ ನಿರ್ಧಾರವನ್ನು ಪ್ರಧಾನಿ ನರೇಂದ್ರ ಮೋದಿ ಅವರು ಕಾಶ್ಮೀರ ವಿಚಾರದಲ್ಲಿಕೈಗೊಂಡಿದ್ದಾರೆ. ಜಮ್ಮು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡಿದ್ದ 370ನೇ ವಿಧಿ ರದ್ದು ಸಣ್ಣ ವಿಷಯವಲ್ಲ. ಈ ಹೊತ್ತಿನಲ್ಲಿಪ್ರತಿಯೊಬ್ಬರೂ ಮೋದಿ ಅವರನ್ನು ಬೆಂಬಲಿಸಿ ದೇಶ ಕಟ್ಟುವ ಕೆಲಸದಲ್ಲಿಕೈಜೋಡಿಸಬೇಕು ಎಂದು ಮಾಜಿ ಸಚಿವ ಪಿ.ಜಿ.ಆರ್‌. ಸಿಂಧ್ಯಾ ಹೇಳಿದರು.
Vijaya Karnataka Web modis bold decision on kashmir
ಕಾಶ್ಮೀರ ವಿಷಯದಲ್ಲಿಮೋದಿ ಅವರದ್ದು ದಿಟ್ಟ ನಿರ್ಧಾರ


ತಮ್ಮ 70ನೇ ಜನ್ಮದಿನದ ಅಂಗವಾಗಿ ಕನಕಪುರ ತಾಲೂಕಿನ ಕಲ್ಲಹಳ್ಳಿಯ ವೆಂಕಟರಮಣಸ್ವಾಮಿ ದೇವಾಸ್ಥಾನದಲ್ಲಿಪೂಜೆ ಸಲ್ಲಿಸಲು ಬಂದಿದ್ದ ಅವರು ಮಾಧ್ಯಮದೊಂದಿಗೆ ಮಾತನಾಡಿದರು.

ನಿಭಾಯಿಸುವುದು ಸುಲಭವಲ್ಲ: 370ನೇ ವಿಧಿಯನ್ನು ರದ್ದುಪಡಿಸಿದ ಬಳಿಕ ಕಾಶ್ಮೀರದಲ್ಲಿಪರಿಸ್ಥಿತಿ ನಿಭಾಯಿಸುವುದು ಸುಲಭದ ಕೆಲಸವಲ್ಲ. ಇದೇ ಹೊತ್ತಿಗೆ ದೇಶದಲ್ಲಿಆರ್ಥಿಕ ಬಿಕ್ಕಟ್ಟು ತಲೆದೋರಿದೆ. ಇಂತಹ ಕಷ್ಟದ ಹೊತ್ತಿನಲ್ಲಿನಾವೆಲ್ಲರೂ ದೇಶ ಕಟ್ಟುವ ಕೆಲಸಕ್ಕೆ ಕೈಜೋಡಿಸಬೇಕಿದೆ ಎಂದರು.

ನನಗೂ ಸ್ಥಾನ ಸಿಗಲಿದೆ: ಮುಂದಿನ ಹತ್ತು ವರ್ಷಗಳ ಕಾಲ ಯಾವುದೇ ಒಂದು ಪಕ್ಷಕ್ಕೆ ಬಹುಮತ ಸಿಗುವುದು ಕಷ್ಟ. ಎಲ್ಲಾಪಕ್ಷಗಳು ಸೇರಿ ಸರಕಾರ ನಡೆಸುವ ಸಂದರ್ಭ ಬರಲಿದೆ. ಈ ಮಾತನ್ನು ಬಹಳ ಹಿಂದೆಯೇ ಜಯಪ್ರಕಾಶ್‌ ನಾರಾಯಣ್‌ ಹೇಳಿದ್ದರು. ಇದನ್ನೇ ಅವರು ಅಂದು ಸರ್ವೋದಯ ಎಂದು ಕರೆದಿದ್ದರು, ಇಂತಹ ಸನ್ನಿವೇಶ ನಿರ್ಮಾಣವಾದರೆ, ನನಗೂ ಒಂದು ಸ್ಥಾನ ಸಿಗಲಿದೆ ಎಂದು ಸಿಂಧ್ಯಾ ಭವಿಷ್ಯ ನುಡಿದರು.

ಡಿಕೆಶಿ ತಾಯಿಗೆ ಧೈರ‍್ಯ ಹೇಳಿದ್ದೇನೆ: ಕ್ಷೇತ್ರದ ಶಾಸಕ ಡಿ.ಕೆ. ಶಿವಕುಮಾರ್‌ ಈಗ ಸಂಕಷ್ಟದಲ್ಲಿದ್ದಾರೆ. ನಾನು ಸಹ ಅವರ ತಾಯಿ ಭೇಟಿ ಮಾಡಿ ಧೈರ‍್ಯ ತುಂಬಿದ್ದೇನೆ. ಸದ್ಯ ಪ್ರಕರಣ ಕೋರ್ಟ್‌ನಲ್ಲಿದೆ, ಅಲ್ಲೇ ತೀರ್ಮಾನವಾಗಲಿದೆ ಎಂದರು. ಈ ಸಂದರ್ಭದಲ್ಲಿಉಮಾಶಂಖರ್‌, ರವಿ, ಚಿಕ್ಕಸ್ವಾಮಿ, ದಾಸಪ್ಪ, ಚಿಕ್ಕಮರಿ, ಸೇರಿದಂತೆ ಅನೇಕ ಬೆಂಬಲಿಗರು ಹಾಜರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ