ಆ್ಯಪ್ನಗರ

ಓವರ್‌ ಹೆಡ್‌ ಟ್ಯಾಂಕ್‌ ದುಸ್ಥಿತಿ

ಕೋಡಿಹಳ್ಳಿ(ಕನಕಪುರ ತಾ) : ತಾಲೂಕಿನ ಮುಳ್ಳಹಳ್ಳಿ ಗ್ರಾಮದಲ್ಲಿರುವ ಓವರ್‌ ಹೆಡ್‌ ಟ್ಯಾಂಕ್‌ ದುಸ್ಥಿತಿಯಲ್ಲಿದ್ದರು ಅದನ್ನು ಸರಿಪಡಿಸಲು ಗ್ರಾಮ ಪಂಚಾಯಿತಿ ಅಧಿಕಾರಿಗಳು ...

Vijaya Karnataka 5 Apr 2019, 5:00 am
ಕೋಡಿಹಳ್ಳಿ(ಕನಕಪುರ ತಾ) : ತಾಲೂಕಿನ ಮುಳ್ಳಹಳ್ಳಿ ಗ್ರಾಮದಲ್ಲಿರುವ ಓವರ್‌ ಹೆಡ್‌ ಟ್ಯಾಂಕ್‌ ದುಸ್ಥಿತಿಯಲ್ಲಿದ್ದರು ಅದನ್ನು ಸರಿಪಡಿಸಲು ಗ್ರಾಮ ಪಂಚಾಯಿತಿ ಅಧಿಕಾರಿಗಳು ನಿರ್ಲಕ್ಷ ್ಯ ವಹಿಸಿದ್ದಾರೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.
Vijaya Karnataka Web overhead tank turmoil
ಓವರ್‌ ಹೆಡ್‌ ಟ್ಯಾಂಕ್‌ ದುಸ್ಥಿತಿ


ಕಳೆದ ಹಲವಾರು ವರ್ಷಗಳಿಂದ ಈ ಓವರ್‌ಹೆಡ್‌ ಟ್ಯಾಂಕ್‌ನಲ್ಲಿ ನೀರು ಶೇಖರಣೆಯಾಗುತ್ತಿದೆ. ಬಿರುಕು ಬಿಟ್ಟಿದ್ದು ದುಸ್ಥಿತಿಯಲ್ಲಿದ್ದರೂ ಸಹ ಯಾವುದೆ ಕ್ರಮ ಕೈಗೊಳ್ಳದೆ ಇರುವುದರಿಂದ ಇಲ್ಲಿ ವಾಸ ಮಾಡುತ್ತಿರುವ ಜನತೆ ಯಾವಾಗ ಈ ಟ್ಯಾಂಕ್‌ ಬೀಳುತ್ತದೆಯೋ ಏನು ಅನಾಹುತ ಕಾದಿದೆಯೋ ಎಂದು ಭಯದಲ್ಲಿ ತಮ್ಮ ಬದುಕು ನಡೆಸುವಂತಾಗಿದೆ.

ಶಿಥಿಲಾವಸ್ಥೆಯಲ್ಲಿ ಟ್ಯಾಂಕ್‌: ಓವರ್‌ಹೆಡ್‌ ಟ್ಯಾಂಕ್‌ಗೆ ನೀರು ಸರಬರಾಜು ಆಗುತ್ತಿದೆ. ಇಲ್ಲಿಂದಲೇ ಬೋರೆವೆಲ್‌ಗಳಿಗೆ ಮತ್ತು ಮಿನಿ ವಾಟರ್‌ ಟ್ಯಾಂಕ್‌ಗಳಿಗೆ ನೀರನ್ನು ಕೊಡಲಾಗುತ್ತಿದೆ. ಈ ಟ್ಯಾಂಕ್‌ ದುರಸ್ತಿಯಲ್ಲಿದ್ದರೂ ಸಹ ಇಲ್ಲಿಯೇ ನೀರು ಶೇಖರಣೆ ಮಾಡುತ್ತಿದ್ದಾರೆ. ಟ್ಯಾಂಕ್‌ ಶಿಥಿಲಾವಸ್ಥೆಯಲ್ಲಿದ್ದು, ರಿಪೇರಿ ಮಾಡಿಸುವ ಕೆಲಸವನ್ನು ಗ್ರಾಮ ಪಂಚಾಯಿತಿ ಸಿಬ್ಬಂದಿ ಮಾಡದೆ ನಿರ್ಲಕ್ಷ್ಯ ವಹಿಸಿದ್ದಾರೆ ಎಂದು ಗ್ರಾಮಸ್ಥರು ದೂರಿದ್ದಾರೆ.

ದುರಸ್ತಿಗೆ ಆಗ್ರಹ: ಇಲ್ಲಿನ ವಾಸಿಗಳು ಓವರ್‌ ಹೆಡ್‌ ಟ್ಯಾಂಕ್‌ ಅನ್ನು ದುರಸ್ತಿ ಪಡಿಸಿ ಎಂದು ಅನೇಕ ಬಾರಿ ಮನವಿ ಮಾಡಿದರು ಗ್ರಾಮ ಪಂಚಾಯಿತಿಯ ಅಧಿಕಾರಿಗಳು ಮಾತ್ರ ಸಬೂಬು ಹೇಳಿಕೊಂಡು ಮುಂದಕ್ಕೆ ಹಾಕುತ್ತಿದ್ದಾರೆ ಎಂದು ಆರೋಪಿಸಿದ್ದಾರೆ. ಮಳೆಗಾಲದಲ್ಲಂತೂ ಇಲ್ಲಿ ವಾಸ ಮಾಡುವ ಜನತೆ ರಾತ್ರಿ ವೇಳೆಯಲ್ಲಿ ಭಯದಿಂದಲೇ ಬದುಕು ಸಾಗಿಸುವ ಆತಂಕದಲ್ಲಿದ್ದಾರೆ. ಗಾಳಿ ಜೋರಾಗಿ ಬೀಸಿದರೆ ಎಲ್ಲಿ ಈ ಟ್ಯಾಂಕ್‌ ಕುಸಿದು ಬೀಳುತ್ತದೆಯೋ ಎಂಬ ಭಯದಲ್ಲಿಯೇ ಜೀವನ ನಡೆಸುತ್ತಿದ್ದಾರೆ. ಇಂತಹ ಸನ್ನಿವೇಶ ನಿರ್ಮಾಣ ಗೊಂಡಿದ್ದರೂ ಅಧಿಕಾರಿಗಳು ಕೈಚೆಲ್ಲಿ ಕುಳಿತಿದ್ದಾರೆ ಎಂದು ಗ್ರಾಮಸ್ಥರು ತಿಳಿಸಿದ್ದಾರೆ. ಕೂಡಲೇ ಗ್ರಾಮ ಪಂಚಾಯಿತಿ ಅಧಿಕಾರಿಗಳು ಇತ್ತ ಗಮನ ಹರಿಸಿ ಈ ಓವರ್‌ಹೆಡ್‌ ಟ್ಯಾಂಕ್‌ನ್ನು ರಿಪೇರಿ ಮಾಡಿಸಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ