ಆ್ಯಪ್ನಗರ

ರಾಮನಗರ ಜೈಲ್‌ನಲ್ಲಿ ಕೈದಿಗಳ ಕೈನಲ್ಲಿ ಮೊಬೈಲ್, ಸಿಗರೇಟ್..! ಪೊಲೀಸರ ದಾಳಿ ವೇಳೆ ಕಳ್ಳಾಟ ಬಯಲು

ಕಾರಾಗೃಹದಲ್ಲಿನ ಖೈದಿಗಳ ಕೊಠಡಿಗಳನ್ನು ಡಿವೈಎಸ್ಪಿ ಮೋಹನ್ ಕುಮಾರ್ ನೇತೃತ್ವದಲ್ಲಿ ಪೊಲೀಸರು ಶೋಧಿಸಿದರು. ಈ ವೇಳೆ ಜೈಲಿನಲ್ಲಿದ್ದ ಆರೋಪಿಗಳಾದ ಕೇಬಲ್‌ ಕಿಟ್ಟಿ, ಮುಜ್ಜಾಮಿಲ್ ಬಳಸುತ್ತಿದ್ದ ಮೊಬೈಲ್‌ಗಳು ಪತ್ತೆಯಾದವು.

Vijaya Karnataka Web 28 Jun 2021, 5:59 pm

ಹೈಲೈಟ್ಸ್‌:

  • 2 ಮೊಬೈಲ್, ಸಿಮ್, ಚಾರ್ಜರ್ ಪತ್ತೆ
  • ಸಿಗರೇಟ್‌ ಹಾಗೂ ಹಣ ಕೂಡಾ ಪತ್ತೆ
  • ಆರೋಪಿಗಳು ಬಳಸುತ್ತಿದ್ದ ಮೊಬೈಲ್ ದಾಳಿ ವೇಳೆ ವಶಕ್ಕೆ
ಹೈಲೈಟ್ಸ್‌ ಮಾತ್ರವೇ ಓದಲು ಆ್ಯಪ್‌ ಡೌನ್‌ಲೋಡ್‌ ಮಾಡಿ
Vijaya Karnataka Web ramanagara jail
ರಾಮನಗರ ಜೈಲ್‌ನಲ್ಲಿ ಕೈದಿಗಳ ಕೈನಲ್ಲಿ ಮೊಬೈಲ್, ಸಿಗರೇಟ್..! ಪೊಲೀಸರ ದಾಳಿ ವೇಳೆ ಕಳ್ಳಾಟ ಬಯಲು
ರಾಮನಗರ: ರಾಮನಗರ ಜಿಲ್ಲಾ ಕಾರಾಗೃಹದಲ್ಲಿ 2 ಮೊಬೈಲ್‌, ಸಿಮ್, ಮೊಬೈಲ್ ಚಾರ್ಜರ್‌ಗಳು ಪತ್ತೆಯಾಗಿವೆ. ಕಾರಾಗೃಹದಲ್ಲಿ ಅಕ್ರಮಗಳು ನಡೆಯುತ್ತಿವೆ ಎಂದು ಪದೇ ಪದೇ ದೂರುಗಳು ಬರುತ್ತಿದ್ದ ಹಿನ್ನೆಲೆಯಲ್ಲಿ, ಸೋಮವಾರ ಬೆಳ್ಳಂಬೆಳಗ್ಗೆ ಪೊಲೀಸರ ದಾಳಿ ನಡೆಸಿ ಪರಿಶೀಲನೆ ನಡೆಸಿದರು.
ರಾಮನಗರ ಡಿವೈಎಸ್ಪಿ ಮೋಹನ್ ಕುಮಾರ್ ನೇತೃತ್ವದಲ್ಲಿ ದಾಳಿ ನಡೆಯಿತು. ಕಾರಾಗೃಹದಲ್ಲಿನ ಖೈದಿಗಳ ಕೊಠಡಿಗಳನ್ನು ಪೊಲೀಸರು ಶೋಧಿಸಿದರು. ಈ ವೇಳೆ ಜೈಲಿನಲ್ಲಿದ್ದ ಆರೋಪಿಗಳಾದ ಕೇಬಲ್‌ ಕಿಟ್ಟಿ, ಮುಜ್ಜಾಮಿಲ್ ಬಳಸುತ್ತಿದ್ದ ಮೊಬೈಲ್‌ಗಳು ಪತ್ತೆಯಾದವು.

ತಿಹಾರ್‌ ಜೈಲು ಒಳಗೆ ಹೇಗಿದೆ ನೋಡ್ಬೇಕಾ, ಹಾಗಾದ್ರೆ 2 ದಿನ ಇಲ್ಲಿ ಕಳೆಯಿರಿ
ಸಿಗರೇಟ್ ಹಾಗೂ 7 ಸಾವಿರ ರೂ ಹಣ ಕೂಡಾ ದಾಳಿ ವೇಳೆ ಪತ್ತೆಯಾಗಿದೆ. ಕಳೆದ ಮೂರು ತಿಂಗಳಲ್ಲಿ ಎರಡನೇ ಬಾರಿ ಕಾರಾಗೃಹದ ಮೇಲೆ ದಾಳಿ ನಡೆದಿದೆ.

ಜೈಲ್‌ಗೆ ಮೊಬೈಲ್ ಜಾಮರ್: ಬಗೆಹರಿಯದ ಸಿಗ್ನಲ್ ಸಮಸ್ಯೆ
ಕಳೆದ ಬಾರಿ ದಾಳಿ ಮಾಡಿದ ಸಂದರ್ಭದಲ್ಲಿ ಖೈದಿಗಳ ಬಳಿ ಗಾಂಜಾ, ಮೊಬೈಲ್ ಸೇರಿದಂತೆ ಸಿಗರೇಟ್‌ಗಳೂ ಪತ್ತೆಯಾಗಿದ್ದವು. ಇಷ್ಟಾದ್ರೂ ಕೂಡಾ ಸೋಮವಾರ ನಡೆದ ದಾಳಿಯಲ್ಲೂ ಮೊಬೈಲ್ ಪತ್ತೆಯಾಗಿವೆ. ರಾಮನಗರ ಕಾರಾಗೃಹದ ಕಾರ್ಯವೈಖರಿ ವಿಚಾರವಾಗಿ ಈ ರೀತಿ ದೂರುಗಳು ಪದೇ ಪದೇ ಕೇಳಿ ಬರುತ್ತಿವೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ