ಆ್ಯಪ್ನಗರ

ಎಸ್ಸೆಸ್ಸೆಲ್ಸಿ ಪರೀಕ್ಷೆಗೆ ಈಗಿನಿಂದಲೇ ಸಿದ್ದತೆ ನಡೆಸಿ

ಪ್ರತಿಯೊಬ್ಬ ವಿದ್ಯಾರ್ಥಿನಿಯರಿಗೆ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಸವಾಲಾಗಿದ್ದು, ನಿರಂತರ ಪರಿಶ್ರಮದಿಂದ ಪರೀಕ್ಷೆಯನ್ನು ಸಮರ್ಥವಾಗಿ ಎದುರಿಸಬೇಕು ಎಂದು ಉಪ ಪ್ರಿನ್ಸಿಪಾಲ್‌ ವೀರಭದ್ರಯ್ಯ ಹೇಳಿದರು.

Vijaya Karnataka 14 Oct 2019, 3:45 pm
ಚನ್ನಪಟ್ಟಣ: ಪ್ರತಿಯೊಬ್ಬ ವಿದ್ಯಾರ್ಥಿನಿಯರಿಗೆ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಸವಾಲಾಗಿದ್ದು, ನಿರಂತರ ಪರಿಶ್ರಮದಿಂದ ಪರೀಕ್ಷೆಯನ್ನು ಸಮರ್ಥವಾಗಿ ಎದುರಿಸಬೇಕು ಎಂದು ಉಪ ಪ್ರಿನ್ಸಿಪಾಲ್‌ ವೀರಭದ್ರಯ್ಯ ಹೇಳಿದರು.
Vijaya Karnataka Web prepare for the essencecell test right away
ಎಸ್ಸೆಸ್ಸೆಲ್ಸಿ ಪರೀಕ್ಷೆಗೆ ಈಗಿನಿಂದಲೇ ಸಿದ್ದತೆ ನಡೆಸಿ

ಪಟ್ಟಣದ ಬಾಲಕಿಯರ ಸರಕಾರಿ ಪ್ರೌಢಶಾಲೆ ಹತ್ತನೇ ತರಗತಿ ವಿದ್ಯಾರ್ಥಿ ನಿಯರಿಗೆ ಆದಿತ್ಯ ಬಿರ್ಲಾ ಹಾಗೂ ಜನ ಕಲ್ಯಾಣ ಟ್ರಸ್ಟ್‌ ವತಿಯಿಂದ ಜ್ಞಾನಾ ರ್ಜನ್‌ ಶೈಕ್ಷಣಿಕ ಯೋಜನೆಯಲ್ಲಿಪುಸ್ತಕಗಳನ್ನು ವಿತರಿಸಿ ಮಾತನಾಡಿದರು.
ಸಾಧನೆ ಮುಂದುವರಿಯಲಿ: ಜಿಲ್ಲೆಯಲ್ಲಿನಮ್ಮ ಸರಕಾರಿ ಬಾಲಕಿಯರ ಪ್ರೌಢಶಾಲೆ ಪ್ರತಿಭಾರಿಯ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿಉತ್ತಮ ಫಲಿ ತಾಂಶ ನೀಡುತ್ತಿರುವುದು ಆರೋಗ್ಯಕರ ಬೆಳವಣಿಗೆಯಾಗಿದ್ದು, ಎಲ್ಲಿನಿರಂತರ ಅಭ್ಯಾಸದ ಜತೆಗೆ ಪರಿಶ್ರಮ ಇರುತ್ತದೆಯೋ ಅಲ್ಲಿಯಶಸ್ಸು ಇರುತ್ತದೆ ಎಂದು ತಿಳಿಸಿದರು.
ಸರಕಾರಿ ಶಾಲೆಯ ವಿದ್ಯಾರ್ಥಿನಿಯರ ಭವಿಷ್ಯವನ್ನು ಉಜ್ವಲಗೊಳಿಸಲು, ಆದಿತ್ಯ ಬಿರ್ಲಾ ಹಾಗೂ ಜನಕಲ್ಯಾಣ ಟ್ರಸ್ಟ್‌, ಜ್ಞಾನಾರ್ಜನ್‌ ಶೈಕ್ಷಣಿಕ ಯೋಜನೆವತಿಯಿಂದ ವಿದ್ಯಾರ್ಥಿನಿ ಯರಿಗೆ ಪರೀಕ್ಷೆಯನ್ನು ಯಾವ ರೀತಿ ಎದುರಿಸಬೇಕು ಎಂಬುದರ ಬಗ್ಗೆ ಧೈರ್ಯ ತುಂಬುವ ಜತೆಗೆ, ವಿಶೇಷ ತರಗತಿಗಳನ್ನು ತೆಗೆದು ತಯಾರು ಮಾಡುತ್ತಿರುವುದು ಆರೋಗ್ಯಕರ ಬೆಳವಣಿಗೆಯಾಗಿದೆ ಎಂದು ಅವರು ಹೇಳಿದರು.
ಮೊಬೈಲ್‌ ಗೀಳು ಬೇಡ: ಪರೀಕ್ಷೆ ಕೆಲವೇ ತಿಂಗಳುಗಳಿದ್ದು, ಕಾಲ ವ್ಯರ್ಥ ಮಾಡದೆ ಓದಿನತ್ತ ಗಮನ ಹರಿಸಬೇಕು, ಮೊಬೈಲ್‌, ಟವಿಯಿಂದ ದೂರವಿರ ಬೇಕು ಪರೀಕ್ಷೆಯಲ್ಲಿಸಾಧನೆ ಮಾಡಬೇಕು ಎಂದು ತಿಳಿಸಿದರು.
ಮಾನಸಿಕ ಹತೋಟಿ ಸಾಧಿಸಿ: ಅಸಿರ ಚಿತ್ರಕಲಾ ಇನ್‌ಸ್ಟಿಟ್ಯೂಟ್‌ ಸಂಸ್ಥಾಪಕ ಕಾರ್ಯದರ್ಶಿ ರಮೇಶ್‌ಅಕ್ಕೂರ್‌ ಮಾತನಾಡಿ, ವಿದ್ಯಾರ್ಥಿಗಳು ಮನಸ್ಸನ್ನು ಹತೋಟಿಯಲ್ಲಿಟ್ಟುಕೊಳ್ಳಬೇಕು, ಬೇರೆ ಕಡೆ ಮನಸ್ಸನ್ನು ಹರಿಯಲು ಬಿಡದೆ ವಿದ್ಯಾಬ್ಯಾಸದಲ್ಲಿಹೆಚ್ಚು ಗಮನ ನೀಡಬೇಕು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಜ್ಞಾನಾರ್ಜನೆಯ ಉಪನ್ಯಾಸಕರಾದ ಶ್ರೀನಿವಾಸ್‌, ರಾಜೇಶ್‌, ಕಾವ್ಯಶ್ರೀ ಹಾಗೂ ಹಲವಾರು ಮುಖಂಡರು ಹಾಜರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ