ಆ್ಯಪ್ನಗರ

ಪಲ್ಸ್‌ ಪೋಲಿಯೋ ಹಾಕಿಸಿ ಮಕ್ಕಳನ್ನು ಅಂಗವೈಕಲ್ಯದಿಂದ ಪಾರುಮಾಡಿ

ಐದು ವರ್ಷದೊಳಗಿನ ಎಲ್ಲಾ ಮಕ್ಕಳಿಗೆ ಪೋಲಿಯೋ ಹನಿ ಹಾಕಿಸುವ ಮೂಲಕ ಆರೋಗ್ಯವಂತ ರಾಷ್ಟ್ರ ನಿರ್ಮಾಣಕ್ಕೆ ಕೈಜೋಡಿಸೋಣ ಎಂದು ಸಾಹಿತಿ ವಿಜಯ್‌ ರಾಂಪುರ ತಿಳಿಸಿದರು.

Vijaya Karnataka 10 Mar 2019, 5:00 am
ಚನ್ನಪಟ್ಟಣ: ಐದು ವರ್ಷದೊಳಗಿನ ಎಲ್ಲಾ ಮಕ್ಕಳಿಗೆ ಪೋಲಿಯೋ ಹನಿ ಹಾಕಿಸುವ ಮೂಲಕ ಆರೋಗ್ಯವಂತ ರಾಷ್ಟ್ರ ನಿರ್ಮಾಣಕ್ಕೆ ಕೈಜೋಡಿಸೋಣ ಎಂದು ಸಾಹಿತಿ ವಿಜಯ್‌ ರಾಂಪುರ ತಿಳಿಸಿದರು.
Vijaya Karnataka Web putting pulse polio and disabling children from disabilities
ಪಲ್ಸ್‌ ಪೋಲಿಯೋ ಹಾಕಿಸಿ ಮಕ್ಕಳನ್ನು ಅಂಗವೈಕಲ್ಯದಿಂದ ಪಾರುಮಾಡಿ


ತಾಲೂಕಿನ ಯಲಚಿಪಾಳ್ಯ ಗ್ರಾಮದಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯ ಸಂಯುಕ್ತ ಅಶ್ರಯದಲ್ಲಿ ಹಮ್ಮಿಕೊಂಡಿದ್ದ ರಾಷ್ಟ್ರೀಯ ಪಲ್ಸ್‌ ಪೋಲಿಯೋ ಜಾಗೃತಿ ಜಾಥಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ, ಮಕ್ಕಳ ಭವಿಷ್ಯದ ಹಿತದೃಷ್ಟಿಯಿಂದ ಪೋಲಿಯೋ ಹನಿಯನ್ನು ತಪ್ಪದೇ ಹಾಕಿಸುವ ಮೂಲಕ ಮಕ್ಕಳನ್ನು ಅಂಗವೈಕಲ್ಯದಿಂದ ಪಾರುಮಾಡಿ. ಇದರಿಂದ ಪೋಲಿಯೋ ವೈರಾಣುವಿನ ಹರಡುವಿಕೆಯನ್ನು ತಡೆಗಟ್ಟಿ ಪೋಲಿಯೋ ನಿರ್ಮೂಲನೆ ಮಾಡಲು ಸಾಧ್ಯ. ಪೋಲಿಯೋ ನಿರ್ಮೂಲನೆಯಾಗುವವರೆಗೂ ಯಾವ ಮಗುವು ಸುರಕ್ಷಿತವಲ್ಲ ಎಂಬ ಅಂಶವನ್ನು ಪೋಷಕರು ಮನಗಾಣಬೇಕು ಎಂದರು.

ಮುಖ್ಯ ಶಿಕ್ಷ ಕ ಶಶಿಕುಮಾರ್‌ ಮಾತನಾಡಿ, ಪೋಷಕರು ಯಾವುದೇ ಭಯವಿಲ್ಲದೆಯೇ ಮಕ್ಕಳಿಗೆ ಪೋಲಿಯೋ ಲಸಿಕೆ ಹಾಕಿಸಬೇಕು ಎಂದು ತಿಳಿಸಿದರು. ಈ ಸಂದರ್ಭದಲ್ಲಿ ಶಿಕ್ಷ ಕ ಮುತ್ತಯ್ಯ, ಆರೋಗ್ಯ ಸಹಾಯಕಿ ಕೆ ವಿ ಅನುಸೂಯಮ್ಮ, ಆಶಾ ಕಾರ್ಯಕರ್ತೆ ಪದ್ಮ, ಅಂಗನವಾಡಿ ಸಹಾಯಕಿ ಚಂದ್ರಕಲಾ ಹಾಗೂ ಗ್ರಾಮಸ್ಥರು ಭಾಗವಹಿಸಿದ್ದರು. ಗ್ರಾಮದ ಬೀದಿ-ಬೀದಿಗಳಲ್ಲಿ ಸಂಚರಿಸಿ ಪಲ್ಸ್‌ ಪೋಲಿಯೋ ಹನಿ ಹಾಕಿಸುವಂತೆ ಘೋಷಣೆ ಕೂಗುವ ಮೂಲಕ ಜನರಲ್ಲಿ ಅರಿವನ್ನು ಮೂಡಿಸಲಾಯಿತು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ