ಆ್ಯಪ್ನಗರ

ಖರೀದಿ ಕೇಂದ್ರಗಳಿಗೆ ನುಸುಳುತ್ತಿದೆ ತಮಿಳುನಾಡು ರಾಗಿ! ರಾಜ್ಯದ ರೈತರಿಗೆ ತೊಂದರೆ

ಬೆಂಬಲ ಬೆಲೆ ಯೋಜನೆಯಡಿ ಖರೀದಿ ಕೇಂದ್ರಗಳ ಬಳಿ ರೈತರು ಹಗಲಿರುಳು ಕಾದು ರಾಗಿ ಮಾರಾಟದಲ್ಲಿ ನಿತರಾಗಿದ್ದಾರೆ. ಇದರ ನಡುವೆ ತಮಿಳುನಾಡಿನಲ್ಲಿ ಬೆಳೆದ ರಾಗಿಯೂ ಈ ಕೇಂದ್ರಗಳಿಗೆ ಪ್ರವೇಶಿಸುತ್ತಿರುವುದು ಸ್ಥಳೀಯ ರೈತರ ನಿದ್ದೆಗೆಡಿಸಿದೆ.

Edited byಬಾನುಪ್ರಸಾದ ಕೆ.ಎನ್\u200c. | Vijaya Karnataka Web 27 May 2022, 11:40 pm

ಹೈಲೈಟ್ಸ್‌:

  • ಹಗಲಿರುಳು ಕಾದು ಬೆಂಬಲಬೆಲೆ ಯೋಜನೆಯಡಿ ಮಾರುತ್ತಿರುವ ರೈತರಿಗೆ ತೊಂದರೆ
  • ವಾಮ ಮಾರ್ಗದಲ್ಲಿ ಪ್ರವೇಶ
  • ಖರೀದಿ ಕೇಂದ್ರಗಳಿಗೆ ನುಸುಳುತ್ತಿದೆ ತಮಿಳುನಾಡು ರಾಗಿ!
ಹೈಲೈಟ್ಸ್‌ ಮಾತ್ರವೇ ಓದಲು ಆ್ಯಪ್‌ ಡೌನ್‌ಲೋಡ್‌ ಮಾಡಿ
Vijaya Karnataka Web ragi
ಅಂಜುಕುಮಾರ್‌, ಹಾರೋಹಳ್ಳಿ
ಬೆಂಬಲ ಬೆಲೆ ಯೋಜನೆಯಡಿ ಖರೀದಿ ಕೇಂದ್ರಗಳ ಬಳಿ ರೈತರು ಹಗಲಿರುಳು ಕಾದು ರಾಗಿ ಮಾರಾಟದಲ್ಲಿ ನಿತರಾಗಿದ್ದಾರೆ. ಇದರ ನಡುವೆ ತಮಿಳುನಾಡಿನಲ್ಲಿ ಬೆಳೆದ ರಾಗಿಯೂ ಈ ಕೇಂದ್ರಗಳಿಗೆ ಪ್ರವೇಶಿಸುತ್ತಿರುವುದು ಸ್ಥಳೀಯ ರೈತರ ನಿದ್ದೆಗೆಡಿಸಿದೆ.
ಬೆಂಬಲ ಬೆಲೆ ರಾಗಿಗೆ ಉತ್ತಮ ಬೆಲೆ ದೊರಕುತ್ತಿರುವ ಹಿನ್ನೆಲೆಯಲ್ಲಿ ರೈತರು ಮಾರಾಟಕ್ಕೆ ಮುಂದಾಗಿದ್ದಾರೆ. ಅನೇಕ ಸಮಸ್ಯೆಗಳ ನಡುವೆಯೂ ಮಾರಾಟಕ್ಕೆ ಮುಂದಾಗಿರುವ ರೈತರಿಗೆ ನೆರೆಯ ತಮಿಳುನಾಡಿನಿಂದ ರಾಗಿ ಖರೀದಿ ಕೇಂದ್ರಕ್ಕೆ ನುಸುಳುತ್ತಿರುವುದು ತಲೆನೋವಾಗಿ ಪರಿಣಮಿಸಿದೆ.

ತಮಿಳುನಾಡು ರಾಜ್ಯದಲ್ಲಿ ರಾಗಿ ಬೆಲೆ ಕಡಿಮೆ. ಈ ಅವಕಾಶವನ್ನು ಉಪಯೋಗಿಸಿಕೊಳ್ಳುತ್ತಿರುವ ದಲ್ಲಾಳಿಗಳು, ತಮಿಳುನಾಡಿನಲ್ಲಿ ರಾಗಿ ಖರೀದಿ ಮಾಡಿ ವಾಮಮಾರ್ಗದಲ್ಲಿ ರಾಜ್ಯ ತಲುಪಲಿದ್ದು, ಸ್ಥಳೀಯ ರೈತರಿಂದ ಪಹಣಿ ಪಡೆದು, ರಾಗಿ ಖರೀದಿ ಕೇಂದ್ರಗಳಲ್ಲಿ ಮಾರಾಟ ಮಾಡುತ್ತಿದ್ದಾರೆ ಎಂಬ ಆರೋಪ ವ್ಯಕ್ತವಾಗಿದೆ.

ರಾಗಿ ಖರೀದಿಗೆ ಮರು ಅವಕಾಶ! ಏ.25ರಿಂದ ನೋಂದಣಿ ಪ್ರಕ್ರಿಯೆ ಮತ್ತೆ ಶುರು!

ಅವ್ಯವಸ್ಥೆಯ ಆಗರ:
ಕನಕಪುರ ತಾಲೂಕಿನ ಹಾರೋಹಳ್ಳಿಯ ಮೇಡಮಾರನಹಳ್ಳಿ ಬಳಿ ಇರುವ ರಾಗಿ ಖರೀದಿ ಕೇಂದ್ರವು ಅವ್ಯವಸ್ಥೆಯ ಆಗರವಾಗಿದೆ. ಬಿಸಿಲು, ಮಳೆ, ಗಾಳಿ ಎನ್ನದೇ ಕಿಲೋಮೀಟರ್‌ ಗಟ್ಟಲೆ ಕ್ಯೂನಲ್ಲಿ ನಿಂತು ಮಾರಾಟ ಮಾಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಜತೆಗೆ ಖರೀದಿ ಕೇಂದ್ರದಲ್ಲಿಕುಡಿಯಲು ನೀರು ಕುಳಿತುಕೊಳ್ಳಲು ಆಸನ ಸೇರಿದಂತೆ ಮೂಲ ಸೌಲಭ್ಯ ವ್ಯವಸ್ಥೆ ಇಲ್ಲವಾಗಿದೆ. ಊಟ ತಿಂಡಿ ಸೇರಿದಂತೆ ಕುಡಿಯುವ ನೀರಿಗೂ ಪರದಾಡುವಂತಾಗಿದೆ. ಮಳೆಯಿಂದ ರಸ್ತೆಯೂ ಕೆಸರು ಗದ್ದೆಯಾಗಿದೆ. ರೈತರ ಸಂಕಷ್ಟ ಕೇಳುವವರು ಇಲ್ಲವಾಗಿದ್ದಾರೆ.

ಹಾರೋಹಳ್ಳಿಯ ಅರಗಿ ಖರೀದಿ ಕೇಂದ್ರಕ್ಕೆ ಸುಮಾರು 3000ಕ್ವಿಂಟಾಲ್‌ ರಾಗಿ ಅವಕವಾಗಿದೆ. ರಾತ್ರಿ 1 ಗಂಟೆಯಿಂದಲೂ ರೈತರು ಕ್ಯೂನಲ್ಲಿ ನಿಂತು, ರಾಗಿಯನ್ನು ತಲುಪಿಸುತ್ತಿದ್ದಾರೆ. ಕಿ.ಮೀಗಟ್ಟಲೆ ಟ್ರ್ಯಾಕ್ಟರ್‌ಗಳು ನಿಂತಿರುವುದರಿಂದ ಬಿಡದಿ ಹಾಗೂ ಹಾರೋಹಳ್ಳಿ ರಸ್ತೆಯಲ್ಲಿ ಸಂಚಾರವೂ ಅಸ್ತವ್ಯಸ್ತಗೊಂಡಿದೆ. ಇದರ ನಡುವೆ ಹಮಾಲಿಗಳ ಕೊರತೆ ಎದುರಾಗಿದೆ.

ಹಣವಿಲ್ಲದೆ ಕೆಲಸವಾಗದು :
ಹರಸಾಹಸಪಟ್ಟು ಖರೀದಿ ಕೇಂದ್ರಕ್ಕೆ ರಾಗಿ ತರುವ ರೈತರಿಗೆ ಸಿಬ್ಬಂದಿಗಳು ಮತ್ತು ಅಕಾರಿಗಳು ಮನಸೋ ಇಚ್ಛೆ ತೊಂದರೆ ನೀಡುತ್ತಿದ್ದಾರೆಂಬ ಆರೋಪ ವ್ಯಕ್ತವಾಗಿದೆ. ರಾಗಿಯ ಗುಣಮಟ್ಟ ಪರೀಕ್ಷೆ ಹಂತದಲ್ಲಿ ಹಣ ನೀಡಬೇಕಾದ ದುಸ್ಥಿತಿ ಎದುರಾಗಿದೆ. ಹಣ ಕೊಟ್ಟರೆ ಇಲ್ಲಿ ಕೆಲಸಗಳು ಸರಾಗವಾಗಿ ಆಗಲಿವೆ ಎಂಬ ಆರೋಪ ವ್ಯಕ್ತವಾಗಿದೆ. ಇನ್ನಾದರೂ ಸಂಬಂಧಪಟ್ಟ ಅಧಿಕಾರಿಗಳು ಈ ಅವ್ಯವಸ್ಥೆಗಳನ್ನು ಸರಿಪಡಿಸಬೇಕು ಎಂಬ ಒತ್ತಾಯ ರೈತರಿಂದ ಕೇಳಿಬಂದಿದೆ.

ಬೇಸಿಗೆ ಬಿಸಿಲಲ್ಲೂ ಬೇರು ಬಿಡಲು ಸಿದ್ಧವಾದ ರಾಗಿ..! ಪೈರಿಗೆ ಕೃಷಿ ಇಲಾಖೆಯಿಂದ ನೀರಾವರಿ ಸಿಂಚನ..!

ರಾಗಿ ಖರೀದಿ ಕೇಂದ್ರಗಳಲ್ಲಿ ಹಣವಿಲ್ಲದೆ ಯಾವುದೇ ಕೆಲಸಗಳು ಆಗುತ್ತಿಲ್ಲ. ದಲ್ಲಾಳಿಗಳು ತರುವ ರಾಗಿಯನ್ನು ಅಧಿಕಾರಿಗಳು ಪರೀಕ್ಷಿಸುತ್ತಿಲ್ಲ. ಆದರೆ ಹಣ ಕೊಡದ ರೈತರಿಗೆ ರಾಗಿ ಗುಣಮಟ್ಟದ್ದಾಗಿಲ್ಲಎಂಬ ಕಾರಣಗಳನ್ನು ಹೇಳಿ ಕಳುಹಿಸುವ ಕೆಲಸ ಮಾಡಲಾಗುತ್ತಿದೆ. ತಮಿಳುನಾಡಿನ ರಾಗಿಯೂ ಖರೀದಿ ಕೇಂದ್ರಗಳಲ್ಲಿ ಮಾರಾಟವಾಗುತ್ತಿದೆ. ಈ ಕೂಡಲೇ ಸಂಬಂಧಪಟ್ಟವರು ಇತ್ತ ಗಮನಹರಿಸಬೇಕು.
-ನಾಗರಾಜು, ರೈತ, ಕನಕಪುರ ತಾಲೂಕು.

ರಾಗಿ ಖರೀದಿ ಕೇಂದ್ರಗಳು ಅವ್ಯವಸ್ಥೆಗಳ ಆಗರವಾಗಿದೆ. ರೈತರಿಗೆ ಮೂಲ ವ್ಯವಸ್ಥೆ ಒದಗಿಸುವ ಕೆಲಸವನ್ನು ಅಧಿಕಾರಿಗಳು ಮಾಡಿಲ್ಲ. ರಾಗಿ ಮಾರಾಟ ಮಾಡಲು ರಾತ್ರಿ ಪೂರ್ತಿ ಕಾಯಬೇಕಾದ ಅನಿವಾರ್ಯತೆ ಎದುರಾಗಿದೆ.
-ಪಡುವಣಗೆರೆ ಸಿದ್ದರಾಜು, ಮುಖಂಡ.
ಲೇಖಕರ ಬಗ್ಗೆ
ಬಾನುಪ್ರಸಾದ ಕೆ.ಎನ್\u200c.
ವಿಜಯ ಕರ್ನಾಟಕ ಡಿಜಿಟಲ್\u200c ಪತ್ರಕರ್ತ. ವಿಜ್ಞಾನ ತಂತ್ರಜ್ಞಾನ, ರಾಷ್ಟ್ರೀಯ- ಅಂತಾರಾಷ್ಟ್ರೀಯ, ಸಾಹಿತ್ಯ-ಕಲೆ, ಶಿಕ್ಷಣ, ಆಸಕ್ತಿಯ ವಿಷಯಗಳು... ಇನ್ನಷ್ಟು ಓದಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ