ಆ್ಯಪ್ನಗರ

ಕೈಗಾರಿಕಾ ಕೇಂದ್ರವಾಗಲಿದೆ ರಾಮನಗರ: ಡಿಸಿಎಂ ಅಶ್ವತ್ಥ ನಾರಾಯಣ ಭರವಸೆ

ಹಳೆ ಮೈಸೂರು ಭಾಗದ ಯುವಜನತೆಗೆ ಉದ್ಯೋಗ ಭದ್ರತೆ ಹಾಗೂ ರೈತರಿಗೆ ಕೃಷಿ ಭದ್ರತೆ ಒದಗಿಸುವ ದೃಷ್ಟಿಯಿಂದ ಕೆಂಪೇಗೌಡರ ಊರನ್ನು ಕೈಗಾರಿಕೆ ಕೇಂದ್ರವಾಗಿ ಅಭಿವೃದ್ಧಿಪಡಿಸಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಾ. ಅಶ್ವತ್ಥ ನಾರಾಯಣ ಭರವಸೆ ನೀಡಿದರು.

Vijaya Karnataka Web 26 Nov 2020, 8:59 pm
ಮಾಗಡಿ: ಹಳೆ ಮೈಸೂರು ಭಾಗದ ಯುವಜನತೆಗೆ ಉದ್ಯೋಗ ಭದ್ರತೆ ಹಾಗೂ ರೈತರಿಗೆ ಕೃಷಿ ಭದ್ರತೆ ಒದಗಿಸುವ ದೃಷ್ಟಿಯಿಂದ ಕೆಂಪೇಗೌಡರ ಊರನ್ನು ಕೈಗಾರಿಕೆ ಕೇಂದ್ರವಾಗಿ ಅಭಿವೃದ್ಧಿಪಡಿಸಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಾ. ಅಶ್ವತ್ಥ ನಾರಾಯಣ ಭರವಸೆ ನೀಡಿದರು.
Vijaya Karnataka Web CN Ashwath Narayan karnataka
Deputy chief minister CN Ashwath Narayan


ಗುರುವಾರ ಜಿಲ್ಲಾ ಪ್ರವಾಸ ಕೈಗೊಂಡಿದ್ದ ಅವರು ತಾಲೂಕಿನಲ್ಲಿ ವಿವಿಧ ಕಾಮಗಾರಿಗಗಳಿಗೆ ಶಂಕುಸ್ಥಾಪನೆ ನೆರವೇರಿಸಿದರು ನಂತರ ಸೋಲೂರಿನ ಪ್ರವಾಸಿ ಮಂದಿರದಲ್ಲಿ ಅಧಿಕಾರಿಗಳ ಸಭೆ ನಡೆಸಿ ಶ್ರೀರಂಗ ಏತ ನೀರಾವರಿ ಯೋಜನೆಯ ಪ್ರಗತಿ ಪರಿಶೀಲನೆ ನಡೆಸಿದರು.

ನೀರು ಹರಿಸಿಯೇ ತೀರುತ್ತೇವೆ:
ನಮ್ಮ ಸರಕಾರ ಘೋಷಿಸಿರುವ ಎಲ್ಲಯೋಜನೆಗಳನ್ನು ಕಾರ್ಯರೂಪಕ್ಕೆ ತರಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇವೆ. ಈ ಭಾಗಕ್ಕೆ ಹೇಮಾವತಿ ನೀರು ತರುವ ಪ್ರಯತ್ನ ಭರದಿಂದ ಸಾಗಿದೆ. ರೈತರ ಬದುಕನ್ನು ಹಸನಾಗಿಸಲು ಹೇಮಾವತಿ ಕಾಮಗಾರಿಗೆ ಹೆಚ್ಚುವರಿಯಾಗಿ 175 ಕೋಟಿ ರೂ ಹಣ ನೀಡಿದ್ದೇವೆ. ವೈ.ಜಿ ಗುಡ್ಡ ಜಲಾಶಯದ ನೀರು ಪೋಲಾಗದಂತೆ ತಡೆಯುವ ಯೋಜನೆ ರೂಪಿಸಲು ಚರ್ಚೆ ಮಾಡಿದ್ದೇವೆ ಎಂದರು.

ಮಾಗಡಿಯಲ್ಲಿ ಡಿಸಿಎಂ ಅಶ್ವತ್ಥನಾರಾಯಣ ರೌಂಡ್ಸ್;‌ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ, ಅಡಿಗಲ್ಲು

ಸಂತರ ಹುಟ್ಟೂರು ಅಭಿವೃದ್ಧಿಯಾಗಲಿದೆ :
ಬಾಲಗಂಗಾಧರ ನಾಥ ಸ್ವಾಮೀಜಿಗಳ ಹುಟ್ಟೂರಾದ ಬಾನಂದೂರು, ಶಿವಕುಮಾರಸ್ವಾಮಿಗಳ ಹುಟ್ಟೂರು ವೀರಪುರ ಹಾಗೂ ನಾಡಪ್ರಭು ಕೆಂಪೇಗೌಡರ ಸ್ಮಾರಕ ದೊರೆತಿರುವ ಕೆಂಪಾಪುರ ಗ್ರಾಮದ ಅಭಿವೃದ್ಧಿಗೂ ಈಗಾಗಲೆ ನೀಲನಕಾಶೆ ಸಿದ್ಧವಾಗಿದೆ ಹಣವನ್ನು ಸರಕಾರ ಮೀಸಲಿಟ್ಟಿದೆ ಇನ್ನೇನು ಅತಿಶೀಘ್ರವಾಗಿ ಕಾಮಗಾರಿ ಆರಂಭಿಸಲಾಗುತ್ತದೆ ಎಂದರು.

ಸಂಸ್ಕೃತ ವಿಶ್ವವಿದ್ಯಾಲಯ ಕಾಮಗಾರಿ ಆರಂಭಕ್ಕೆ ಕ್ರಮ ಕೈಗೊಂಡಿದ್ದೇವೆ. ಡಿಸೆಂಬರ್‌ ನಾಲ್ಕರಂದು ಇದೇ ವಿಚಾರವಾಗಿ ಸಂಸ್ಕೃತ ವಿಶ್ವವಿದ್ಯಾಲಯದಲ್ಲಿ ಸಭೆ ಕರೆದಿದ್ದೇವೆ. ಇನ್ನು ಜಿಲ್ಲೆಯಲ್ಲಿರುವ ಆರೋಗ್ಯ ಕೇಂದ್ರಗಳನ್ನು ಮೇಲ್ದರ್ಜೆಗೇರಿಸುವ ಚಿಂತನೆ ಇದೆ. ಮಾಗಡಿ ತಾಲೂಕಿನಲ್ಲಿ ತಾಯಿ-ಮಗು ಆಸ್ಪತ್ರೆ ನಿರ್ಮಿಸಲು ಬೇಡಿಕೆ ಇರುವುದರಿಂದ ಚರ್ಚಿಸಿ ಆನಂತರ ತೀರ್ಮಾನ ಕೈಗೊಳ್ಳುವುದಾಗಿ ತಿಳಿಸಿದರು.

ರಾಮನಗರದಲ್ಲಿ ಬೀದಿಬದಿ ವ್ಯಾಪಾರಿಗಳಿಗೆ 10 ಸಾವಿರ ರೂ. ಆರ್ಥಿಕ ನೆರವು

ಕೈಗಾರೀಕರಣಕ್ಕೆ ಒತ್ತು:
ಮಾಗಡಿ ಭಾಗದಲ್ಲಿ ಕೈಗಾರಿಕೆಗಳನ್ನು ಸ್ಥಾಪಿಸಬೇಕು ಎಂದು ಇಲ್ಲಿನ ಶಾಸಕ ಎ.ಮಂಜುನಾಥ್‌ ಶ್ರಮಿಸುತ್ತಿದ್ದಾರೆ. ಸರಕಾರ ಮುಂದೆ ಮನವಿಯನ್ನೂ ನೀಡಿದ್ದಾರೆ. ಆದ್ದರಿಂದ ಕೈಗಾರಿಕೆಗಳನ್ನು ತಂದು ಗ್ರಾಮೀಣ ಜನರಿಗೆ ಉದ್ಯೋಗ ಕೊಡಿಸುವ ಕೆಲಸ ಮಾಡೋಣ ಎಂದರು.

ಏನೆಲ್ಲಾ ಶಂಕುಸ್ಥಾಪನೆ?:
ಮಾಗಡಿ ತಾಲೂಕಿನ ಮಾಡಬಾಳ್‌ ಹೋಬಳಿಯಲ್ಲಿ ಸರಕಾರಿ ಕೈಗಾರಿಕಾ ಕಾಲೇಜು ಕಟ್ಟಡಕ್ಕೆ ಶಂಕುಸ್ಥಾಪನೆ ನೆರವೇರಿಸಿದರು, ಜೇನುಕಲ್ಲು ಪಾಳ್ಯದಲ್ಲಿ ಅಕ್ರಮ-ಸಕ್ರಮ ಯೋಜನೆಯಡಿ ಅರ್ಜಿ ಸಲ್ಲಿಸಿರುವ ಕಾಡಂಚಿನ ಫಲಾನುಭವಿಗಳಿಗೆ ಹಕ್ಕುಪತ್ರ ವಿತರಣೆ ಮಾಡಲಾಯಿತು. ವೈ.ಜಿ ಗುಡ್ಡ ಜಲಾಶಯ ವೀಕ್ಷಣೆ ಮಾಡಿ ನೀರು ಪೋಲಾಗದಂತೆ ಯೋಜನೆ ರೂಪಿಸಲು ಕಾರ್ಯರೂಪಿಸಲಾಯಿತು. ಹುಲಿಕಟ್ಟೆಯಲ್ಲಿ ನೂತನ ಪಶು ಆಸ್ಪತ್ರೆ ಉದ್ಘಾಟನೆ, ತಿಪ್ಪಸಂದ್ರ ಕುದೂರು ಸಮುದಾಯ ಆರೋಗ್ಯ ಕೇಂದ್ರದ ಉದ್ಘಾಟನೆ ಮತ್ತು ಮರೂರು ಪ್ರಾಥಮಿಕ ಆರೋಗ್ಯ ಕೇಂದ್ರದ ಉದ್ಘಾಟನೆ. ಹಾಗೂ ಡಿಸಿಎಂ ಹುಟ್ಟೂರಿನ ಕೂಗಳತೆ ದೂರದ ಹುಚ್ಚನ ಬಾವಿ, ಚಿಕ್ಕಕಲ್ಯ, ಸಂಕೀಘಟ್ಟ, ನಾರಾಯಣಪುರ, ಆಡಿನಿಂಗನ ಪಾಳ್ಯ ಮುಳುಕಟ್ಟಮ್ಮನ ಪಾಳ್ಯ, ತಾವರೆಕೆರೆ ರಸ್ತೆ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಿದರು.

ಇದೇ ಸಂದರ್ಭದಲ್ಲಿ ವಿಧಾನಪರಿಷತ್‌ ಸದಸ್ಯ ದೇವೇಗೌಡ, ಜಿಪಂ ಅಧ್ಯಕ್ಷ ಅಶೋಕ್‌, ಬಮೂಲ್‌ ನಿದೇರ್ಶಕ ನರಸಿಂಹಮೂರ್ತಿ, ಪೂಜಾರಿ ಪಾಳ್ಯದ ಕೃಷ್ಣಮೂರ್ತಿ, ಜೆಡಿಎಸ್‌ ಅಧ್ಯಕ್ಷ ಪೊಲೀಸ್‌ ರಾಮಣ್ಣ, ಜಿಪಂ ಸದಸ್ಯ ನಾಯಕನ ಜವಹರ್‌, ಚಿಕ್ಕಣ್ಣ, ಹಾಸ್ಯ ನಾಗರಾಜು ಹಾಗೂ ವಿವಿಧ ಇಲಾಖೆಯ ಅಧಿಕಾರಿಗಳು ಭಾಗವಹಿಸಿದ್ದರು.


ವಸತಿಗಾಗಿ ರೈತ ಮಹಿಳೆಯರ ಮನವಿ
ಡಿಸಿಎಂ ಹುಟ್ಟೂರಿಗೆ ಬರುತ್ತಿದ್ದಂತೆ ಹುಟ್ಟೂರಿನ ರೈತ ಮಹಿಳೆಯರು ಆರತಿ ಬೆಳಗಿ ಆನಂತರ ವಸತಿ ಯೋಜನೆಯಡಿ ವಸತಿ ಮನೆ ನಿರ್ಮಿಸಲು ಸಹಕರಿಸಿ ಎಂಬ ಬೇಡಿಕೆ ಮುಂದಿಟ್ಟರು. ಇದಕ್ಕೆ ಆತ್ಮೀಯವಾಗಿ ಸ್ಪಂದಿಸಿದ ಅವರು, ಹುಟ್ಟೂರಿನ ಜನರು ಪ್ರೀತಿಯಿಂದ ತಂದಿದ್ದ ಎಳನೀರನ್ನು ಕುಡಿದು ಕಾಮಗಾರಿ ಶಂಕುಸ್ಥಾಪನೆಗೆ ಹೊರಟಿದ್ದು ವಿಶೇಷವಾಗಿತ್ತು.

"ಡಿಸಿಎಂ ಅವರ ಕೈಯಿಂದಲೇ ಅಭಿವೃದ್ಧಿ ಕಾಮಗಾರಿಗಳಿಗೆ ಶಂಕುಸ್ಥಾಪನೆ ನೆರವೇರಿಸಿದ್ದೇವೆ. ರಾಮನಗರ ಜಿಲ್ಲೆ ಹಾಗೂ ಮಾಗಡಿ ತಾಲೂಕಿನ ಬಗ್ಗೆ ಅತೀವ ಕಾಳಜಿ ಹೊಂದಿರುವ ಡಿಸಿಎಂ ಈ ಭಾಗದಲ್ಲಿ ಕೈಗಾರೀಕರಣ ಆರಂಭಿಸಲು ಅನುಮತಿ ನೀಡಿ ಯುವಕರಿಗೆ ಉದ್ಯೋಗ ಕೊಡಿಸಬೇಕು."
-ಎ. ಮಂಜುನಾಥ್‌, ಶಾಸಕರು, ಮಾಗಡಿ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ